ಪಾರ್ಕಿನ್‍ಸನ್ ರೋಗಿಗಳ ಪ್ರಮಾಣ 2030 ರ ವೇಳೆಗೆ ಹೆಚ್ಚಳ : ಸಚಿವ ಡಾ.ಕೆ.ಸುಧಾಕರ್

2:20 PM, Sunday, July 25th, 2021
Share
1 Star2 Stars3 Stars4 Stars5 Stars
(No Ratings Yet)
Loading...

Sudhakar ಬೆಂಗಳೂರು : ಪಾರ್ಕಿನ್‍ಸನ್ ರೋಗಕ್ಕೆ ಒಳಗಾಗುವವರ ಪ್ರಮಾಣ 2030 ರ ವೇಳೆಗೆ ಶೇ.200-300 ರಷ್ಟು ಹೆಚ್ಚಾಗಲಿದ್ದು, ಈ ದಿಕ್ಕಿನಲ್ಲಿ ಪರಿಹಾರ ಕ್ರಮ ಕೈಗೊಳ್ಳಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಕಿಂಗ್ಸ್ ಕಾಲೇಜ್ ಲಂಡನ್ ಮತ್ತು ಪಾರ್ಕಿನ್‍ಸನ್ಸ್ ರಿಸರ್ಚ್ ಅಲಯನ್ಸ್ ಆಫ್ ಇಂಡಿಯಾ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ದೇಶದಲ್ಲಿ ಒಂದು ಲಕ್ಷ ಜನರಲ್ಲಿ 350-400 ಜನರು ಪಾರ್ಕಿನ್‍ಸನ್ ರೋಗಕ್ಕೆ ಒಳಗಾಗುತ್ತಿದ್ದಾರೆ. ಈ ಪ್ರಮಾಣ 2030 ರ ವೇಳೆಗೆ ಶೇ.200-300 ರಷ್ಟು ಹೆಚ್ಚಲಿದೆ. ಒಟ್ಟು ಜನಸಂಖ್ಯೆಯ ಶೇ.1 ರಷ್ಟು ಜನರು ಈ ರೋಗದಿಂದ ಸಮಸ್ಯೆಗೆ ಒಳಗಾಗಲಿದ್ದಾರೆ. ಕೆಸಿಎಲ್-ಪಿಎಆರ್ ಐ ಕಾರ್ಯಕ್ರಮವು ಪಾರ್ಕಿನ್‍ಸನ್ ರೋಗಕ್ಕೆ ಸಂಬಂಧಿಸಿದ ಸಂಶೋಧನೆಗೆ ನೆರವಾಗಲಿದೆ ಎಂದರು.

ನ್ಯೂರೋ ಡಿಜನರೇಟಿವ್ ಕಾಯಿಲೆಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿರುವುದಕ್ಕೆ ನಿಮ್ಹಾನ್ಸ್ ಗುರುತಿಸಿಕೊಂಡಿದೆ. ಪಾರ್ಕಿನ್‍ಸನ್ ರೋಗಕ್ಕೆ ಸಂಬಂಧಪಟ್ಟಂತೆ ನಿಮ್ಹಾನ್ಸ್ ಪಿಎಆರ್‍ಐ ನ ಇತರೆ ಕೇಂದ್ರಗಳೊಂದಿಗೆ ಸಂಶೋಧನಾ ಕಾರ್ಯಗಳನ್ನು ಕೈಗೊಳ್ಳಲಿದೆ. ಅಕಾಡೆಮಿಕ್ ತರಬೇತಿ ಹಾಗೂ ಸಂಶೋಧನಾ ವಲಯದಲ್ಲಿ ಕೆಸಿಎಲ್-ಪಿಎಆರ್‍ಐ ಜೊತೆ ಕಾರ್ಯನಿರ್ವಹಿಸುವ ಅವಕಾಶಗಳನ್ನು ರಾಜ್ಯ ಸರ್ಕಾರ ಪರಿಶೀಲಿಸಲಿದೆ ಎಂದರು.

Sudhakar ಪಾರ್ಕಿನ್ ಸನ್ ಹಾಗೂ ಇತರೆ ನ್ಯೂರೋ ಡಿಜನರೇಟಿವ್ ರೋಗಕ್ಕೆ ಸಂಬಂಧಿಸಿದಂತೆ ಪ್ರೊ.ರೇ ತಂಡ ಕೈಗೊಂಡ ಸಂಶೋಧನಾ ಚಟುವಟಿಕೆಗಳಿಗೆ ಅಭಿನಂದಿಸುತ್ತೇನೆ. ಎರಡೂ ಸಂಸ್ಥೆಗಳ ಈ ಸಹಯೋಗದ ಕೆಲಸ ಅಕಾಡೆಮಿಕ್ ವೇದಿಕೆ ಸೃಷ್ಟಿಸಲು ಹಾಗೂ ಕೌಶಲ್ಯಯುತ ಸಂಶೋಧಕರನ್ನು ನಿರ್ಮಿಸಲು ಸಹಕಾರಿಯಾಗಲಿದೆ. ಬೆಂಗಳೂರಿನಲ್ಲಿ ತರಬೇತಿ ಕಾಯಾರ್ಗಾರ ಆಯೋಜಿಸಲು ಸರ್ಕಾರ ಸಿದ್ಧವಿದೆ, ಎಂದರು.

ಪಾರ್ಕಿನ್‍ಸನ್ ರೋಗಿಗಳ ಚಿಕಿತ್ಸೆಗೆ ಹಣ ಸಂಗ್ರಹಿಸಲು ಕೆಸಿಎಲ್ ನಲ್ಲಿ ಆಯೋಜಿಸಿದ್ದ ವಾರ್ಷಿಕ ಚಾರಿಟಿ ಕ್ರಿಕೆಟ್ ಪಂದ್ಯದಲ್ಲಿ ಹಿಂದೊಮ್ಮೆ ಭಾಗವಹಿಸಿದ್ದೆ. ಹಾಗೆಯೇ ಕೆಸಿಎಲ್ ನ ಪಾರ್ಕಿನ್‍ಸನ್ ಸೆಂಟರ್ ಆಫ್ ಎಕ್ಸಲೆನ್ಸ್ ಗೂ ಭೇಟಿ ನೀಡಿದ್ದೆ ಎಂದು ಸಚಿವರು ಇದೇ ವೇಳೆ ನೆನಪಿಸಿಕೊಂಡರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English