ಫೈನಾನ್ಸಿಯರ್ ನನ್ನು ಕಚೇರಿ ಒಳಗಡೇನೇ ಹತ್ಯೆ ಮಾಡಿದ ದುಷ್ಕರ್ಮಿಗಳು

2:55 PM, Saturday, July 31st, 2021
Share
1 Star2 Stars3 Stars4 Stars5 Stars
(No Ratings Yet)
Loading...

Ajendraಕುಂದಾಪುರ:  ಪಾಲುದಾರಿಕೆಯಲ್ಲಿ ಫೈನಾನ್ಸ್‌ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬರನ್ನು ಹಣಕಾಸು ವಿಚಾರಕ್ಕಾಗಿ  ಕೊಲೆ ಮಾಡಿದ ಘಟನೆ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಾಳಾವರದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ಮೃತ ವ್ಯಕ್ತಿಯನ್ನು ಯಡಾಡಿ ಮತ್ಯಾಡಿ ನಿವಾಸಿ ಅಜೇಂದ್ರ ಶೆಟ್ಟಿ (33 ವ) ಎಂದು ಗುರುತಿಸಲಾಗಿದೆ.

ಅಜೇಂದ್ರ ಶೆಟ್ಟಿ ಇವರು ಕಾಳಾವರ ನಂದಿಕೇಶ್ವರ ಕಾಂಪ್ಲೆಕ್ಸ್‌ ನಲ್ಲಿ ಅನೂಪ್‌ ನೊಂದಿಗೆ ಪಾಲುದಾರಿಕೆಯಲ್ಲಿ ಫೈನಾನ್ಸ್‌ ವ್ಯವಹಾರ ನಡೆಸಿಕೊಂಡಿದ್ದರು. ಅಜೇಂದ್ರನು ರಾತ್ರಿ ಮನೆಗೆ ಬಾರದ ಕಾರಣ ಆತನಿಗೆ ಫೋನ್ ಮಾಡಿದಾಗ ಸಂಪರ್ಕಕ್ಕೆ ಸಿಗದ ಕಾರಣ ಸ್ನೇಹಿತರಿಗೆ ಫೊನ್ ಮಾಡಿ ರಾತ್ರಿ ಕಾಳಾವರಕ್ಕೆ ಬಂದು ಫೈನಾನ್ಸ್‌ ನಲ್ಲಿ ನೋಡುವಾಗ ಫೈನಾನ್ಸ್‌ ನ ರೂಮಿನಲ್ಲಿ ಅಜೇಂದ್ರ ಶೆಟ್ಟಿಯ ಕೊಲೆಯಾಗಿತ್ತು.

ಅಜೇಂದ್ರ ಶೆಟ್ಟಿಯನ್ನು  ಪರಿಚಿತರೇ ಕೊಲೆ ಮಾಡಿದ್ದರು ಎನ್ನಲಾಗಿದೆ, ಅನತನ್ನು ಕುಳಿತಲ್ಲಿಂದ ಮೇಲೇಳಲು ಬಿಡದೆ ಅಲ್ಲೇ ಕೊಲೆ ಮಾಡಿದ್ದರು. ಮೃತ ದೇಹ ಕುಳಿತಲ್ಲಿಯೇ ವಾಲಿಕೊಂಡು ಬಿದ್ದಿದ್ದು, ಆತನ ಕೆನ್ನೆಯ ಬಳಿ ಕಡಿದ ಗಾಯವಾಗಿ ರಕ್ತ ಹರಿಯುತ್ತಿತ್ತು.

ಅಜೇಂದ್ರನನ್ನು ಕೋಟೇಶ್ವರ ಎನ್.ಆರ್ ಆಚಾರ್ಯ ಆಸ್ವತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಅದಾಗಲೇ ಅಜೇಂದ್ರ ಮೃತಪಟ್ಟಿದ್ದರು.

murderಪಾಲುದಾರ ಅನೂಪ್‌ನಿಗೆ ಪೋನ್‌ ಮಾಡಿದಾಗ ಆತನ ಪೋನ್‌ ಸ್ವಿಚ್‌ಅಪ್‌ ಆಗಿದೆ. ಪಕ್ಕದ ಅಂಗಡಿಯವರಲ್ಲಿ ವಿಚಾರಿಸಿದಾಗ ಅನೂಪ್‌ ಮತ್ತು ಅಜೇಂದ್ರನು ರಾತ್ರಿ 8.30 ಗಂಟೆ ತನಕ ಪೈನಾನ್ಸ್‌ ನಲ್ಲಿ ಒಟ್ಟಿಗೆ ಇದ್ದರು ಎನ್ನಲಾಗಿದೆ.

ಕೊಲೆಗೆ ನಿಖರ ಕಾರಣ ಏನು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English