ಮಂಗಳೂರು : ನದಿ ನೀರಲ್ಲಿ ಬಲೆ ಹರಡಿ ಮೀನು ಹಿಡಿಯುತ್ತಿದ್ದ ಮೀನುಗಾರರೊಬ್ಬರು ಮುಳುಗಿ ಮೃತಪಟ್ಟ ಘಟನೆ ನಗರದ ಅಳಿವೆಬಾಗಿಲು ನದಿ ಸಮೀಪ ನಡೆದಿದೆ.
ತೋಟಬೆಂಗ್ರೆ ನಿವಾಸಿ ಜಯ ಪುತ್ರನ್ (55) ಮೃತ ಮೀನುಗಾರ ಎಂದು ಗುರುತಿಸಲಾಗಿದೆ.
ಜಯ ಪುತ್ರನ್ ಮೀನು ಹಿಡಿಯುತ್ತಿದ್ದ ವೇಳೆ ಗಾಳಿಯೊಂದಿಗೆ ಭಾರೀ ಮಳೆ ಸುರಿದಿದೆ. ಈ ವೇಳೆ ಆಕಸ್ಮಿಕವಾಗಿ ಮೀನು ಹಿಡಿಯುವ ಬಲೆ ಕಾಲಿಗೆ ಸಿಲುಕಿದ್ದರಿಂದ ಈಜಲಾಗದೇ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ತುಂಬಾ ಹೊತ್ತಾದರೂ ಮನೆಗೆ ಬಾರದೇ ಇದ್ದಾಗ ಆತಂಕಗೊಂಡ ಮನೆಮಂದಿ ಹುಡುಕಾಡಿದಾಗ ಕಸಬ ಬೆಂಗ್ರೆ ಸಮೀಪ ಜಯ ಅವರ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English