ಹಿಂದೂ ದೇವರುಗಳನ್ನು ಅಶ್ಲೀಲವಾಗಿ ನಿಂದಿಸುತ್ತಿದ್ದ ಮಾಂತ್ರಿಕ ಬಾಬಾನಿಗೆ ಹಿಗ್ಗಾಮುಗ್ಗಾ ಗೂಸಾ !

12:45 PM, Friday, July 16th, 2021
Share
1 Star2 Stars3 Stars4 Stars5 Stars
(1 rating, 1 votes)
Loading...

Ashif Babaಗದಗ:  ಗಂಗಿಮಡಿ ಆಶ್ರಯ ಕಾಲೋನಿಯಲ್ಲಿ ಮಾಂತ್ರಿಕ ಬಾಬಾ ಅಲಿಯಾಸ್ ಆಸೀಫ್ ಜಾಗಿರದಾರ್ ಎಂಬವನಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಬಾಬಾ ಆಸೀಫ್, ಎಸ್ ಎಂ.ಕೃಷ್ಣಾ ನಗರದಲ್ಲಿ ತನ್ನ ಪತ್ನಿ ಮನೆಯಲ್ಲಿಯೇ ಇದ್ದು ಕಷ್ಟಪಟ್ಟು ದುಡಿಯದೇ ಆರಾಮಾಗಿ ಹಣ ಸಂಪಾದನೆ ಮಾಡಬೇಕೆಂದು ಪ್ಲಾನ್ ಹಾಕಿದ್ದ ಆಸೀಫ್, ದೇವರ ಹೆಸರಲ್ಲಿ ಮಾಟ, ಮಂತ್ರ, ತಂತ್ರಗಳನ್ನು ಮಾಡಿಕೊಡುತ್ತಿದ್ದನು.

ವಿಜಯಪುರ ಜಿಲ್ಲೆಯವನಾಗಿದ್ದ ಬಾಬಾ ಎಸ್ ಎಂ.ಕೃಷ್ಣಾ ನಗರದಲ್ಲಿ ದೇವರ ಹೆಸರಲ್ಲಿ ಪವಾಡ ಮಾಡುತ್ತಿದ್ದ , ಕುದಿಯೋ ಎಣ್ಣೆ ಹಾಗೂ ಸುಡುವ ತುಪ್ಪದಲ್ಲಿ ಕೈ ಹಾಕುವುದು, ಅದರಿಂದ ಬೊಂಡಾ ಬಜ್ಜಿ ತೆಗೆಯುವುದು, ಹೀಗೆ ದೇವರ ಪವಾಡವೆಂಬಂತೆ ಜನರಿಗೆ ಮಂಕುಬೂದಿ ಎರಚುತ್ತಿದ್ದನು. ಮೈಮೇಲೆ ದೇವರು ಬಂದಂತೆ ನಟಿಸಿ ಜನರಲ್ಲಿ ನಂಬಿಕೆ ಹುಟ್ಟಿಸಿ ಮನಬಂದಂತೆ ಹಣ ಲೂಟಿ ಮಾಡುತ್ತಿದ್ದ. ಹಿಂದೂ ದೇವರುಗಳನ್ನು ಅಶ್ಲೀಲವಾಗಿ ನಿಂದಿಸುತ್ತಿದ್ದನು. ಅಲ್ಲದೇ ಸಮಸ್ಯೆ ಹೊತ್ತು ಬಂದ ಸುಂದರ ಮಹಿಳೆಯರನ್ನು ಲೈಂಗಿಕತೆಗೆ ಬಳಸಿಕೊಳ್ಳುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.

Ashif ಬಾಬಾನ ಮೋಸದ ಪವಾಡ ಬಯಲಾಗುತ್ತಿದ್ದಂತೆ, ಆಕ್ರೋಶಗೊಂಡ ಜನರು ಆತನಿಗೆ ಹಿಗ್ಗಾಮುಗ್ಗ ಗೂಸಾ ಕೊಟ್ಟು ಸ್ಥಲೀಯ ಪೊಲಿಸರಿಗೆ ಒಪ್ಪಿಸಿದ್ದಾರೆ. ಡೋಂಗಿ ಬಾಬಾನಿಗೆ ಮೋಸ ಹೋದ ಜನರು ಮುಖಮೂತಿ ನೋಡದೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಡೋಂಗಿ ಬಾಬಾನಿಗೆ ಮೋಸ ಹೋದ ಓರ್ವ ಮಹಿಳೆಯಂತೂ ಬಾಬಾನಿಗೆ ಮನಸೋ ಇಚ್ಚೇ ಗೂಸಾ ಕೊಟ್ಟಿದ್ದಾಳೆ. ಇದೀಗ ಆರೋಪಿಯನ್ನು ಗದಗ ಗ್ರಾಮೀಣ ಪೊಲೀಸರಿಗೆ ಒಪ್ಪಿಸಿದ್ದು, ತನಿಖೆ ಮಾಡಿ ಅಸಲಿ ಮುಖ ಬಯಲು ಮಾಡಬೇಕಾಗಿದೆ. ಮಾಟ, ಮಂತ್ರ, ತಂತ್ರ ಎಂದು ಮೋಸ ಮಾಡುವವರು ಇನ್ನು ಮುಂದಾದ್ರೂ ಎಚ್ಚೆತ್ತುಕೊಳ್ಳಬೇಕಿದೆ.

ಹೊಡೆತಕ್ಕೆ ಡೋಂಗಿ ಬಾಬಾ ಆಸೀಫ್, ನಾನು ಮಾಡಿದ್ದು ತಪ್ಪಾಗಿದೆ, ನಾನು ಮಾಡಿದ್ದೆಲ್ಲ ಮೋಸ, ತಪ್ಪಾಗಿದೆ ಕ್ಷಮಿಸಿ, ನನ್ನನ್ನು ಬಿಟ್ಟುಬಿಡಿ ಎಂದು ಅದೆಷ್ಟೇ ಕೈ ಕಾಲು ಹಿಡಿದು ಬೇಡಿಕೊಂಡರೂ, ಜನ ಮಾತ್ರ ಡೋಂಗಿಯ ಚಳಿ ಬಿಡಿಸಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English