ದ.ಕ ಜಿಲ್ಲಾ ಕಾಂಗ್ರೆಸ್ ಸ ಮಿತಿಯ ಹಿಂದುಳಿದ ವರ್ಗಗಳ ನೂತನ ಅಧ್ಯಕ್ಷರಾಗಿ ವಿಶ್ವಾಸ್ ಕುಮಾರ್ ದಾಸ್ ಪದಗ್ರಹಣ

5:41 PM, Monday, August 2nd, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Vishwas Kumara Das ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸ ಮಿತಿಯ ಹಿಂದುಳಿದ ವರ್ಗಗಳ ನೂತನ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ಅವರ ಪದಗ್ರಹಣ ಕಾರ್ಯಕ್ರಮ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಗಸ್ಟ್ 1, ರವಿವಾರ ನಡೆಯಿತು.

ಕಾಂಗ್ರೆಸ್ ರಾಜ್ಯ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಉದ್ಘಾಟನೆ ಬಳಿಕ ಮಾತನಾಡಿದ ಅವರು ಸಂವಿಧಾನ ಉಳಿಸುವ ಹೋರಾಟ ಗಟ್ಟಿಯಾದಲ್ಲಿ ಮಾತ್ರ ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರೆಲ್ಲಗೂ ದೇಶದಲ್ಲಿ ಅವಕಾಶಗಳು ದೊರೆಯಲು ಸಾಧ್ಯ. ಅಧಿಕಾರ ಬರುತ್ತೆ, ಹೋಗುತ್ತದೆ. ಆದರೆ, ಈ ದೇಶ, ಸಂವಿಧಾನ ಉಳಿದಲ್ಲಿ ಮಾತ್ರ ಎಲ್ಲರಿಗೂ ಅವಕಾಶ ಎಂದು ರಾಜ್ಯ ಕಾಂಗ್ರೆಸ್ ಮುಖಂಡ ಬಿ‌ ಕೆ ಹರಿಪ್ರಸಾದ್ ಹೇಳಿದರು.

ಹಿಂದುಳಿದ ವರ್ಗಗಳು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಎಲ್ಲರೂ ಒಂದಾದಲ್ಲಿ ಈ ದೇಶದ ಜನಸಂಖ್ಯೆಯ ಶೇ.90ರಷ್ಟು‌ ಭಾಗ ಅವರೇ ಆಗುತ್ತಾರೆ‌. ಹಾಗಾಗಿ, ಎಲ್ಲರೂ ಒಂದಾಗಬೇಕೆಂದು ಕರೆ ನೀಡಿದರು.
Vishwas Kumar Das
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಂವಿಧಾನವನ್ನು ಬದಲಾವಣೆ ಮಾಡುವ ಪ್ರಯತ್ನಗಳಾಗುತ್ತಿವೆ. ಈ ಮೂಲಕ ದಲಿತರು, ಹಿಂದುಳಿದ ವರ್ಗದವರು, ಆದಿವಾಸಿಗಳು, ಅಲ್ಪಸಂಖ್ಯಾತರ ಆತ್ಮಗೌರವ, ಸ್ವಾಭಿಮಾನದ ಪ್ರತೀಕವಾಗಿರುವ ಸಂವಿಧಾನವನ್ನು ಮುಗಿಸಲು ಹುನ್ನಾರ ನಡೆಯುತ್ತಿದೆ. ಜಾತಿ, ಧರ್ಮಗಳ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಬಿಜೆಪಿಗರಿಗೆ ಸಂವಿಧಾನದ ಚೌಕಟ್ಟು ತೊಂದರೆಯಾಗುತ್ತಿದೆ ಎಂಬ ಕಾರಣದಿಂದಲೇ ಸಂವಿಧಾನವನ್ನು ಬದಲಾವಣೆ ಮಾಡಲು ಹೊರಟಿದ್ದಾರೆ ಎಂದರು.

ರಾಜ್ಯದಲ್ಲಿ ಸಿಎಂ ಬದಲಾವಣೆಯಾಗಿದೆಯೆ ಹೊರತು ಆಡಳಿತದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸಿಎಂ ಬದಲಾವಣೆಯಾದ ಕೂಡಲೇ ಇದೀಗ ಸಂಪುಟ ಬದಲಾವಣೆ ಬಗ್ಗೆ ಬಿಜೆಪಿಗರು ಚಿಂತಿಸುತ್ತಿದ್ದಾರೆಯೇ ಹೊರತು ಕೋವಿಡ್ ನಿಯಂತ್ರಣದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆ.15ರ ವೇಳೆಗೆ ಎಲ್ಲರಿಗೂ ಲಸಿಕೆಯ ಸ್ವಾತಂತ್ರ್ಯ ದೊರಕಲಿ. ಒಂದು ವೇಳೆ ಆ.15ರೊಳಗೆ ಎಲ್ಲಾ ಕಡೆಗಳಿಗೆ ಲಸಿಕೆ ವಿತರಣೆಯಾಗದಿದ್ದಲ್ಲಿ ಕಾಂಗ್ರೆಸ್ ಜಿಲ್ಲೆ ಜಿಲ್ಲೆಗಳಲ್ಲಿ ಹೋರಾಟ ಮಾಡಲಿದೆ ಎಂದು ದ.ಕ.ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಎಚ್ಚರಿಸಿದರು

ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ರಾಜ್ಯ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಎಂ ಡಿ ಲಕ್ಷ್ಮಿ ನಾರಾಯಣ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಶಕುಂತಲಾ ಶೆಟ್ಟಿ, ಕಾಂಗ್ರೆಸ್ ದ.ಕ.ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಎಂಎಲ್ ಸಿ ಐವನ್ ಡಿಸೋಜ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English