ಮಂಗಳೂರು : ದೃಷ್ಟಿಮಾಂದ್ಯ ಮಕ್ಕಳ ಜೀವನಕ್ಕೊಂದು ದಾರಿದೀಪವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಏಕಮಾತ್ರ ಶಿಕ್ಷಣ ಸಂಸ್ಥೆಯಾದ ರೋಮನ್ ಮತ್ತು ಕ್ಯಾಥರಿನ್ ಲೋಬೊ ದೃಷ್ಟಿಮಾಂದ್ಯ ಮಕ್ಕಳ ವಸತಿಯುತ ಶಾಲೆಯು (ಮಂಗಳೂರಿನ ಸೇವಾ ಭಾರತಿಯ ಅಂಗ ಸಂಸ್ಥೆ) ಕಳೆದ 11 ವರ್ಷಗಳಿಂದ ತೊಡಗಿಸಿಕೊಂಡಿದೆ. ಈವರೆಗೆ 30ಕ್ಕೂ ಹೆಚ್ಚು ದೃಷ್ಟಿಮಾಂದ್ಯ ಮಕ್ಕಳು ಈ ವಿಶೇಷ ವಿದ್ಯಾ ಸಂಸ್ಥೆಯಲ್ಲಿ 10ನೇ ತರಗತಿಯನ್ನು ಪೂರೈಸಿ, ಹೆಚ್ಚಿನ ಶಿಕ್ಷಣವನ್ನು ಮುಂದುವರಿಸಿದ್ದಾರೆ.
2021-22 ರ ಶೈಕ್ಷಣಿಕ ವರ್ಷಕ್ಕೆ, 5 ರಿಂದ 16 ವರ್ಷದೊಳಗಿನ ದೃಷ್ಟಿಮಾಂದ್ಯ ಮಕ್ಕಳಿಗೆ, 1 ರಿಂದ 10ನೇ ತರಗತಿಗಳಿಗೆ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇಲ್ಲಿ ದೃಷ್ಟಿಮಾಂದ್ಯ ಮಕ್ಕಳಿಗೆ ಇಂಗ್ಲೀಷ್ ಮಾಧ್ಯಮದಲ್ಲಿ ಬೈಲ್ ಲಿಪಿಯೊಂದಿಗೆ ಕರ್ನಾಟಕ ಸರ್ಕಾರದ ಪಠ್ಯಕ್ರಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೇ ಕಂಪ್ಯೂಟರ್ ತರಬೇತಿ, ಕರಕುಶಲ ವಸ್ತುಗಳ ತಯಾರಿಕೆ, ಸಂಗೀತ, ದೈನಂದಿನ ಚಟುವಟಿಕೆಗಳ ನಿರ್ವಹಣೆ ಮತ್ತು ಚಲನವಲನ ಕೌಶಲ್ಯಗಳನ್ನು ಕಲಿಸಿಕೊಡಲಾಗುವುದು. ಶಿಕ್ಷಣ, ವಸತಿ, ಊಟೋಪಚಾರಗಳನ್ನೂ ಉಚಿತವಾಗಿ ನೀಡಲಾಗುವುದು. ವಸತಿರಹಿತ ಶಿಕ್ಷಣಕ್ಕೂ ಅವಕಾಶವಿದೆ. ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ.
ಆಸಕ್ತ ದೃಷ್ಟಿಮಾಂದ್ಯ ಮಕ್ಕಳ ಪೋಷಕರು ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಬೇಕಾಗಿ ಕೋರುತ್ತೇವೆ. ದೂರವಾಣಿ ಸುಧೀರ್ ಬಾಳಿಗಾ -9480433551
ವಿನೋದ್ ಶೆಣೈ – 9880543918, ಗಜಾನನ ಪೈ- 9448454184.
(ತಮ್ಮ ಸುತ್ತಮುತ್ತ ದೃಷ್ಟಿಮಾಂದ್ಯ ಮಕ್ಕಳಿದ್ದಲ್ಲಿ ಈ ಶಾಲೆಗೆ ದಾಖಲಿಸಿ, ಈ ಸಂದೇಶವನ್ನು ತಮ್ಮ ಪರಿಚಿತರಿಗೆ ಕಳುಹಿಸಿ ದೃಷ್ಟಿಮಾಂದ್ಯ ಮಕ್ಕಳ ಬಾಳಿಗೆ ಬೆಳಕಾಗಿರಿ) ರೋಮನ್ ಕ್ಯಾಥರಿನ್ ಲೋಬೊ ದೃಷ್ಟಿಮಾಂದ್ಯ ಮಕ್ಕಳ ವಸತಿಯುತ ಶಾಲೆ, 3ನೇ ಅಡ್ಡರಸ್ತೆ, ಕೋಟೆಕಣಿ, ಕಾಪಿಕಾಡ್, ಅಂಚೆ: ಬಿಜೈ, ಮಂಗಳೂರು- 575004
Click this button or press Ctrl+G to toggle between Kannada and English