ಬೆಂಗಳೂರು : ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಪ್ರಚಾರ ಮತ್ತು ಉತ್ತೇಜನಕ್ಕೆ ಸಂಬಂಧಿಸಿದಂತೆ ಇಲಾಖೆಗೆ ಡಿಜಿಟಲ್ ಮಾರ್ಕೆಟಿಂಗ್ ಸೇವೆಗಳನ್ನು ಒದಗಿಸುವಲ್ಲಿ ಸಹಕರಿಸಲು ಇದೇ ಮಾದರಿಯ ಅನುಭವವನ್ನು ಹೊಂದಿರುವ ಏಜೆನ್ಸಿ/ಏಜೆನ್ಸಿಗಳಿಂದ ಪ್ರಸ್ತಾವನೆಯ ವಿನಂತಿ (Request for Proposal) ದಾಖಲೆಯನ್ವಯ ಪ್ರಸ್ತಾವನೆಗಳನ್ನು ಆಹ್ವಾನಿಸಲು ಉದ್ದೇಶಿಸಿರುತ್ತದೆ.
ಈ ಸಂಬಂಧ ಬಿಡ್ ದಾಖಲೆಗಳನ್ನು ಕರ್ನಾಟಕ ಸರ್ಕಾರದ ಇ-ಸಂಗ್ರಹಣೆ ವೆಬ್ಸೈಟ್ ವಿಳಾಸ http://www.eproc.karnataka.gov.in ದಿಂದ ದಿನಾಂಕ:31-07-2021ರ ನಂತರ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಇದೇ ವೇದಿಕೆಯ ಮೂಲಕ ಆಸಕ್ತ ಬಿಡ್ಡುದಾರರು ತಮ್ಮ ಪ್ರಸ್ತಾವನೆಗಳನ್ನು ಸಲ್ಲಿಸಬಹುದಾಗಿದೆ.
ಈ ಸಂಬಂಧ ದಿನಾಂಕ: 10-08-2021ರಂದು ಅಪರಾಹ್ನ 12:00 ಗಂಟೆಗೆ ಈ ಕೆಳಗೆ ನಮೂದಿಸಿರುವ ಇಲಾಖೆಯ ವಿಳಾಸದಲ್ಲಿ ಪ್ರಸ್ತಾವನೆಗಳ ಪೂರ್ವಭಾವಿ ಸಭೆ ಆಯೋಜಿಸಲಾಗುವುದು. ಈ ಟೆಂಡರ್ಗೆ ಪ್ರಸ್ತಾವನೆಗಳನ್ನು ಸಲ್ಲಿಸಲು ಅಂತಿಮ ದಿನಾಂಕ 01-09-2021 ಮಧ್ಯಾಹ್ನ 3:00 ಗಂಟೆ ಆಗಿರುತ್ತದೆ. ಈ ಟೆಂಡರ್ ಸಂಬಂಧ ಎಲ್ಲಾ ಹೆಚ್ಚುವರಿ ಅಧಿಸೂಚನೆಗಳು, ಬದಲಾವಣೆಗಳು ಟೆಂಡರ್ ದಾಖಲೆ ತಿದ್ದುಪಡಿಗಳನ್ನು http://www.eproc.karnataka.gov.in ವೆಬ್ಸೈಟ್ನಲ್ಲಿ ಮಾತ್ರ ಪ್ರಕಟಿಸಲಾಗುವುದು. ಟೆಂಡರ್ ಆಹ್ವಾನ ಪ್ರಾಧಿಕಾರವು ಈ ಟೆಂಡರ್ಗೆ ಸಂಬಂಧಿಸಿದಂತೆ ಸ್ವೀಕೃತವಾಗುವ ಯಾವುದೇ ಒಂದು ಅಥವಾ ಎಲ್ಲಾ ಬಿಡ್ಗಳನ್ನು ಯಾವುದೇ ಕಾರಣಗಳನ್ನು ನೀಡದೆ ಅಂಗೀಕರಿಸುವ ಅಥವಾ ತಿರಸ್ಕರಿಸುವ ಪೂರ್ಣ ಹಕ್ಕು ಹೊಂದಿರುತ್ತದೆ. ಈ ಟೆಂಡರ್ ದಾಖಲೆ ಸಂಬಂಧ ಯಾವುದೇ ವಿಚಾರಣೆ/ಸ್ಪಷ್ಟೀಕರಣ ಕುರಿತು ಜಂಟಿ ನಿರ್ದೇಶಕರು (ಪಿಅಂಡ್ಪಿ), ಪ್ರವಾಸೋದ್ಯಮ ಇಲಾಖೆ ರವರನ್ನು ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್ ಬ್ಯುರೋ.
Click this button or press Ctrl+G to toggle between Kannada and English