ಮುಂದೆ ಗಡ್ಡಧಾರಿಯೊಬ್ಬರು ಕರ್ನಾಟಕದ ಮುಖ್ಯಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದ ಮೈಲಾರ ಶ್ರೀ

1:10 PM, Tuesday, August 3rd, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Mailara Seerಹುಬ್ಬಳ್ಳಿ :  ಗಡ್ಡಧಾರಿ ರಾಜಕೀಯ ನಾಯಕರೊಬ್ಬರು ಮುಖ್ಯಮಂತ್ರಿಯಾಗುತ್ತಾರೆ ಎಂದು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಮೈಲಾರ ಲಿಂಗೇಶ್ವರ ದೇವಸ್ಥಾನದ ಸ್ವಾಮೀಜಿಯೊಬ್ಬರು ಹೇಳಿರುವುದು ಇದೀಗ ಭಾರೀ ಸದ್ದು ಮಾಡುತ್ತಿದೆ. ರಾಜಕೀಯ ವಲಯದಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿಯವರು ಪೂರ್ಣಾವಧಿ ಮುಗಿಸುವುದಿಲ್ಲ,  ಇನ್ನು ಆರೇಳು ತಿಂಗಳು ಮಾತ್ರ ಸಿಎಂ ಆಗಿ ಇರಬಹುದಷ್ಟೆ ಎಂದು ವಿಡಿಯೊವನ್ನು ಅಪ್ ಲೋಡ್  ಮಾಡಿದ್ದಾರೆ.

ಅವರ ಹೇಳಿಕೆ ಪ್ರಕಾರ ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಅಥವಾ ಕೆಲವೊಮ್ಮೆ ಗಡ್ಡ ಬಿಡುವ ಮೊಳಕಾಲ್ಮೂರು  ಶಾಸಕ ಶ್ರೀ ರಾಮುಲು ಮುಖ್ಯಮಂತ್ರಿ ಸ್ಥಾನ ತುಂಬುವರೇ ಎಂಬ ಕುತೂಹಲ ಹುಟ್ಟಿಸಿದೆ.

ಸ್ವಾಮೀಜಿ ಬಳಿ  ಪ್ರತಿ ವರ್ಷ ಗೊತ್ತುಪಡಿಸಿದ ದಿನದಂದು, ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಭವಿಷ್ಯವನ್ನು ಕೇಳಲು ಇಲ್ಲಿ ಸೇರುತ್ತಾರೆ. ಹವಾಮಾನ ಮತ್ತು ರೈತರ ಬೆಳೆ ಸ್ಥಿತಿಯ ಬಗ್ಗೆ ಮೈಲಾರ ಭವಿಷ್ಯವಾಣಿಯನ್ನು ಶ್ರೀಗಳು ಹೇಳುತ್ತಾರೆ.

ವೆಂಕಪ್ಪಯ್ಯ ಒಡೆಯರ್ ಎಂಬ ಶ್ರೀಗಳು ಈ ಬಾರಿ ಕರ್ನಾಟಕದ ರಾಜಕೀಯ ಭವಿಷ್ಯ ಬಗ್ಗೆ ಮಾತನಾಡಿದ್ದಾರೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊವನ್ನು ಅಪ್ ಲೋಡ್  ಮಾಡಿದ್ದಾರೆ.

ಅದರಲ್ಲಿ  ಬಿಜೆಪಿ ಸರ್ಕಾರದಲ್ಲಿ ಮೂವರು ಮುಖ್ಯಮಂತ್ರಿಗಳಾಗಲಿದ್ದಾರೆ. ಬೊಮ್ಮಾಯಿಯವರು ಇನ್ನು ಆರೇಳು ತಿಂಗಳು ಮಾತ್ರ ಸಿಎಂ ಆಗಿ ಇರಬಹುದಷ್ಟೆ. ಗಡ್ಡಧಾರಿ ರಾಜಕೀಯ ನಾಯಕರೊಬ್ಬರು ಮುಖ್ಯಮಂತ್ರಿಯಾಗುತ್ತಾರೆ. ಮೈಲಾರ ದೇವರ ಭವಿಷ್ಯವಾಣಿ ಇದುವರೆಗೆ ನಿಜವಾಗಿದೆ ಎಂದು ಹೇಳಿದ್ದು ಇದೀಗ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸರ್ಕಾರದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿಯಲಿದೆ ಎಂದು ಕೂಡ ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಕೋವಿಡ್-19 ಸೋಂಕು ಇನ್ನಷ್ಟು ಹೆಚ್ಚಲಿದ್ದು ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English