‘ಸರಯೂ ಸಪ್ತಾಹೊ – ತುಳುವೆರೆ ಏಳಾಟೊ ಉದ್ಘಾಟನೆ

10:45 PM, Tuesday, August 10th, 2021
Share
1 Star2 Stars3 Stars4 Stars5 Stars
(No Ratings Yet)
Loading...

Tulu Yelataಮಂಗಳೂರು : ‘ಸರಯೂ ಸಪ್ತಾಹ – ತುಳುವೆರೆ ಏಳಾಟೊ’ ಎಂಬ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪ್ರಪ್ರಥಮ ಮಕ್ಕಳ ಮೇಳದ ಸಪ್ತಾಹ ಇಲ್ಲಿ ದ್ವಿತೀಯ ವರ್ಷದಲ್ಲಿ ನಡೆಯುತ್ತಿದೆ. ಅನೇಕ ಹಿರಿ-ಕಿರಿಯ ಕಲಾವಿದರೊಂದಿಗೆ ಸಂಪನ್ನವಾಗುತ್ತಿರುವ ಈ ಸರಣಿ ಯಶಸ್ಸಾಗಲಿ. ತುಳುವಿಗೆ ಕಾಯಕವನ್ನು ಮಾಡುವ ಸಂಸ್ಥೆ ಇದಾಗಿದ್ದು, ಇದರ ಸರ್ವಾಂಗೀಣ ಬೆಳವಣೆಗೆಯಾಗಿ ಎಲ್ಲರಿಗೂ ಶ್ರೇಯಸ್ಸಾಗಲಿ. ತುಳುಭವನವನ್ನು ಇಂತಹಾ ಕಾರ್ಯಕ್ರಮಗಳಿಗಾಗಿ ಸದಾ ತೆರೆದಿರುತ್ತದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್‌ರವರು ‘ಸಿರಿಚಾವಡಿ’ ಯಲ್ಲಿ ಸಪ್ತಾಹವನ್ನು ಉದ್ಘಾಟಿಸುತ್ತಾ, ಕಾರ್ಯಕ್ರಮಕ್ಕೆ ಶುಭಕೋರಿದರು.

ಸಭಾ ಕಾರ್ಯಕ್ರಮದಲ್ಲಿ ‘ಯಕ್ಷ ಸರಯೂ ಸನ್ಮಾನ ಸರಣಿ’ ಎಂಬ ಪುಸ್ತಕವನ್ನು ಯುವಕರ ಕಣ್ಮಣೆ, ಯಕ್ಷ ಧ್ರುವ ಪಟ್ಲ ಸತೀಶ ಶೆಟ್ಟಿಯವರು ಬಿಡುಗಡೆಗೊಳಿಸಿ, ತಂಡಕ್ಕೆ ಶುಭ ಕೋರಿದರು. ಶ್ರೀ ಸಂಜೀವ ಕಜೆಪದವು ಪ್ರಾರ್ಥಿಸಿದರೆ, ಶ್ರೀ ಸುಧಾಕರ ರಾವ್ ಪೇಜಾವರರು ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಶ್ರೀ ರವಿ ಅಲೆವೂರಾಯ ವರ್ಕಾಡಿ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಶ್ರೀ ಚೇತಕ್ ಪೂಜಾರಿಯವರು ಧನ್ಯವಾದವಿತ್ತರು. ಸಂಸ್ಥೆಯ ಗೌ|| ಸಂಚಾಲಕರಾದ ಶ್ರೀ ಹರಿಕೃಷ್ಣ ಪುನರೂರು, ಸಂಜಯಕುಮಾರ್ ಗೋಣಿಬೀಡು, ಮನಪಾ ಸದಸ್ಯ ಶ್ರೀ ಮನೋಜ್ ಕುಮಾರ್, ಶ್ರೀ ಪಿ. ವಿ ಪರಮೇಶ್, ವೇ||ಮಾ|| ಶ್ರೀ ವೆಂಕಟರಾಜ ಕಾರಂತ, ಸದಸ್ಯರಾದ ಶ್ರೀ ನಿಟ್ಟೆ ಶಶಿಧರ ಶೆಟ್ಟಿ, ಸಂಸ್ಥೆಯ ಅಧ್ಯಕ್ಷ ಶ್ರೀ ಮಧುಸೂದನ ಅಲೆವೂರಾಯ ವರ್ಕಾಡಿ, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯುವ ಹಿಮ್ಮೇಳವಾದಕ ಶ್ರೀ ಚೈತನ್ಯ ಕೃಷ್ಣ ಪದ್ಯಾಣರಿಗೆ ‘ಯಕ್ಶ ಸರಯೂ’ ಪ್ರಶಸ್ತಿ ನೀಡಿ ಸನ್ಮಾನವಿಧಿಯೊಂದಿಗೆ ಸನ್ಮಾನಿಸಲಾಯಿತು.

ಬಳಿಕ ಶ್ರೀ ಪುಂಡಾಕಾÊ ಶ್ರೀ ಗೋಪಾಲಕೃಷ್ಣ ಭಟ್, ಪುಂಡಿಕಾÊ, ಯಕ್ಷ ಧ್ರುವ ಪಟ್ಲ ಸತೀಶ ಶೆಟ್ಟಿ ಸಾರಥ್ಯದಲ್ಲಿ ‘ಭಾಗ್ಯೊದ ಭ್ರಾಮರಿ’ ಎಂಬ ತುಳು ಯಕ್ಷಗಾನ ಜರಗಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English