ಎರೆಡಲ ಪನೆರೆ ಪೋವೊಡ್ಚಿ, ಪೊಸ ಟೀಮು ಮಲ್ಪುವ : ನಳಿನ್ ಕುಮಾರ್ ಕಟೀಲ್ ಆಡಿಯೋ ವೈರಲ್

11:20 AM, Monday, July 19th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

nalin kumar kateel ಮಂಗಳೂರು  :  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಳಿನ್ ಕುಮಾರ್ ಅವರು, ” ಆ ಧ್ವನಿ ನನ್ನದಲ್ಲ, ಈ ಬಗ್ಗೆ ತನಿಖೆ ನಡೆಸಲು ಈಗಾಗಲೇ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ ಎಂದಿದ್ದಾರೆ.

ಆಡಿಯೋದಲ್ಲಿ ತುಳುವಿನಲ್ಲಿ ‘ಎರೆಡಲ ಪನೆರೆ ಪೋವೊಡ್ಚಿ.  ಈಶ್ವರಪ್ಪ , ಜಗದೀಶ್ ಶೆಟ್ಟರ್ ಟೀಮುನೇ ದೆಪ್ಪುವ, ಪೊಸ ಟೀಮು ಮಲ್ಪುವ, ಇತ್ತೇ ಪುರ ನಮ್ಮ ಕೈಟ್ ಉಂಡು, ಮೂಜಿ ಪುದರ್ ವುಂಡು ಎಂದು ಹೇಳುತ್ತಾರೆ  “ಯಾರಿಗೂ ಹೇಳಬೇಡ. ಈಶ್ವರಪ್ಪ , ಜಗದೀಶ್ ಶೆಟ್ಟರ್ ಟೀಮನ್ನೇ ತೆಗೆಯುತ್ತಾರೆ. ಹೊಸ ತಂಡ ಕಟ್ಟಲಾಗುತ್ತಿದೆ. ಏನೂ ಸಮಸ್ಯೆಯಿಲ್ಲ. ಹೆದರಬೇಡ. ಇನ್ನು ನಮ್ಮ ಕೈಯಲ್ಲೇ… ಮೂರು ಹೆಸರುಗಳಿವೆ, ಯಾರೂ ಬೇಕಾದರೂ ಆಗಬಹುದು” ಎನ್ನುವುದು ಕೇಳಿಸುತ್ತದೆ.

ಮೂರು ಹೆಸರಿದೆ, ಯಾರು ಬೇಕಾದರೂ ಆಗಬಹುದು ಎನ್ನುವುದು ಮುಖ್ಯಮಂತ್ರಿ ಬದಲಾವಣೆಯ ಕುರಿತಾಗಿಯೇ ಎನ್ನುವ ಚರ್ಚೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿದೆ‌. ಮತ್ತೊಂದೆಡೆ ಈಶ್ವರಪ್ಪ, ಜಗದೀಶ್ ಶೆಟ್ಟರ್ ತಂಡವನ್ನು ತೆಗೆಯುತ್ತಾರೆ ಎನ್ನುವ ಮಾತು ಕೂಡ ಕುತೂಹಲಕ್ಕೆ ಕಾರಣವಾಗಿದೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English