ಮಂಗಳೂರು : ಸುಮಾರು 4,000 ವರ್ಷಗಳಿಗೂ ಹಿಂದೆ ಹುಟ್ಟಿದ್ದ ಪ್ರವಾದಿ ಇಬ್ರಾಹಿಂ ಅವರ ತ್ಯಾಗ-ಬಲಿದಾನಗಳ ನೆನಪಿನಲ್ಲಿ ಈ ಹಬ್ಬ ಆಚರಿಸಲಾಗುತ್ತದೆ. ಇಬ್ರಾಹಿಂ ಅವರು ಪ್ರವಾದಿ ಮುಹಮ್ಮದ್ ಅವರಿಗಿಂತ ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ ಹಿಟ್ಟಿದ್ದ ಪ್ರವಾದಿ. ಇಸ್ಲಾಮಿಕ್ ನಂಬಿಕೆಗಳ ಪ್ರಕಾರ, ಪ್ರವಾದಿ ಇಬ್ರಾಹಿಂಗೆ ಒಮ್ಮೆ ಅಲ್ಲಾಹು ಅಗ್ನಿ ಪರೀಕ್ಷೆಯನ್ನು ಮಾಡುತ್ತಾನೆ. ಒಮ್ಮೆ ಅಲ್ಲಾಹು ಪ್ರವಾದಿ ಇಬ್ರಾಹಿಂ ಕನಸಿನಲ್ಲಿ ಕಾಣಿಸಿಕೊಂಡು ಪ್ರವಾದಿ ಬಳಿ ಇರುವ ಯಾವುದಾದರೂ ಆತ್ಯಮೂಲ್ಯವಾದ ವಸ್ತುವೊಂದನ್ನು ತನಗೆ ಬಲಿ ನೀಡಬೇಕು ಎಂದು ತ್ಯಾಗ ಮಾಡಬೇಕೆಂದು ಆದೇಶಿಸುತ್ತಾನೆ. ಇಂತಹದೊಂದು ಕನಸು ಬಿದ್ದ ಬಳಿಕ ಅನೇಕ ದಿನಗಳ ಕಾಲ ಪ್ರವಾದಿ ಇಬ್ರಾಹಿಂಗೆ ಇದು ಭಾದಿಸುತ್ತಿತ್ತು. ಬಳಿಕ ತನ್ನ ಕನಸಿನ ಕುರಿತು ತನ್ನ ಪತ್ನಿಯ ಬಳಿ ಹೇಳಿಕೊಳ್ಳುತ್ತಾರೆ. ಸಾಕಷ್ಟು ಚರ್ಚೆ ಬಳಿಕ ಪ್ರವಾದಿ ಇಬ್ರಾಹಿಂ ಹಾಗೂ ಆತನ ಪತ್ನಿ ಜೊತೆಗೂಡಿ ತಮ್ಮ ಒಬ್ಬನೇ ಮಗನನ್ನು ಅಲ್ಲಾಹು ನಿಗೆ ಬಲಿ ನೀಡಲು ನಿರ್ಧರಿಸುತ್ತಾರೆ. ತಮ್ಮ ಪಾಳಿಗೆ ಇದ್ದ ಏಕೈಕ ಅತ್ಯಮೂಲ್ಯವಾದ ವ್ಯಕ್ತಿಯಾದ ಮಗನನ್ನೇ ತ್ಯಾಗ ಮಾಡಲು ಇಬ್ಬರೂ ನಿರ್ಧಸಿರುತ್ತಾರೆ. ನಂತರ ಇದಕ್ಕೆ ತನ್ನ ಮಗನಾದ ಇಸ್ಮಾಹಿಲ್ ಒಪ್ಪಗೆಯ ಕುರಿತು ಆತನಲ್ಲಿ ಚರ್ಚಿಸುತ್ತಾರೆ. ಅಲ್ಲಾಹು ಗಾಗಿ ಬಲಿಯಾಗಲು ಇಸ್ಮಾಯಿಲ್ ಹಿಂದೆ ಮುಂದೆ ಯೋಚಿಸದೇ ಕೂಡಲೇ ಒಪ್ಪಿಕೊಳ್ಳುತ್ತಾನೆ.
ಕೊನೆಗೆ ಇಬ್ರಾಹಿಂ ತನ್ನ ಮಗನನ್ನು ಬಲಿಕೊಡಲು ಬಲಿಪೀಠದಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಾನೆ. ತನ್ನ ಮಗನ ಕುತ್ತಿಗೆಯ ಭಾಗಕ್ಕೆ ಕತ್ತರಿಸಲು ಮುಂದಾಗುತ್ತಾನೆ ಈ ವೇಳೆ ಅವನಿಗೆ ಅನೇಕ ಅಡೆ-ತಡೆಗಳು ಎದುರಾಗುತ್ತವೆ. ದೇವರ ನೆನೆದು ಭಕ್ತಿಯಿಂದ ಮಗನನ್ನು ತ್ಯಾಗ ಮಾಡಲು ಇಬ್ರಾಹಿಂ ಮುಂದಾಗುತ್ತಾನೆ ಆಗ ಮಗನ ಕುತ್ತಿಗೆಗೆ ಕತ್ತಿ ತರುತ್ತಿದ್ದಂತೆ ಇಸ್ಮಾಯಿಲ್ ಮಾಯವಾಗಿ ಆತನ ಜಾಗದಲ್ಲಿ ಕುರಿಯೊಂದು ಕಾಣಿಸಿಕೊಳ್ಳುತ್ತದೆ. ಅಲ್ಲಾಹನು ಪ್ರವಾದಿ ಇಬ್ರಾಹಿಂರ ಭಕ್ತಿ, ನಂಬಿಕೆ, ವಿಶ್ವಾಸವನ್ನು ಪರೀಕ್ಷಿಸಿದ್ದು ಇದರಲ್ಲಿ ಪ್ರವಾದಿ ಉತ್ತೀರ್ಣರಾಗಿದ್ದಾರೆ. ಹೀಗಾಗಿ ಈ ಹಬ್ಬವನ್ನು ಬಲಿದಾನ, ತ್ಯಾಗದ ಸಂಕೇತವಾಗಿ ಆಚರಿಸಲಾಗುತ್ತದೆ.
ಕಳೆದ ಬಾರಿಯೂ ಕೋವಿಡ್-19 ಹಿನ್ನೆಲೆಯಲ್ಲಿ ಸರಕಾರ ಕೆಲವೊಂದು ನಿರ್ಬಂಧ ಹೇರಿದ್ದರಿಂದ ಹಬ್ಬದ ಸಂಭ್ರಮವಿರಲಿಲ್ಲ. ಆದರೆ ಈ ಬಾರಿ ಹೊಸ ಮಾರ್ಗಸೂಚಿಯನ್ನು ಪಾಲಿಸುವುದರೊಂದಿಗೆ ಮುಸ್ಲಿಮರು ಹಬ್ಬ ಆಚರಿಸಿದರು.
ಕೋವಿಡ್-19 ಹಿನ್ನೆಲೆಯಲ್ಲಿ ಸರಕಾರ ಹೊರಡಿಸಿದ ಹೊಸ ಮಾರ್ಗಸೂಚಿಯಂತೆ ದ.ಕ. ಮತ್ತು ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯಾದ್ಯಂತ ಬೆಳಗ್ಗೆ 6:30ಕ್ಕೆ ಕೆಲವು ಮಸೀದಿಗಳಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಮಾಡಲಾಯಿತು. ಮುಂಜಾನೆ ಎದ್ದು ಹೊಸ ಬಟ್ಟೆಬರೆ ಧರಿಸಿ ‘ಅಲ್ಲಾಹು ಅಕ್ಬರ್’ ಎಂಬ ಘೋಷಣೆ ಮೊಳಗಿಸಿ ಮಸೀದಿಗೆ ತೆರಳಿ ಅಲ್ಲಿ ನಮಾಝ್ ನಿರ್ವಹಿಸಿದ ಬಳಿಕ ದಫನ ಭೂಮಿಗೆ ತೆರಳಿ ಅಗಲಿದ ಕುಟುಂಬದ ಸದಸ್ಯರಿಗೆ ವಿಶೇಷ ಪ್ರಾರ್ಥನೆ, ಕುಟುಂಬದ, ಸ್ನೇಹಿತರ ಮನೆಗೆ ಸೌಹಾರ್ದ ಭೇಟಿ ನೀಡುವ ದೃಶ್ಯ ಕಂಡು ಬಂತು.
ಮಸೀದಿಗೆ ಪ್ರವೇಶಿಸುವ ಮುನ್ನ ಎಲ್ಲರ ದೇಹದ ತಾಪಮಾನ ತಪಾಸಣೆ ಮಾಡಲಾಗಿತ್ತು. ಕೈಗಳನ್ನು ಸ್ಯಾನಿಟೈಝರ್‌ನಿಂದ ಶುಚಿಗೊಳಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಮಾಸ್ಕನ್ನು ಧರಿಸಿದ್ದರು. ನಮಾಝ್ ವೇಳೆ ಸುರಕ್ಷಿತ ಅಂತರವನ್ನು ಕಾಪಾಡಲಾಗಿತ್ತು. ಮನೆಯಿಂದ ಕೊಂಡೊಯ್ದ ಮುಸಲ್ಲಾ ಹಾಸಿ ನಮಾಝ್ ನಿರ್ವಹಿಸಲಾಯಿತು. ಹಸ್ತಲಾಘವ ಮತ್ತು ಆಲಿಂಗನಕ್ಕೆ ಅವಕಾಶವಿರಲಿಲ್ಲ. 65 ವರ್ಷ ಪ್ರಾಯ ಮೇಲ್ಪಟ್ಟವರು ಮತ್ತು 10 ವರ್ಷ ಕಡಿಮೆ ವಯಸ್ಸಿನ ಮಕ್ಕಳು ಮಸೀದಿಗೆ ಪ್ರವೇಶಿರಲಿಲ್ಲ.
ನಗರದ ಬಾವುಟಗುಡ್ಡೆಯ ಈದ್ಗಾ ಜುಮಾ ಮಸೀದಿಯಲ್ಲಿ ಖತೀಬ್ ಸ್ವದಕತುಲ್ಲಾ ನದ್ವಿ ಮತ್ತು ಮಂಗಳೂರು ಬಂದರ್‌ನ ಝೀನತ್ ಬಕ್ಷ್ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಖತೀಬ್ ಅಲ್‌ಹಾಜ್ ಅಬುಲ್ ಅಕ್ರಮ್ ಮುಹಮ್ಮದ್ ಬಾಖವಿ ಹಾಗೂ ಉಳ್ಳಾಲ ಕೇಂದ್ರ ಜುಮಾ ಮಸೀದಿಯಲ್ಲಿ ಖತೀಬ್ ಅನ್ವರ್ ಅಲಿ ದಾರಿಮಿಯ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು.
ಈ ಬಾರಿ ಈದ್ಗಾದಲ್ಲಿ ಸ್ಥಳೀಯರಷ್ಟೇ ನಮಾಝ್ ನಿರ್ವಹಿಸಿದರು. ನಗರದ ಕುದ್ರೋಳಿ ಜಾಮಿಯಾ ಮಸ್ಜಿದ್, ಜೋಡುಪಳ್ಳಿ ಮಸ್ಜಿದ್, ನಡುಪಳ್ಳಿ ಮಸ್ಜಿದ್, ಮೊಯ್ದೀನ್ ಮಸ್ಜಿದ್, ಕಂಡತ್‌ಪಳ್ಳಿ ಮಸ್ಜಿದ್ ಮತ್ತಿತರ ಎಲ್ಲಾ ಮಸೀದಿಗಳಲ್ಲಿ ಈದ್ ನಮಾಝ್ ನಿರ್ವಹಿಸಲಾಯಿತು.
Click this button or press Ctrl+G to toggle between Kannada and English