ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಬಾಕಿ ಉಳಿದಿದ್ದ ಪರೀಕ್ಷೆಗಳು ಆರಂಭವಾಗಿದ್ದು, ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇಂದು (ಆಗಸ್ಟ್ 2) 839 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ (ಬೆಳಗ್ಗೆ 456, ಮಧ್ಯಾಹ್ನ 383). ಪ್ರಥಮ ಬಿ.ಎ (36), ಬಿ.ಎಸ್ಸಿ (109), ಬಿ.ಕಾಂ (289), ತೃತೀಯ ಬಿಸಿಎ (12), ಅಂತಿಮ ಬಿ.ಎ (29), ಬಿ.ಎಸ್ಸಿ (127), ಬಿ. ಕಾಂ (224) ಮತ್ತು ಅಂತಿಮ ಬಿಬಿಎಂ (3) ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಕೊರೋನಾ- 19 ದಿಂದ ಪೀಡಿತವಾಗಿರುವ ಕೇರಳದ 157 ಪದವಿ ವಿದ್ಯಾರ್ಥಿಗಳು ಮತ್ತು 36 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯುತ್ತಿದ್ದಾರೆ. ಪದವಿಯಲ್ಲಿ ಬಿ.ಎ ಯ 52, ಬಿ.ಕಾಂ ನ 52 ಮತ್ತು ಬಿ.ಎಸ್ಸಿಯ 53 ವಿದ್ಯಾರ್ಥಿಗಳಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ ಕೇರಳದ 19 ಎಂ.ಕಾಂ, 2 ಎಂ.ಎ (ಹಿಂದಿ), 4 ಎಂ.ಎ (ಇತಿಹಾಸ), 5 ಅರ್ಥಶಾಸ್ತ್ರ ಮತ್ತು 6 ಎಂ.ಎಸ್ಸಿ (ರಸಾಯನ ಶಾಸ್ತ್ರ) ಯ ವಿದ್ಯಾರ್ಥಿಗಳಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ ಕೊವಿಡ್- 19 ಕಾರಣದಿಂದು ನಿಂತು, ಸೋಮವಾರದಿಂದ ಮುಂದುವರಿದಿರುವ ಪದವಿ ಮತ್ತು ಸ್ನಾತಕೋತ್ತರ ಸೆಮಿಸ್ಟರ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ದೊರೆತಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಅಡಿಯಲ್ಲಿ ಮೊದಲ ದಿನ ಮುಂಜಾನೆ 43 ವಿಷಯಗಳಿಗೆ ನಡೆದ ಪರೀಕ್ಷೆಗೆ 23,179 ವಿದ್ಯಾರ್ಥಿಗಳಲ್ಲಿ 21,886 ಮಂದಿ ಹಾಜರಿದ್ದರು. 1,293 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಮಧ್ಯಾಹ್ನ 20 ವಿಷಯಗಳಿಗೆ ನಡೆದ ಪರೀಕ್ಷೆಗೆ 17,193 ವಿದ್ಯಾರ್ಥಿಗಳಲ್ಲಿ 16,691 ಮಂದಿ ಹಾಜರಾಗಿದ್ದರೆ, 502 ವಿದ್ಯಾರ್ಥಿಗಳು ಗೈರಾಗಿದ್ದಾರೆ, ಎಂದು ಮಂಗಳೂರು ವಿವಿ ಮೂಲಗಳು ತಿಳಿಸಿವೆ. ಈಗಾಗಲೇ ವಿಶ್ವವಿದ್ಯಾನಿಲಯ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದೆ. ಜೊತೆಗೆ ಇತ್ತೀಚೆಗೆ ಕೊವಿಡ್‌ನಿಂದ ಬಾಧಿತರಾಗಿದ್ದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೋಣೆಯ ವ್ಯವಸ್ಥೆಯೊಂದಿಗೆ, ಸರ್ಕಾರದ ನಿಯಮಾವಳಿಗೆ ಅನುಗುಣವಾಗಿ ಪರೀಕ್ಷೆ ನಡೆದಿದೆ.
Click this button or press Ctrl+G to toggle between Kannada and English