ಮಂಗಳೂರು : 1862ರಲ್ಲಿ ಲೂಯಿಸ್ ಸ್ವಿಪ್ಟ್ ಮತ್ತು ಹೊರೆಸ್ ಪಾರ್ನೆಲ್ ಟಟಲ್ ಕಂಡುಹಿಡಿದ ಧೂಮಕೇತು ಉರಿದು ಉಳಿದ ಅವಶೇಷಗಳು ಈಗಲೂ ಉಲ್ಕಾಪಾತಕ್ಕೆ ಕಾರಣವಾಗುತ್ತಿವೆ.
ಅಗಸ್ಟ್ 11, 12 ಮತ್ತು 13 ರಂದು ಮಧ್ಯರಾತ್ರಿಯಿಂದ ಮುಂಜಾನೆಯವರೆಗೆ ಈಶಾನ್ಯ ಭಾಗದಲ್ಲಿ ಪರ್ಸೀಯಸ್ (ಪಾರ್ಥ) ನಕ್ಷತ್ರ ಪುಂಜದ ಬಳಿ ಉಲ್ಕಾಪಾತ ಸಂಭವಿಸಲಿದ್ದು ಇದಕ್ಕೆ ‘ಪರ್ಸೀಡ್ ಉಲ್ಕಾಪಾತ’ ಎಂದು ಕರೆಯಲಾಗುತ್ತದೆ.
ಈ ಉಲ್ಕಾಪಾತವು ‘ಸ್ವಿಪ್ಟ್ ಟಟಲ್’ ಧೂಮಕೇತುವಿನ ಅವಶೇಷಗಳು ಭೂಮಿಯ ವಾತಾವರಣ ಪ್ರವೇಶಿಸಿದಾಗ ಹೊತ್ತಿ ಉರಿದು, ಅದರಿಂದ ಆಕಾಶದಲ್ಲಿ ಬೆಳಕು ಪಸರಿಸಿದಂತಾಗುತ್ತದೆ. ಆಕಾಶ ಶುಭ್ರವಿದ್ದಲ್ಲಿ ಗಂಟೆಗೆ ಸುಮಾರು 60 ಉಲ್ಕೆಗಳನ್ನು ಕಣ್ತುಂಬಿಕೊಳ್ಳಬಹುದು.
ಈ ಉಲ್ಕಾಪಾತ ವೀಕ್ಷಿಸಲು ಯಾವುದೇ ವಿಶೇಷ ಉಪಕರಣಗಳ ಅವಶ್ಯವಿಲ್ಲ ಬರಿಗಣ್ಣಿನಿಂದ ಈ ವಿದ್ಯಮಾನವನ್ನು ನೋಡಬಹುದು ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ.ವಿ. ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English