ಮಂಗಳೂರು : ನಗರದ ಇಂದಿರಾ ನರ್ಸಿಂಗ್ ಕಾಲೇಜಿನಲ್ಲಿ ಜೂನಿಯರ್ ವಿದ್ಯಾರ್ಥಿಯೊರ್ವನ ಮೇಲೆ ರ್‍ಯಾಗಿಂಗ್ ನಡೆಸಿದ್ದು, ಈ ಆರೋಪದ ಮೇಲೆ ಶುಕ್ರವಾರ ನ 6 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.
ಈ ಕುರಿತು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ನಗರದಲ್ಲಿ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಬೇರೆ ಬೇರೆ ಊರುಗಳಿಂದ ಬಂದು ಶಿಕ್ಷಣ ಪಡೆಯುತ್ತಿದ್ದಾರೆ ಹಾಗಾಗಿ ಇಲ್ಲಿ ರ್‍ಯಾಗಿಂಗ್ ನಡೆಸಲು ಯಾವುದೇ ರೀತಿಯ ಅವಕಾಶಗಳನ್ನು ಕೊಡುವುದಿಲ್ಲ ಎಂದು ಹೇಳಿದ್ದಾರೆ.
ಜು.14 ರ ರಾತ್ರಿ 8 ಗಂಟೆಗೆ ದೂರದಾರ ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ಊಟಕ್ಕೆಂದು ಫಲ್ನೀರ್‌ನ ಫಿಲ್ ಫಿಲ್ ಹೋಟೆಲ್ ತೆರಳಿದ್ದಾಗ ಅಲ್ಲಿ ವಿದ್ಯಾರ್ಥಿಯ ಸೀನಿಯರ್ ಗಳು ಜೂನಿಯರ್ ಆದ ಸಂತ್ರಸ್ತ ಮ್ಯಾನುಯಲ್‌ನ್ನು ಉದ್ದೇಶಿಸಿ, ‘ಏನು ಮೈರ್’ ಮುಖ ನೋಡುತ್ತಿಯಾ, ನೀವು ಜೂನಿಯರ್‌ಗಳು, ನಾವು ಬರುವಾಗ ಎದ್ದು ನಿಂತು ಗೌರವ ಕೊಡಬೇಕು’ ಎಂದು ರ್‍ಯಾಗಿಂಗ್ ಅಸಭ್ಯ ಭಾಷೆ ಬಳಸಿ ಗದರಿಸಿದ್ದಾರೆ. ಇದಾದ ಬಳಿಕ ರಾತ್ರಿ ವಿದ್ಯಾರ್ಥಿ ಉಳಿದುಕೊಂಡಿದ್ದ ಅತ್ತಾವರದ ಕಿಂಗ್ಸ್ ಕೋರ್ಟ್ ಅಪಾರ್ಟ್ ಮೆಂಟ್ ಮಾರಕಾಯುಧಗಳೊಂದಿಗೆ ಅಕ್ರಮ ಪ್ರವೇಶ ಮಾಡಿ, ಗದರಿಸಿ ಅರೆನಗ್ನಗೊಳಿಸಿ ಅಸಭ್ಯ ಭಾಷೆ ಬಳಸಿ ರ‍್ಯಾಗಿಂಗ್ ಮಾಡಿ ಹಲ್ಲೆ ನಡೆಸಿದ್ದು, ಇದಲ್ಲದೆ ಲಿಮ್ಸ್ ಎಂಬಾತ ಕಾಲೇಜಿನಲ್ಲಿ ನಮ್ಮನ್ನು ಕಂಡ ಕೂಡಲೇ ತಲೆ ಬಗ್ಗಿಸಬೇಕು ಇಲ್ಲವಾದರೆ ಕೊಲೆ ಮಾಡುವುದಾಗಿ ಜೀವಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿ ದೂರಿನಲ್ಲಿ ತಿಳಿಸಿದ್ದು, ಈ ಬಗ್ಗೆ ಕ್ರಮ ಜರುಗಿಸಿರುವುದಾಗಿ ತಿಳಿಸಿದರು.
Click this button or press Ctrl+G to toggle between Kannada and English