ಮಧು ಬಂಗಾರಪ್ಪ ಸೇರಿ ಜೆಡಿಎಸ್​ನ ಹಲವು ಮುಖಂಡರು ಕಾಂಗ್ರೆಸ್ ಗೆ ಸೇರ್ಪಡೆ

6:11 PM, Friday, July 30th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Madhu Bangarappaಹುಬ್ಬಳ್ಳಿ:  ಹುಬ್ಬಳ್ಳಿಯ ಗೋಕುಲ ಗಾರ್ಡನ್ನಲ್ಲಿ ಶುಕ್ರವಾರ ಮಾಜಿ ಶಾಸಕ ಮಧು ಬಂಗಾರಪ್ಪ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಮಧು ಬಂಗಾರಪ್ಪಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಪಕ್ಷದ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡಿರು.

ಈ ವೇಳೆ ಮಾತನಾಡಿದ ಡಿಕೆಶಿ, ನಾನು ಬಂಗಾರಪ್ಪನವರ ಗರಡಿಯಲ್ಲೇ ಬೆಳೆದಿದ್ದು. ಸುಮಾರು ಹತ್ತು ವರ್ಷಗಳಿಂದ ಗಾಳ ಹಾಕಿದ್ದೆ. ಬಹಳ ದಿನದ ನಂತರ ಬಲೆಗೆ ಮಧು ಬಂಗಾರಪ್ಪ ಬಿದ್ದಿದ್ದಾರೆ. ಮೊದಲೇ ಬಂದಿದ್ರೆ ಈಗಾಗಲೇ ಮಧು ಮಾಜಿ ಸಚಿವರಾಗ್ತಿದ್ರು. ನನ್ನ ರಾಜಕೀಯ ಗುರುಗಳ ಮಗನನ್ನು ನನ್ನ ಅಧ್ಯಕ್ಷತೆಯಲ್ಲಿ ಪಕ್ಷಕ್ಕೆ ಕರೆತಂದಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ನನ್ನ ರಾಜಕೀಯ ಗುರುಗಳ ಮಗನನ್ನ ನನ್ನ ಅಧ್ಯಕ್ಷತೆಯಲ್ಲಿ ಕರೆದುಕೊಂಡು ಬಂದಿದ್ದೇನೆ. ಇವರನ್ನ ಕರೆತಂದಿದ್ದು ನನ್ನ ಭಾಗ್ಯ ಎಂದ ಡಿಕೆಶಿ, ಇವತ್ತು ಕಾಂಗ್ರೆಸ್ ಪಕ್ಷಕ್ಕೆ ಬಹಳಷ್ಟು ಜನ ಸೇರ್ಪಡೆಯಾಗ್ತಿದ್ದಾರೆ. ನಾವು ಮಧು ಬಂಗಾರಪ್ಪ ಅವರನ್ನ ವ್ಯಕ್ತಿಯಾಗಿ ಸೇರಿಸಿಕೊಳ್ಳುತ್ತಿಲ್ಲ. ಒಂದು ಶಕ್ತಿಯಾಗಿ ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ. ಮಧು ಜತೆ ಸೇರ್ಪಡೆಯಾಗುತ್ತಿರೋ ಎಲ್ಲರಿಗೂ ಪಕ್ಷಕ್ಕೆ ಸ್ವಾಗತ ಎಂದು ಡಿಕೆಶಿ ಹೇಳಿದರು.

ಮಧು ಬಂಗಾರಪ್ಪ ಜತೆ ಜೆಡಿಎಸ್ನ ಹಲವು ಮುಖಂಡರು ಕೈ ಸೇರ್ಪಡೆಯಾದರು. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಸಲೀಮ್ ಅಹ್ಮದ್, ಈಶ್ವರ್ ಖಂಡ್ರೆ ಮತ್ತಿತರ ನಾಯಕರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English