ಕಾರ್ಯಕ್ಷಮತೆಯನ್ನು ಅಧ್ಯಯನ ಮಾಡಲು ಕರಾರಸಾ ನಿಗಮಕ್ಕೆ ಟಾಟಾ ಮೋಟಾರ್ಸ್ ಉಚಿತವಾಗಿ ಬಿ ಎಸ್ -6 ಚಾಸಿಸ್ ವಿತರಣೆ

4:55 PM, Thursday, August 5th, 2021
Share
1 Star2 Stars3 Stars4 Stars5 Stars
(No Ratings Yet)
Loading...

bmtcಬೆಂಗಳೂರು : ಕರಾರಸಾ ನಿಗಮಕ್ಕೆ ಟಾಟಾ ಮೋಟಾರ್ಸ್ ರವರು ಉಚಿತವಾಗಿ ಬಿಎಸ್ -6 ಚಾಸಿಸ್ ಅನ್ನು ಉಚಿತವಾಗಿ ಕಾರ್ಯಕ್ಷಮತೆಯನ್ನು ಅಧ್ಯಯನ ಮಾಡಲು ನೀಡಿರುತ್ತಾರೆ.

ಬಿಎಸ್ -6 ವಾಹನದ ಕಾರ್ಯಾಚರಣೆಯನ್ನು ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಮಾಡಲಾಗುತ್ತಿದೆ. ಈ ಚಾಸಿಸ್ನ ಅಂದಾಜು ವೆಚ್ಚ ರೂ. 27 ಲಕ್ಷಗಳಾಗಿದೆ. ಇದು ಬಿಎಸ್ – 6 ಮಾದರಿಯ ಚಾಸ್ಸಿಯಾಗಿದ್ದು, 4 ಸಿಲಿಂಡರ್, 5 ಲೀ 180 ಎಚ್ಪಿ ಇಂಜಿನ್ ಆಗಿರುತ್ತದೆ. ಇದರ ವೀಲ್ಬೇಸ್ 224″ ಇರುತ್ತದೆ. ಹಾಗೂ ಬಿಎಸ್ -4 ಗೆ ಹೋಲಿಸಿದರೆ ಹೆಚ್ಚು ಇಂಧನ ಕ್ಷಮತೆ ಹೊಂದಿದೆ. ಈ ಇಂಜಿನ್ನಲ್ಲಿ ಪವರ್ ಟು ವೇಟ್ ಅನುಪಾತ ಹೆಚ್ಚಾಗಿರುತ್ತದೆ. ಈ ಚಾಸ್ಸಿಯ ಮೇಲೆ ನಿಗಮದ ಪ್ರಾದೇಶಿಕ ಕಾರ್ಯಗಾರ ಕೆಂಗೇರಿಯಲ್ಲಿ ಬಸ್ ಕವಚ ನಿರ್ಮಿಸಲಾಗುವುದು.

ಮೆ: ಟಾಟಾ ಮೋಟಾರ್ಸ್ ನಿಂದ ಹಾಜರಿದ್ದ ಅಜಯ್ ಗುಪ್ತಾ, ಪ್ರಾದೇಶಿಕ ವ್ಯವಸ್ಥಾಪಕರು, ಸರ್ಕಾರ ಮತ್ತು SಖಿU- ವ್ಯಾಪಾರ, ಮೆ: ಟಾಟಾ ಮೋಟಾರ್ಸ್ ರವರು ಈ ಸಂಬಂಧ ಕಾಗದಪತ್ರಗಳನ್ನು ಶಿವಯೋಗಿ. ಸಿ.ಕಳಸದ, ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್ಆರ್ ಟಿಸಿ ರವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಟಿ. ವೆಂಕಟೇಶ್, ಭಾಆಸೇ, ನಿರ್ದೇಶಕರು (ಸಿ & ಪ), ಕೆ.ರಾಮಮೂರ್ತಿ, ಮುಖ್ಯ ಯಾಂತ್ರಿಕ ಅಭಿಯಂತರರು (ನಿ), ಎನ್.ಕೆ.ಬಸವರಾಜು, ಮುಖ್ಯ ಯಾಂತ್ರಿಕ ಅಭಿಯಂತರರು(ಉ), ಸಾಗರ್, ರಾಜ್ಯ ಮುಖ್ಯಸ್ಥ, ಮೆ: ಟಾಟಾ ಮೋಟಾರ್ಸ್ ಮತ್ತು ಅರವಿಂದ ಮೋಟಾರ್ಸ್ ತಂಡದವರು ಉಪಸ್ಥಿತರಿದ್ದರು.

ವರದಿ: ಶಂಭು.
ಮೆಗಾಮೀಡಿಯ ನ್ಯೂಸ್‌ ಬ್ಯುರೋ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English