ನವದೆಹಲಿಯ ಕರ್ನಾಟಕ ಭವನದಲ್ಲಿ ಖಾಲಿಯಿರುವ ವಿವಿಧ ವೃಂದದ ಹುದ್ದೆಗಳಿಗೆ ಆಯ್ಕೆ ಪಟ್ಟಿ ಪ್ರಕಟ

11:19 PM, Saturday, August 7th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Karnataka Bhavanಬೆಂಗಳೂರು : ನವದೆಹಲಿಯ ಕರ್ನಾಟಕ ಭವನದಲ್ಲಿ ದಿನಾಂಕ:20-02-2021ರ ಅಧಿಸೂಚನೆಯಲ್ಲಿ ನವದೆಹಲಿಯ ಕರ್ನಾಟಕ ಭವನದಲ್ಲಿ ಖಾಲಿ ಇರುವ ಗ್ರೂಪ್-ಸಿ ಮತ್ತು ಗ್ರೂಪ್-ಡಿ ಹುದ್ದೆಗಳನ್ನು (ಉಳಿಕೆ ವೃಂದದ 25 ಹಾಗೂ ಹೈದ್ರಾಬಾದ್ ಕರ್ನಾಟಕ ವೃಂದದ 7 ಹುದ್ದೆ ಒಟ್ಟು 32 ಹುದ್ದೆಗಳು) ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.

ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ದಾಖಲೆ ಪರಿಶೀಲನೆಗಾಗಿ ಹಾಗೂ ಪ್ರಾವೀಣ್ಯತೆ ಪರೀಕ್ಷೆಗಳಿಗಾಗಿ (ಅನ್ವಯಿಸುವ ಹುದ್ದೆಗಳಿಗೆ ಮಾತ್ರ) 1:5 ಅನುಪಾತದಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು www.karnatakabhavan.karnataka.gov.in ರಲ್ಲಿ ದಿನಾಂಕ: 14-07-2021 ರಂದು ಪ್ರಕಟಿಸಲಾಗಿತ್ತು. ಜುಲೈ2021 ರ 29, 30 ರಂದು ಬೆಂಗಳೂರಿನ ಕುಮಾರಕೃಪ ಅತಥಿಗೃಹದಲ್ಲಿ ಅರ್ಹ ಅಭ್ಯರ್ಥಿಗಳಲ್ಲಿ 1:5 ರಂತೆ ಆಯ್ಕೆಯಾಗಿರುವ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಹಾಗೂ ಪ್ರಾವೀಣ್ಯತೆ ಪರೀಕ್ಷೆಯನ್ನು (ಅನ್ವಯಿಸುವ ಹುದ್ದೆಗಳಿಗೆ ಮಾತ್ರ) ನಡೆಸಲಾಗಿತ್ತು.

ಆಯ್ಕೆಗೊಂಡಿರುವ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಂಪೂರ್ಣ ಮಾಹಿತಿ ಹಾಗೂ ವಿವರಗಳೊಂದಿಗೆ ಸಿದ್ಧಪಡಿಸಿ www.karnatakabhavan.karnataka.gov.in ರಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ದಿನಾಂಕ:06-08-2021 ರಂದು ಪ್ರಕಟಿಸಲಾಗಿದೆ.

ಆಯ್ಕೆಗೊಂಡಿರುವ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ ಕಾಯುವಿಕೆ ಪಟ್ಟಿಗೆ ಸಂಬಂಧಿಸಿದಂತೆ ಬಾಧಿತರಾಗಬಹುದಾದ ಅಭ್ಯರ್ಥಿಗಳು ತಮ್ಮ ಆಕ್ಷೇಪಣೆಗಳು ಏನಾದರೂ ಇದ್ದಲ್ಲಿ ದಿನಾಂಕ: 17-08-2021 ರ ಸಂಜೆ 5.30 ಗಂಟೆಯೊಳಗೆ ಅಧ್ಯಕ್ಷರು ನೇರ ನೇಮಕಾತಿ ಆಯ್ಕೆ ಸಮಿತಿ ಹಾಗೂ ಉಪನಿವಾಸಿ ಆಯುಕ್ತರು (ಹೆಚ್ಕೆ) ಕರ್ನಾಟಕ ಭವನ (ಕಾವೇರಿ) ನಂ.10, ಕೌಟಿಲ್ಯ ಮಾರ್ಗ, ನವದೆಹಲಿ-110021 ರವರಿಗೆ ತಲುಪುವಂತೆ ಲಿಖಿತವಾಗಿ ಕಳುಹಿಸುವುದು ಅಥವಾ ಇ-ಮೇಲ್ ವಿಳಾಸ: dyrckb@gmail.com ಗೆ ಕಳುಹಿಸುವುದು. ನಿಗಧಿತ ಸಮಯದ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ

ವರದಿ: ಶಂಭು.
ಮೆಗಾಮೀಡಿಯಾ ನ್ಯೂಸ್ ಬ್ಯುರೋ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English