ಮಂಗಳೂರು: ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ), ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್ತು (ನ್ಯಾಕ್) ಗೆ ಸಲ್ಲಿಸಬೇಕಾದ ಸ್ವ-ಅಧ್ಯಯನ ವರದಿ ಕುರಿತಂತೆ ಪ್ರಾಧ್ಯಾಪಕರಿಗಾಗಿ ಒಂದು ದಿನದ ಕಾರ್ಯಾಗಾರವನ್ನು ರವೀಂದ್ರ ಕಲಾಭವನದಲ್ಲಿ ಶುಕ್ರವಾರ ಆಯೋಜಿಸಿತ್ತು.
ಪ್ರಾಂಶುಪಾಲೆ ಡಾ. ಅನಸೂಯ ರೈ ಕಾರ್ಯಕ್ರಮ ಉದ್ಘಾಟಿಸಿ, ಕಾಲೇಜು ನ್ಯಾಕ್ ಮಾನ್ಯತೆ ಪಡೆಯಲು ಶ್ರಮಿಸಿದವರನ್ನು ನೆನಪಿಸಿಕೊಂಡರಲ್ಲದೆ, ಪಡೆದಿರುವ ʼಎʼ ಶ್ರೇಣಿಯನ್ನು ಉತ್ತಮಪಡಿಸಿಕೊಳ್ಳುವ ಪ್ರಯತ್ನ ನಡೆದಿದೆ, ಎಂದರು. ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಕಚೇರಿಯ ನ್ಯಾಕ್ ವಿಶೇಷಾಧಿಕಾರಿಗಳಾದ ಡಾ. ಜಯಕರ ಎಂ. ಭಂಡಾರಿ ಮತ್ತು ದೇವಿ ಪ್ರಸಾದ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವರದಿಯಲ್ಲಿ ಪಾಲಿಸಬೇಕಾದ ವಿವಿಧ ಮಾನದಂಡಗಳ ಕುರಿತು ಸವಿವರ ಮಾಹಿತಿ ನೀಡಿದರು. ನ್ಯಾಕ್ ಈಗ ಗುಣಮಟ್ಟ ಆಧಾರಿತ, ಅತ್ಯಂತ ವಸ್ತುನಿಷ್ಠ ಮತ್ತು ಪಾರದರ್ಶಕ ವರದಿ ಬಯಸುತ್ತದೆ. ಮಾನವ ಹಸ್ತಕ್ಷೇಪಕ್ಕೆ ಕನಿಷ್ಠ ಅವಕಾಶವಿದೆ. ನ್ಯಾಕ್ ತಂಡದ ಭೇಟಿಗೆ ಮೊದಲೇ 70% ಮೌಲ್ಯಮಾಪನ ಮುಗಿದಿರುತ್ತದೆ, ಎಂದರು.
ಕಾಲೇಜಿನ ನ್ಯಾಕ್ ಸಂಯೋಜಕಿ ಡಾ. ಸುಧಾ ಎನ್. ವೈದ್ಯ, ಐಕ್ಯೂಎಸಿ ಸಂಯೋಜಕ ಡಾ. ಸುರೇಶ್ ಸೇರಿದಂತೆ ಕಾಲೇಜಿನ ಎಲ್ಲಾ ಬೋಧಕ ಸಿಬ್ಬಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಇತಿಹಾಸ ವಿಭಾಗದ ಡಾ. ಕುಮಾರಸ್ವಾಮಿ ಎಂ ಕಾರ್ಯಕ್ರಮ ನಿರೂಪಿಸಿದರು, ಭೌತಶಾಸ್ತ್ರ ವಿಭಾಗದ ಅರುಣಾ ಕುಮಾರಿ ಪ್ರಾರ್ಥನೆ ಸಲ್ಲಿಸಿದರು.
Click this button or press Ctrl+G to toggle between Kannada and English