ಬೆಂಗಳೂರು : ಮಾಜಿ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಡಿಯೋ ಬಳಿಕ ಮೊದಲ ಬಾರಿ ಅಸಮಾಧಾನ ಹೊರಹಾಕಿದ್ದು. ಇದ್ದರಿಂದ ರಾಜ್ಯಾಧ್ಯಕ್ಷರ ಸ್ಥಾನ ಬದಲಾಗುವ ಮುನ್ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೆಲಸಮಾಡುತ್ತಿಲ್ಲ. ಪಕ್ಷ ಬಲವರ್ಧನೆಗೆ ನಾನೇ ವಾರಕ್ಕೊಂದು ಬಾರಿ ರಾಜ್ಯದ ಪ್ರತೀ ಜಿಲ್ಲೆಗಳಲ್ಲಿ ಸಂಚರಿಸಿ, ಮುಂದಿನ ಚುನಾವಣೆಯಲ್ಲಿ ಪಕ್ಷ ಗೆಲ್ಲಲು ಶ್ರಮವಹಿಸುವುದಾಗಿ ಹೇಳಿದ್ದಾರೆ.
ರಾಜ್ಯಾಧ್ಯಕ್ಷರನ್ನಾಗಿ ಪ್ರಭಲ ಲಿಂಗಾಯತ ನಾಯಕನನ್ನು ನೇಮಿಸುವ ಚಿಂತನೆಯಲ್ಲಿ ಯಡಿಯೂರಪ್ಪ ಬಣ ಸಜ್ಜಾಗಿದೆ. ಆ ಮೂಲಕ ರಾಜ್ಯದಲ್ಲಿ ಲಿಂಗಾಯತ ಮತ್ತು ಒಕ್ಕಲಿಗರ ಮತ ಬ್ಯಾಂಕನ್ನು ಗಟ್ಟಿಗೊಳಿಸುವ ಪ್ಲಾನ್ ನಡೆದಿದೆ ಎನ್ನಲಾಗಿದೆ.
ಅದಕ್ಕಾಗಿ ಕರಾವಳಿಗೆ ಮೂರು ಮಂತ್ರಿ ಸ್ಥಾನಗಳನ್ನು ಬಹುತೇಕ ಫಿಕ್ಫ್ ಮಾಡಲಾಗಿದೆ. ಅದರಲ್ಲಿ ಕುಂದಾಪುರ ಶಾಸಕ ಶ್ರೀನಿವಾಸಶೆಟ್ಟಿ ಹಾಲಾಡಿ, ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ , ಸುಳ್ಯ ಶಾಸಕ ಎಸ್ ಅಂಗಾರ ಹೆಸರುಗಳು ಕೇಳಿ ಬಂದಿದೆ.
Click this button or press Ctrl+G to toggle between Kannada and English