ಒಕ್ಕಲಿಗರ ಸರ್ವತೋಮುಖ ಏಳಿಗೆಗೆ ನೆರವಾಗಲು ಅಭಿವೃದ್ಧಿ ನಿಗಮ: ಕಂದಾಯ ಸಚಿವ ಆರ್ ಅಶೋಕ

8:47 PM, Wednesday, July 21st, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Okkaliga welfare ಬೆಂಗಳೂರು  : ಕಂದಾಯ ಸಚಿವ ಆರ್ ಅಶೋಕ ಮತ್ತು ಹೊಸದಾಗಿ ನೇಮಕಗೊಂಡ ಒಕ್ಕಲಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ ಕೃಷ್ಣಪ್ಪ ಅವರು ಪರಮಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ, “ಒಕ್ಕಲಿಗ ಉಪ ಪಂಗಡಗಳ ಕಲ್ಯಾಣಕ್ಕಾಗಿ ಒಕ್ಕಲಿಗ ಅಭಿವೃದ್ಧಿ ನಿಗಮವನ್ನು ರಚಿಸುವಂತೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದರು. ಅವರ ಸಲಹೆಯನ್ನು ಪರಿಗಣಿಸಿ ಮುಖ್ಯಮಂತ್ರಿಗಳು ನಿಗಮವನ್ನು ಸ್ಥಾಪಿಸಿ ಈಗಾಗಲೇ 500 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಹಂಚಿಕೆ ಮಾಡಿದ್ದಾರೆ. ಮುಂದೆಯೂ ಸಹ ಎಲ್ಲ ರೀತಿಯ ನೆರವನ್ನು ನೀಡುವದಾಗಿ ಭರವಸೆ ನೀಡಿದ್ದಾರೆ” ಎಂದು ಹೇಳಿದರು.

“ಬೆಂಗಳೂರು ದಕ್ಷಿಣ ಶಾಸಕ ಎಂ.ಕೃಷ್ಣಪ್ಪ ಅವರನ್ನು ನಿಗಮದ ಮೊದಲ ಅಧ್ಯಕ್ಷರನ್ನಾಗಿ ಮಾಡುವ ನನ್ನ ಮನವಿಯನ್ನು ಪರಿಗಣಿಸಿದ್ದಕ್ಕಾಗಿ ನಾನು ಸಿಎಂಗೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಆರ್ ಅಶೋಕ ಹೇಳಿದರು. ಈ ಸಂದರ್ಭದಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಂ ಗೌಡ ಉಪಸ್ಥಿತರಿದ್ದರು.

ದಿನಸಿ ಮತ್ತು ಟೂಲ್ ಕಿಟ್ ವಿತರಣೆ:

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕದಿರೇನಹಳ್ಳಿ ವೃತ್ತದಲ್ಲಿ ಕೋವಿಡ್ ನಿಂದ ತೀವ್ರವಾಗಿ ತೊಂದರೆಗೊಳಗಾದ ಅಸಂಘಟಿತ ವಲಯದ ಕಾರ್ಮಿಕರಿಗೆ ಆರ್ ಅಶೋಕ ದಿನಸಿ ಮತ್ತು ಟೂಲ್ ಕಿಟ್‍ಗಳನ್ನು ವಿತರಿಸಿದರು. ನಂತರ ಮುನೇಶ್ವರ ದೇವಸ್ಥಾನದಲ್ಲಿ ನಡೆದ ಏಕಾದಶಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಬಿಜೆಪಿ ಮುಖಂಡರಾದ ಎಲ್ ಶ್ರೀನಿವಾಸ್, ಕಬ್ಬಾಳು ಉಮೇಶ್ ಮತ್ತು ಎಚ್ ಸುರೇಶ್ ಉಪಸ್ಥಿತರಿದ್ದರು.

Okkaliga welfare

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English