ಮಂಗಳೂರು : ತಮ್ಮ 38 ವರ್ಷಗಳ ಅಧ್ಯಾಪನ ವೃತ್ತಿಯಿಂದ ನಿವೃತ್ತರಾದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ನಿಕಟಪೂರ್ವ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ ಅವರಿಗೆ ಮಾತೃ ಸಂಸ್ಥೆಯಾದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯಿಂದ ಶನಿವಾರ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಕಳೆದ ವರ್ಷ ಕುಲಪತಿ ಹುದ್ದೆಯಿಂದ ನಿವೃತ್ತ ಪ್ರೊ. ಸಬಿಹಾ ತಮ್ಮ ಮಾತೃ ಸಂಸ್ಥೆ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಬೋಧನೆ ಮುಂದುವರಿಸಿದ್ದರು. ಕಾರ್ಯಕ್ರಮಕ್ಕೂ ಮೊದಲು ಅಧ್ಯಯನ ಸಂಸ್ಥೆಯ ಪ್ರಸ್ತುತಿಯಲ್ಲಿ ಚಂದ್ರಶೇಖರ್ ಎಂ. ಬಿ ಮತ್ತು ಮುಸ್ತಾಫ ಕೆ ಎಚ್ ತಯಾರಿಸಿದ ‘ಹೋರಾಟದ ಹಾದಿಗೆ ಹಣತೆ ಹಿಡಿದ ಪ್ರೊ. ಸಬಿಹಾ ಭೂಮಿಗೌಡ’ ಎಂಬ ವ್ಯಕ್ತಿಚಿತ್ರ ದೃಶ್ಯಕಗಳನ್ನು ಪ್ರದರ್ಶಿಸಲಾಯಿತು.
ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ. ಅಭಯಕುಮಾರ್. ಕೆ ಅವರು ಮಾತನಾಡಿ, ಪ್ರೊ. ಸಬಿಹಾ ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಬದ್ಧತೆ ನಮಗೆ ಮಾರ್ಗದರ್ಶಕ. ಅದನ್ನು ನಾವುಗಳು ಮುಂದುವರೆಸಿಕೊAಡು ಹೋಗಬೇಕು, ಎಂದರು. ಮುಖ್ಯ ಅತಿಥಿ, ಕಲಾ ನಿಖಾಯದ ಮುಖ್ಯಸ್ಥೆ ಪ್ರೊ. ಕಿಶೋರಿ ನಾಯಕ್ ಅವರು ತಮ್ಮ ಮತ್ತು ಸಬಿಹಾ ಅವರ ಒಡನಾಟದ ನೆನಪುಗಳನ್ನು ಹಂಚಿಕೊಂಡರು.
ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ, ಸಬಿಹಾ ಭೂಮಿಗೌಡ ಅವರ ಸಾಧನೆಯ ಹಾದಿಯ ಕುರಿತ ವಿವರಗಳನ್ನು ವಿಶ್ಲೇಷಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಪ್ರೊ. ಸೋಮಣ್ಣ ಹೊಂಗಳ್ಳಿ ಅವರು ಸಬಿಹಾ ಅವರ ಸಾಹಿತ್ಯ ಸೇವೆಯನ್ನು ಕೊಂಡಾಡಿದರು. ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ಪ್ರೊ. ಸಬಿಹಾ ಅವರು ತಮ್ಮ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಅಧ್ಯಾಪಕರ ನಡುವಿನ ಬಾಂಧವ್ಯ, ಸ್ನೇಹಮಯ ಸನ್ನಿವೇಶ, ವಿಭಾಗದ ಬೆಳವಣಿಗೆ ಇತ್ಯಾದಿಗಳನ್ನು ವಿವರಿಸುತ್ತಾ, ವಿದ್ಯಾರ್ಥಿಗಳನ್ನು ಓದುವ ಹಾದಿಗೆ ಮರಳಬೇಕು, ಎಂಬ ಕರೆಯನ್ನಿತ್ತರು. ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಕಿಶೋರ್ ಕುಮಾರ್ ಸಿ ಕೆ ನಿವೃತ್ತರಿಗೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಚಂದನಾ ಕೆ ಎಸ್ ನಿರೂಪಿಸಿದರು. ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.
Click this button or press Ctrl+G to toggle between Kannada and English