ನಿಟ್ಟೆ ಕಾಲೇಜಿನ ಮಂಗಳೂರು ವಿದ್ಯಾರ್ಥಿನಿ ಅರ್ಬಿ ಫಾಲ್ಸ್ ನಲ್ಲಿ ನೀರುಪಾಲು

10:07 PM, Monday, August 2nd, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Nitte Studentಕಾರ್ಕಳ :   ಅರ್ಬಿ ಫಾಲ್ಸ್ ವೀಕ್ಷಣೆಗೆಂದು ಹೋಗಿದ್ದ ವಿದ್ಯಾರ್ಥಿಗಳ ಪೈಕಿ ವಿದ್ಯಾರ್ಥಿನಿಯೊಬ್ಬಳು ನೀರಿನ ಸೆಳತಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ಮೃತಪಟ್ಟವರನ್ನು ನಿಟ್ಟೆ ಕಾಲೇಜಿನ ಪ್ರಥಮ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿ ಮಂಗಳೂರು ಜಪ್ಪು ನಿವಾಸಿ ವರ್ಷಿತಾ(19) ಎಂದು ಗುರುತಿಸಲಾಗಿದೆ.

ಸಹಪಾಠಿಗಳಾದ ರುದ್ರ ಹಾಗೂ ಶಾಶಂಕ ಎಂಬವರೊಂದಿಗೆ ಸೋಮವಾರ ಮಧ್ಯಾಹ್ನದ ವೇಳೆಗೆ ಅರ್ಬಿ ಫಾಲ್ಸ್ ಪರಿಸರಕ್ಕೆ ಹೋಗಿದ್ದಳು. ಆಕೆ ಸಹಪಾಠಿಗಳೊಂದಿಗೆ ತುಂಬಿ ತುಳುಕುತ್ತಿದ್ದ ಫಾಲ್ಸ್‌ಗೆ ಇಳಿದಿದ್ದು, ಕ್ಷಣ ಮಾತ್ರದಲಿ ಸುಳಿಗೆ ಸಿಲುಕಿ ನೀರುಪಾಲಾಗಿದ್ದಳು.

ಮಾಹಿತಿ ತಿಳಿದ ಅಗ್ನಿಶಾಮಕದಳದವರು ಘಟನಾ ಸ್ಥಳಕ್ಕೆ ಆಗಮಿಸಿ ಹರ್ಷಿತಾಳ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ. ಇದೇ ಪ್ರದೇಶಕ್ಕೆ ಹಲವು ಬಾರಿ ವಿದ್ಯಾರ್ಥಿಗಳ ತಂಡ ಬರುತ್ತಿದ್ದರೆಂಬ ಮಾಹಿತಿಯು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English