ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಬಾಧಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಭೇಟಿ

11:38 PM, Thursday, July 29th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Bommai ಅಂಕೋಲಾ : ಮುಖ್ಯಮಂತ್ರಿ ಬಸವರಾಜ.ಎಸ್. ಬೊಮ್ಮಾಯಿ ಅವರು ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ನಡೆಸಿದರು.

ಜುಲೈ 23 ರಂದು ಜಿಲ್ಲೆಯಲ್ಲಿ ಧಾರಕಾರ ಮಳೆಯಾದ ಪರಿಣಾಮ ಪ್ರವಾಹ ಪರಿಸ್ಥಿತಿ ಎದುರಾಗಿತ್ತು ಕಾಳಿ, ಗಂಗಾವಳಿ, ಅಘನಾಶಿನಿ ಸೇರಿದಂತೆ ನದಿಗಳು ಉಕ್ಕಿ ಹರಿದ ಪರಿಣಾಮ ಹಲವಾರು ಮನೆಗಳು .ಹಾನಿಗೊಳಗಾಗಿರುವುದಲ್ಲದೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.

ತಾಲ್ಲೂಕು ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಗಳನ್ನು ಉದ್ಘಾಟಿಸಿದ ಮುಖ್ಯಮಂತ್ರಿಗಳು, ನೆರೆ ಪರಿಹಾರ ವೀಕ್ಷಣೆಗೆ ತೆರಳಿ ಮೊದಲಿಗೆ ಗುಡ್ಡ ಕುಸಿತದಿಂದ ಹಾನಿಗೊಳಗಾದ ಕಳಚೆ ಗ್ರಾಮವನ್ನು ಪರಿಶೀಲಿಸಿದರು.

ರಾಷ್ಟ್ರೀಯ ಹೆದ್ದಾರಿ 63ರ ಅರೆಬೈಲು ಘಟ್ಟದಲ್ಲಿ ಆದ ಗುಡ್ಡ ಕುಸಿತವನ್ನು ವೀಕ್ಷಣೆ ಮಾಡಿ ನಂತರ ಗಂಗಾವಳಿ ನದಿ ಪ್ರವಾಹದಿಂದ ಕೊಚ್ಚಿಹೋಗಿರುವ ಗುಳ್ಳಾಪುರ ಸೇತುವೆಯನ್ನ ವೀಕ್ಷಣೆ ಮಾಡಿ ಯಲ್ಲಾಪುರ ತಾಲೂಕಿನಲ್ಲಿ ಹಾನಿಯಾದ ಕುರಿತು ಮಾಹಿತಿ ಪಡೆದರು.

ನಂತರ ಅಂಕೋಲಾ ತಾಲ್ಲೂಕಿಗೆ ತೆರಳಿದ ಅವರು ತಾಲೂಕಿನ ಶಿರೂರು ಮಂಜುಗುಣಿ ಗ್ರಾಮದಲ್ಲಿ ಗಂಗಾವಳಿ ನದಿಯಿಂದ ಹಾನಿಗೊಳಗಾದಂತಹ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಶಿವರಾಮ ಹೆಬ್ಬಾರ್, ಶಾಸಕರಾದ ರೂಪಾಲಿ ನಾಯ್ಕ್, ಸುನಿಲ್ ನಾಯ್ಕ್, ದಿನಕರ ಶೆಟ್ಟಿ, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಇದ್ದರು.

Dharmasthala-Deepothsava  

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English