ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ಅಗಸ್ಟ ತಿಂಗಳಲ್ಲೇ ಬಹುತೇಕ ಖಚಿತ

10:30 PM, Tuesday, August 3rd, 2021
Share
1 Star2 Stars3 Stars4 Stars5 Stars
(No Ratings Yet)
Loading...

Hubli-Dharwadaಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ಪ್ರಸಕ್ತ ಅಗಸ್ಟ ತಿಂಗಳಲ್ಲೇ ನಡೆಯುವುದು ಬಹುತೇಕ ಖಚಿತವಾಗಿದ್ದು, ಎಲ್ಲ ಸಿದ್ಧತೆಗಳು ಭರದಿಂದ ಸಾಗಿವೆ.

ಜಿಲ್ಲಾಧಿಕಾರಿ ನಿತೇಶ ಪಾಟೀಲ ಶುಕ್ರವಾರ ಚುನಾವಣಾ ಆಯೋಗದೊಂದಿಗೆ ಚರ್ಚೆ ನಡೆಸಿದ ನಂತರ ಅಲ್ಲಿ ಚರ್ಚಿಸಲಾದ ವಿಷಯದಂತೆ ಎಲ್ಲ ಅವಶ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಪಾಲಿಕೆ ಆಯುಕ್ತರಿಗೆ ಆದೇಶ ನೀಡಿದ್ದು, ನಾಡಿದ್ದು ದಿ.೫ರಂದು ಘೋಷಣೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.

ಅಲ್ಲದೇ ಪ್ರತಿ ಐದು ವಾರ್ಡಗೊಂದರ0ತೆ ಚುನಾವಣಾ ಅಧಿಕಾರಿ (ಆರ್‌ಓ) ಹಾಗೂ ಸಹಾಯಕ ಚುನಾವಣಾಧಿಕಾರಿ (ಎಆರ್‌ಓ) ನೇಮಕ ಮಾಡಿ ಚುನಾವಣೆ ಆಯೋಗಕ್ಕೆ ತಿಳಿಸಲಾಗಿದೆ.
ಚುನಾವಣಾಧಿಕಾರಿ ಅಸಿಸ್ಟಂಟ್ ಕಮೀಶನರ್ ಕೇಡರ್‌ನವರಾಗಿದ್ದು, ಎಆರ್‌ಓಗಳು ತಹಶೀಲ್ದಾರ ಕೇಡರ್‌ನವರಾಗಿದ್ದಾರೆ. ಈ ಮೊದಲು ಒಂದು ಪಟ್ಟಿಯನ್ನು ಕಳುಹಿಸಲಾಗಿತ್ತಾದರೂ ಅದನ್ನು ಬದಲಿಸುವಂತೆ ಸೂಚಿಸಲಾಗಿತ್ತು. ಹುಬ್ಬಳ್ಳಿ ಧಾರವಾಡದಲ್ಲಿ ೩ ವರ್ಷ ಅಧಿಕಾರ ನಿರ್ವಹಿಸಿರುವ ಅಧಿಕಾರಿಗಳನ್ನು ಪಟ್ಟಿಯಲ್ಲಿ ಇಡದಂತೆ ಸೂಚನೆ ನೀಡದೇ ಹಿನ್ನೆಲೆಯಲ್ಲಿ ಬದಲಾಯಿಸಿ ಕಳುಹಿಸಲಾಗಿದೆ.

ಕಾಲಮಿತಿಯೊಳಗೆ ಚುನಾವಣೆ ನಡೆಸಲು ಸರ್ಕಾರ ಮತ್ತು ಆಯೋಗಕ್ಕೆ ನಿರ್ದೇಶನ ನೀಡಲು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿಯ ವಿಚಾರಣೆ ನಾಳೆ ನಡೆಯಲಿದೆ. ಅಲ್ಲದೇ ಎಸ್‌ಸಿ ಮೀಸಲಾತಿ ಅನ್ಯಾಯ, ವಾರ್ಡ ಮೀಸಲಾತಿ ಅನ್ಯಾಯ ಕುರಿತ ಅರ್ಜಿಗಳ ವಿಚಾರಣೆಯೂ ನಾಳೆ ಧಾರವಾಡ ಹೈಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ. ಇಂದು ಅಥವಾ ನಾಳೆ ಆಯೋಗ ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಪ್ರಕ್ರಿಯೆ ಬಗ್ಗೆ ಹೈಕೋರ್ಟ್ಗೆ ವಿವರ ನೀಡಬೇಕಾಗಿದೆ. ಸ್ವತಃ ಹೈಕೋರ್ಟ್ ಮುಖ್ಯ ನ್ಯಾಯಾಧೀಶರೇ ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಎತ್ತಿಕೊಂಡಿರುವುದರಿ0ದ ತಡೆಯಾಜ್ಞೆ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಪಾಲಿಕೆಗೆ ಕಳೆದ ೨೮ ತಿಂಗಳಿAದ ಚುನಾಯಿತ ಆಡಳಿತ ಮಂಡಳಿ ಇಲ್ಲದಿರುವುದರಿಂದ ಅಲ್ಲದೇ ಮತದಾರರ ಪಟ್ಟಿ ಪ್ರಕಟಗೊಂಡ (ಜುಲೈ ೯) ೪೫ ದಿನಗಳೊಳಗೆ ಚುನಾವಣೆ ನಡೆಸುವುದಾಗಿ ಈ ಹಿಂದೆಯೇ ಹೈಕೋರ್ಟಗೆ ಆಯೋಗ ಹೇಳಿರುವುದರಿಂದ ಆಯೋಗ ಮತದಾನದ ದಿನಾಂಕ ನಿಶ್ಚಯಿಸಿಯೇ ಹೈಕೋರ್ಟ್ಗೆ ವಿವರ ನೀಡುವುದು ನಿಶ್ಚಿತವಾಗಿದೆ.

ಪ್ರಕರಣದ ವಿಚಾರಣೆ ನಾಳೆ ನಡೆಯಲಿದ್ದು ತಾನು ಹೈಕೋರ್ಟ್ಗೆ ನೀಡಿದ ವಿವರಗಳಂತೆ ನಾಡಿದ್ದು ಚುನಾವಣೆ ಆಯೋಗ ಹು.ಧಾ ಪಾಲಿಕೆ ಸಹಿತ ವಿವಿಧ ಅವಧಿ ಮುಗಿದ ಸ್ಥಳೀಯ ಸಂಸ್ಥೆಗಳ ಚುನಾವಣಾ ಘೋಷಣೆ ದಟ್ಟವಾಗಿದ್ದು ೨೧ ದಿನದೊಳಗೆ ಪ್ರಕ್ರಿಯೆ ಮುಗಿಯಲಿದೆ ಎನ್ನಲಾಗುತ್ತಿದೆ. ಅಲ್ಲದೇ ಆಡಳಿತಾರೂಡ ಬಿಜೆಪಿ ಪಾಳೆಯದಲ್ಲಿನ ಚಟುವಟಿಕೆ ಇದನ್ನು ಪುಷ್ಠಿಕರಿಸುವಂತಿದೆ.

ಬಿಜೆಪಿಯಲ್ಲಿ ೫೦ ಪ್ಲಸ್ ಟಾರ್ಗೆಟ್: ಕಾಂಗ್ರೆಸ್‌ನಲ್ಲಿ ಮತ್ತದೇ ಹಾಡು
ಬಿಜೆಪಿಯಲ್ಲಿ ಬೂತ್ ಮಟ್ಟದ ಕಮೀಟಿಗಳನ್ನು ಸಮರೋಪಾದಿಯಲ್ಲಿ ಮಾಡಲಾಗುತ್ತಿದ್ದು ಒಟ್ಟು ೮೨ ವಾರ್ಡಗಳಲ್ಲಿ ಕನಿಷ್ಠ ೫೦ಕ್ಕೂ ಹೆಚ್ಚು ವಾರ್ಡ ಗೆಲ್ಲುವ ಗುರಿ ಹೊಂದಲಾಗಿದೆ. ಕಾಂಗ್ರೆಸ್‌ನಲ್ಲಿ ಮಾತ್ರ ಅದೇ ರಾಗ ಅದೇ ಹಾಡು ಮುಂದುವರಿದಿದೆ.

ಕೆಲ ವಾರ್ಡ್ಗಳಲ್ಲಿ ಬಿಜೆಪಿಗೂ ಅಭ್ಯರ್ಥಿಗಳ ಆಯ್ಕೆ ಸವಾಲಾಗಿ ಪರಿಣಮಿಸಿದ್ದು,ಆಕಾಂಕ್ಷಿಗಳೆಲ್ಲರೂ ಪ್ರಭಾವಿಗಳು ಇರುವುದು ಯಾರಿಗೆ ಮಣೆ ಹಾಕಬೇಕೆಂಬುದು ದೊಡ್ಡ ಸಮಸ್ಯೆಯಾಗಿದೆ. ಆದರೂ ಈ ಬಾರಿ ಇದರ ಒಳ ಹೊಡೆತ ಸ್ವಲ್ಪ ಬೀಳಬಹುದಾದರೂ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಮತ್ತೆ ಮುನ್ನೆಲೆಗೆ ಬಂದಿದೆ.
ಪೂರ್ವ ಕ್ಷೇತ್ರದಲ್ಲಿ ಕಾಂಗ್ರೆಸ್ ಪಾರಮ್ಯ ಮುರಿಯಲು ಬಿಜೆಪಿ ಸನ್ನಾಹ ನಡೆಸಿದ್ದು, ಅಪರೋಕ್ಷವಾಗಿ ಎಂಐಎA ಸಹಕರಿಸುತ್ತಿದೆ.ಕೆಲವೆಡೆ ಎಂಐಎ0 ಅಭ್ಯರ್ಥಿಗಳಿಗೆ ಕೇಸರಿ ಪಡೆ ಬೆನ್ನೆಲುಬಾಗಿ ನಿಲ್ಲುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English