ಮಂಗಳೂರು : ಸುರತ್ಕಲ್ ಸಮೀಪದ ಕೃಷ್ಣಾಪುರದಲ್ಲಿ ಇಲೆಕ್ಟ್ರಿಕ್ ರಿಕ್ಷಾ ಡ್ರೈವ್ ಮಾಡಿದ ಶಾಸಕರು ಇಲೆಕ್ಟ್ರಿಕ್ ವಾಹನವು ಮಾಲಿನ್ಯ ರಹಿತ, ನಿಶ್ಶಬ್ದ ಹಾಗೂ ಅತೀ ಕಡಿಮೆ ವೆಚ್ಚದಲ್ಲಿ ಲಾಭದಾಯಕ ಸ್ವ ಉದ್ಯೋಗ ಆಗುವ ಎಲ್ಲಾ ಲಕ್ಷಣಗಳಿದೆ ಎಂದರು.
ಸರಕಾರದಿಂದ ಅರ್ಹ ಫಲಾನುಭವಿಗಳಿಗೆ ಸ್ವ ಉದ್ಯೋಗ ಮಾಡಲು ಕೊಡಲಾಗುವ ವಾಹನಗಳಲ್ಲಿ ಇಲೆಕ್ಟ್ರಿಕ್ ವಾಹನ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯುವುದಾಗಿ ಶಾಸಕ ಡಾ.ಭರತ್ ಶೆಟ್ಟಿ ವೈ. ಹೇಳಿದ್ದಾರೆ.
ಕೇಂದ್ರ ಸರಕಾರ ಮಾಲಿನ್ಯ ಕಡಿಮೆ ಮಾಡಲು ವಿದ್ಯುತ್ ಚಾಲಿತ ವಾಹನಗಳಿಗೆ ಭಾರೀ ಸಬ್ಸಿಡಿ ನೀಡಿ ಖರೀದಿಗೆ ಪ್ರೋತ್ಸಾಹ ಮಾಡುತ್ತಿದೆ. ರಾಜ್ಯ ಸರಕಾರವೂ ಈ ಬಗ್ಗೆ ಹೆಚ್ವಿನ ಪ್ರೋತ್ಸಾಹ ನೀಡಲಿದೆ ಎಂದರು.
ಪಾಲಿಕೆ ಸದಸ್ಯ ಲೋಕೇಶ್ ಬೊಳ್ಳಾಜೆ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English