ಮೈಸೂರಿನಿಂದ ಪ್ರವಾಸ ಬಂದಿದ್ದ ಯುವತಿ ಮಲ್ಪೆ ಬೀಚ್‌ನಲ್ಲಿ ನಾಪತ್ತೆ, ಮೂವರ ರಕ್ಷಣೆ

10:48 PM, Sunday, August 1st, 2021
Share
1 Star2 Stars3 Stars4 Stars5 Stars
(5 rating, 1 votes)
Loading...

dejammaಮಲ್ಪೆ : ಮೈಸೂರಿನಿಂದ ಪ್ರವಾಸ ಬಂದಿದ್ದ ಯುವತಿಯೊಬ್ಬಳು ಮಲ್ಪೆ ಬೀಚ್‌ನಲ್ಲಿ ಆಡುತ್ತಿದ್ದ ವೇಳೆ ಸಮುದ್ರ ಪಾಲಾಗಿದ್ದು, ಮೂವರನ್ನು ಸ್ಥಳೀಯರು ರಕ್ಷಿಸಿದ ಘಟನೆ ರವಿವಾರ ನಡೆದಿದೆ.

ಕೊಡಗು ಮೂಲದ ಮೈಸೂರು ನಿವಾಸಿ ದೇಚಮ್ಮ ಯು.ಜೆ.(20) ನಾಪತ್ತೆಯಾಗಿರುವ ಯುವತಿ.

ಈಕೆಯ ಜೊತೆ ಇದ್ದ ಸ್ನೆಹಿತರಾದ ಮೈಸೂರು ವಿಜಯಪುರದ ಎಂ.ಯು.ಶೈನಿ(20), ನವ್ಯ ಮಂದಣ್ಣ (20), ನಿಖಿಲ್ ಗೌಡ (20) ಎಂಬವರನ್ನು ರಕ್ಷಿಸಲಾಗಿದೆ. ಇವರಲ್ಲಿ ತೀವ್ರ ಅಸ್ವಸ್ಥಗೊಂಡ ನಿಖಿಲ್ ಗೌಡ ಉಡುಪಿ ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗಿದ್ದಾರೆ.

ಇವರು  ಮಂಗಳೂರಿಗೆ ಬಂದಿದ್ದು ಮಂಗಳೂರಿನಿಂದ ಜು.31ರಂದು ಮಧ್ಯಾಹ್ನ ಮಲ್ಪೆ ಬೀಚಿಗೆ ಆಗಮಿಸಿ, ಇಲ್ಲಿನ ಬ್ಲೂಬೆ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು. ಇಂದು ಬೆಳಗ್ಗೆ ಇವರೆಲ್ಲರು ಸೇರಿ ಮಲ್ಪೆಬೀಚ್ ಸಮುದ್ರದಲ್ಲಿ ಆಟವಾಡುತ್ತಿದ್ದು ಈ ವೇಳೆ ಸಮುದ್ರದ ನೀರಿನಲ್ಲಿ ತೆರೆಯ ಅಬ್ಬರಕ್ಕೆ ಈ ನಾಲ್ವರು ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋದರು ಎನ್ನಲಾಗಿದೆ.

ಆ ಸಮಯ ಸ್ಥಳದಲ್ಲಿದ್ದ ತಮಿಳುನಾಡು ದೋಣಿಯ ಅನಿಲ್ ಹಾಗೂ ಇತರರು ಸೇರಿ ಮೂವರನ್ನು ರಕ್ಷಿಸಿ ದಡಕ್ಕೆ ಕರೆತಂದರು. ಆ ಪೈಕಿ ದೇಚಮ್ಮ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English