ಮಂಗಳೂರು: ಬಿಜೆಪಿ ಹಾಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನಿನ್ನೆ ರಾತ್ರೋ ರಾತ್ರಿ ಮಂಗಳೂರಿನಿಂದ ದೆಹಲಿಗೆ ತೆರಳಿದ್ದಾರೆ. ಈ ಬೆಳವಣಿಗೆ ರಾಜಕೀಯದಲ್ಲಿ ಕುತೂಹಲ ಮೂಡಿಸಿದ್ದು, ರಾಜ್ಯದ ಮುಖ್ಯಮಂತ್ರಿಯಾಗುವ ಮುಖಂಡರ ಪಟ್ಟಿಯಲ್ಲಿ ನಳಿನ್ ಕುಮಾರ್ ಕಟೀಲ್ ಹೆಸರು ಇದೆ ಎನ್ನಲಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದ ಬಳಿಕ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ಹೆಚ್ಚುತ್ತಿದ್ದಂತೆ, ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಮಹತ್ವ ಪಡೆದಿದೆ.
ಹೈಕಮಾಂಡ್ ಬಳಿಯ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ನಳಿನ್ ಹೆಸರು ಸೇರ್ಪಡೆಯಾಗಿರುವುದು ಹೊಸ ಬೆಳವಣಿಗೆಯಾಗಿದೆ.
ಪುತ್ತೂರಿನಲ್ಲಿರುವ ಪಾಲ್ತಾಡಿಯ ಕುಂಜಾಡಿ ತರವಾಡು ಮನೆಗೆ ತೆರಳಿ ಕುಟುಂಬ ದೈವಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ನಂತರ ತನ್ನ ತಾಯಿ ಸುಶೀಲಾವತಿ.ಎನ್.ಶೆಟ್ಟಿ ಪಾದ ಮುಟ್ಟಿ ನಮಸ್ಕರಿಸಿ ಆರ್ಶೀವಾದ ಪಡೆದಿದ್ದಾರೆ. ಅವರ ಜಾತಕದಲ್ಲೂ ರಾಜಯೋಗ ಇದೆಯಂತೆ.
ದೆಹಲಿ ಹೈಕಮಾಂಡ್ ಹಿಡಿತವಿರುವ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬಹುದು ಎಂದು ಬಿಜೆಪಿಯ ಮಂಗಳೂರು ಪಾಳಯದಲ್ಲಿ ಚರ್ಚೆ ನಡಿತಾ ಇದೆ.
ಭಾನುವಾರ ನಿನ್ನೆ ಇಡೀ ದಿನ ಮಂಗಳೂರಿನಲ್ಲಿಯೇ ಇದ್ದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಜೆ ವೇಳೆ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರ ಆರೋಗ್ಯ ವಿಚಾರಿಸಿ, ರಾತ್ರಿ ವೇಳೆ ದೆಹಲಿಗೆ ತೆರಳಿದ್ದಾರೆ.
Click this button or press Ctrl+G to toggle between Kannada and English