ಹುಬ್ಬಳ್ಳಿ : ಆಗಸ್ಟ್ 15 ರಂದು ಜರುಗುವ 75 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಅಂದು ಅಮೃತ ಮಹೋತ್ಸವ ಸಾಪ್ತಾಹಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು, ಆದರೆ ತಾಲೂಕಿನ ಎಲ್ಲ ಅಧಿಕಾರಿಗಳು ಭಾಗಿಯಾಗಿ ಸಹಕಾರ ನೀಡುವುದು ಅವಶ್ಯಕ ಎಂದು ಶಹರ ತಹಶೀಲ್ದಾರ ಶಶಿಧರ ಮಾಡ್ಯಾಳ ಹೇಳಿದರು.
ಇಲ್ಲಿಯ ಮಿನಿ ವಿಧಾನಸೌಧದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಕುರಿತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡಿದರು.
ಕೊರೊನಾ ಇರುವುದರಿಂದ ಕೆಲವು ಕಾರ್ಯಕ್ರಮ ಮಾಡಲು ತೊಂದರೆಯಾಗುತ್ತದೆ. ಎಲ್ಲ ಇಲಾಖೆಗಳಲ್ಲಿ ಅಧಿಕಾರಿಗಳು ಇಲಾಖೆಯ ಕೆಲಸದೊಂದಿಗೆ ಕೋವಿಡ್ ನಿಭಾಯಿಸುತ್ತಿದ್ದಾರೆ.
ಕೊರೊನಾ ನಿಯಮಗಳೊಂದಿಗೆ ಸುರಕ್ಷಿತವಾಗಿ ಎಲ್ಲ ಅಧಿಕಾರಿಗಳು ಸೇರಿ ಆಚರಿಸಿದಾಗ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ. ಇಲಾಖೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಯೋಜನೆಗಳ ಪ್ರಗತಿ ಕುರಿತು ವರದಿಯನ್ನು ನಮಗೆ ನೀಡಬೇಕು. ಸ್ವಾತಂತ್ರ್ಯ ದಿನಾಚರಣೆಯಂದು ಇವುಗಳ ಬಗ್ಗೆ ಜನರಿಗೆ ತಿಳಿಸಲಾಗುವುದು ಎಂದು ಸೂಚಿಸಿದರು.
ಸಭೆಯಲ್ಲಿ ಗ್ರಾಮೀಣ ತಹಶೀಲ್ದಾರ ಪ್ರಕಾಶ ನಾಶಿ, ತಾಲೂಕು ಪಂಚಾಯತ ಇಓ ಗಂಗಾಧರ ಕಂದಕೂರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್, ಹುಬ್ಬಳ್ಳಿ ಬ್ಯುರೋ.
Click this button or press Ctrl+G to toggle between Kannada and English