ಬೆಂಗಳೂರು : ನೂತನ ಸಂಪುಟದ ಸಚಿವರ ಪಟ್ಟಿ ಅಂತಿಮಗೊಳಿಸಿಕೊಂಡು ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿಗೆ ಮರಳಿದ್ದಾರೆ. ಇಂದು ಮಧ್ಯಾಹ್ನ 2:15ಕ್ಕೆ ನೂತನ ಮಂತ್ರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ. ರಾಜಭವನ ದ ಗಾಜಿನಮನೆಯಲ್ಲಿ ಈ ಕಾರ್ಯಕ್ರಮಕ್ಕಾಗಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಯಡಿಯೂರಪ್ಪನವರು ಜುಲೈ 26 ರಂದು ರಾಜೀನಾಮೆ ನೀಡುವುದರೊಂದಿಗೆ, ಅವರ ಸಚಿವ ಸಂಪುಟ ಸಹ ಸ್ವಯಂಚಾಲಿತವಾಗಿ ವಿಸರ್ಜನೆಯಾಗುತ್ತದೆ. ಇದರ ಪರಿಣಾಮವಾಗಿ, ಯಡಿಯೂರಪ್ಪನವರ ಅವಧಿಯಲ್ಲಿ ಅವರ ಅಥವಾ ಅವರ ಉಪ ಮುಖ್ಯಮಂತ್ರಿಗಳು ಅಥವಾ ಮಂತ್ರಿಗಳಿಂದ ಯಾವುದೇ ನೇಮಕಾತಿಗಳನ್ನು ಮಾಡಿರುವುದು ಸಹ ಕೊನೆಗೊಳ್ಳುತ್ತದೆ.
ಬೊಮ್ಮಾಯಿ ಸಂಪುಟದ ಸಂಭಾವ್ಯ ಸಚಿವರ ಹೊಸ ಪಟ್ಟಿ:
ಶ್ರೀರಾಮುಲು, ಅಂಗಾರ, ಪೂರ್ಣಿಮಾ ಶ್ರೀನಿವಾಸ್, ಉಮೇಶ್ ಕತ್ತಿ, ಡಾ ಸುಧಾಕರ್, ಎಸ್ ಟಿ ಸೋಮಶೇಖರ್, ಶಿವರಾಮ ಹೆಬ್ಬಾರ್, ಕೆ ಎಸ್ ಈಶ್ವರಪ್ಪಪ್ಪ, ವಿ.ಸೋಮಣ್ಣ, ಗೋವಿಂದ ಕಾರಜೋಳ, ಮಾಧುಸ್ವಾಮಿ, ಆನಂದ್ ಸಿಂಗ್, ಬಿ.ಸಿ ಪಾಟೀಲ್, ಅಶ್ವಥನಾರಾಯಣ್, ಬೈರತಿ ಬಸವರಾಜ್, ಮುರುಗೇಶ್ ನಿರಾಣಿ, ಗೋಪಾಲಯ್ಯ, ಅರಗ ಜ್ಞಾನೇಂದ್ರ, ಸುನಿಲ್ ಕುಮಾರ್ ಮೊದಲಾದ 29 ಮಂತ್ರಿಗಳು ಬೊಮ್ಮಾಯಿ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಈಗಾಗಲೇ ಇವರೆಲ್ಲರಿಗೂ ವಿಧಾನಸೌಧಕ್ಕೆ ಆಗಮಿಸುವಂತೆ ಮುಖ್ಯಮಂತ್ರಿಗಳು ಕರೆ ಮಾಡಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿ ಪಿ ಯೋಗೇಶ್ವರ್, ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಚಿವ ಸ್ಥಾನ ಸಿಗುವುದು ಸಂಶಯವಾಗಿದೆ.
Click this button or press Ctrl+G to toggle between Kannada and English