ಕಂಬಳ ಸ್ಪರ್ಧೆಯ ನಿಯಮಗಳಲ್ಲಿ ಹಲವಾರು ಮಾರ್ಪಾಟು, ಕಂಬಳ ಶಿಸ್ತು ಪಾಲನಾ ಸಮಿತಿ ನಿರ್ಧಾರ

4:14 PM, Thursday, July 22nd, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Kambalaಮಂಗಳೂರು  :  ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕಂಬಳ ಶಿಸ್ತು ಪಾಲನಾ ಸಮಿತಿ ಕಂಬಳ ಸ್ಪರ್ಧೆಯಲ್ಲಿ  ಹಲವು ಮಾರ್ಪಾಟುಗಳನ್ನು ಮಾಡಿದೆ.  ಒಬ್ಬ ಓಟಗಾರ ನಿಗೆ ಮೂರು ಜೊತೆ ಕೋಣಗಳನ್ನು ಓಡಿಸಲು ಮಾತ್ರ ಅವಕಾಶ ನೀಡಲಾಗಿದೆ. ಆದರೆ ಒಂದೇ ತಂಡದ ಎರಡು ಜೊತೆಯ ಕೋಣಗಳಿದ್ದರೆ ಮಾತ್ರ 4 ಜೊತೆ ಕೋಣಗಳನ್ನು ಓಡಿಸಬಹುದಾಗಿದೆ. ಇದರಿಂದ ಹೊಸ ಓಟಗಾರರಿಗೆ ಅವಕಾಶ ನೀಡಿದಂತಾಗುತ್ತದೆ ಎಂದು ಸಮಿತಿ ತೀರ್ಮಾನಿಸಿದೆ.

ಕಂಬಳವನ್ನು 24 ಗಂಟೆಯೊಳಗೆ ಮುಗಿಸಲು ಕಂಬಳ ಶಿಸ್ತು ಪಾಲನಾ ಸಮಿತಿ ನಿರ್ಧಾರ ಮಾಡಿದೆ. ಬೆಳಗ್ಗೆ 9 ಗಂಟೆಗೆ ಕಂಬಳ ಆರಂಭ ಮಾಡಿ ಮರುದಿನ ಬೆಳಿಗ್ಗೆ9 ಗಂಟೆಗೆ ಕಂಬಳವನ್ನು ಮುಗಿಸಬೇಕೆಂದು ತಿಳಿಸಿದೆ.

ಕಂಬಳ ಕೋಣಗಳನ್ನು 5 ನಿಮಿಷದ ಒಳಗಾಗಿ ಕಂಬಳದ ಗದ್ದೆಗೆ ತೆರಬೇಕೆಂಬ ನಿಯಮ ಮಾಡಲಾಗಿದೆ. ತಡವಾದರೆ ಆ ತಂಡವನ್ನು ಕೈ ಬಿಟ್ಟು ಮುಂದಿನ ಕೋಣಗಳಿಗೆ ಅವಕಾಶ ನೀಡಲು  ನಿರ್ಧಾರ ಮಾಡಲಾಗಿದೆ.

ಕಂಬಳದ‌ ತೀರ್ಪುಗಾರ ಮದ್ಯಪಾನ ಮಾಡಿ ಬರುವಂತಿಲ್ಲ. ಯಾವುದಾದರೂ ತಂಡ ದ ತಪ್ಪು ಸಾಬೀತಾದರೆ ಒಂದು ವರ್ಷಗಳ‌ ಕಾಲ ಆ ತಂಡವನ್ನು ಕಂಬಳದಿಂದ ಅಮಾನತು ಮಾಡುವ ಕಠಿಣ ನಿರ್ಧಾರವನ್ನು ಕೈಗೊಳ್ಳಲಾಗಿದೆ..ಕಂಬಳ ಓಟಗಾರರು ಮತ್ತು ಕೋಣಗಳ ಯಜಮಾನರು ಕಂಬಳ ಸಮಿತಿಯ ಸದಸ್ಯತ್ವ ಪಡೆಯಬೇಕೆಂಬ ನಿರ್ಧಾರವನ್ನೂ ಮಾಡಲಾಗಿದೆ.  ಕಂಬಳದ ಬಗ್ಗೆ ಯಾವುದಾದರೂ ದೂರುಗಳಿದ್ದರೂ ಜಿಲ್ಲಾ ಕಂಬಳ ಸಮಿತಿಯ ಗಮನಕ್ಕೆ ತರಬೇಕು ಎಂದು ಸಮಿತಿ ಹೇಳಿದೆ.

ಕಂಬಳದಲ್ಲಿ ಕನೆಹಲಗೆ, ಹಗ್ಗದ ಹಿರಿಯ, ಹಗ್ಗದ ಕಿರಿಯ, ನೇಗಿಲು ಕಿರಿಯ, ನೇಗಿಲು ಹಿರಿಯ ಎಂಬ ವಿಧಗಳಿವೆ. ಕಂಬಳ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ,ಕಾಸರಗೋಡು ಜಿಲ್ಲೆಯಲ್ಲೂ ನಡೆಯುತ್ತದೆ. ನವೆಂಬರ್ ಎರಡನೇ ವಾರದಲ್ಲಿ ಕಂಬಳ ಆರಂಭವಾಗುವ ಕಂಬಳ ಎಪ್ರಿಲ್ ತಿಂಗಳಿನವರೆಗೂ ನಡೆಯುತ್ತದೆ.

ದಕ್ಷಿಣ ಕನ್ನಡ,ಉಡುಪಿ,ಮತ್ತು ಕಾಸರಗೋಡು ಜಿಲ್ಲೆಯಲ್ಲೂ ಕಂಬಳ ನಡೆಯುತ್ತದೆ. ಆಧುನಿಕ ಕಂಬಳದಲ್ಲಿ ಹಲವು ನಿಯಮಗಳನ್ನು ಮಾಡಲಾಗಿದೆ. ಕಂಬಳದ ಗದ್ದೆಯಲ್ಲಿ ಕಂಬಳದ ಕೋಣವನ್ನು ಬಿಡುವ ಸಂದರ್ಭದಲ್ಲಿ ಲೇಸರ್ ತಂತ್ರಜ್ಞಾನ ವನ್ನು ಮಾಡಲಾಗಿದೆ. ಕೋಣಗಳನ್ನು ಗುರಿ ತಲುಪುವ ಸಂದರ್ಭದಲ್ಲೂ ಲೇಸರ್ ತಂತ್ರಜ್ಞಾನದ ಮೂಲಕ ತೀರ್ಪು ನೀಡಬೇಕು ಎಂದು ಕಂಬಳ ಸಮಿತಿ ನಿರ್ಧಾರ ಮಾಡಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English