ದೇಸಿ ಕ್ರೀಡೆಗಳ ಮೂಲಕ ಕಳೆ ಕಟ್ಟಿದ ಮಿಸೆಸ್ ಇಂಡಿಯಾ ಕರ್ನಾಟಕ ಸ್ಪರ್ಧೆ

4:19 PM, Wednesday, August 11th, 2021
Share
1 Star2 Stars3 Stars4 Stars5 Stars
(No Ratings Yet)
Loading...

Miss Indiaಬೆಂಗಳೂರು : ಹೆಂಗಳೆಯರಲ್ಲಿನ ಪ್ರತಿಭೆಗೆ ಅತ್ಯುತ್ತಮ ವೇದಿಕೆ ಕಲ್ಪಿಸಿ ಕೊಡುವ ಮಿಸೆಸ್ ಇಂಡಿಯಾ ಕರ್ನಾಟಕ ಸ್ಪರ್ಧೆಯ ಫೈನಲ್ ಹಣಾಹಣಿ ಶುರುವಾಗಿದ್ದು, ಎರಡನೇ ದಿನದಲ್ಲಿ ದೇಸಿ ಕ್ರೀಡೆಗಳು ಸ್ಪರ್ಧಿಗಳಲ್ಲಿನ ಕ್ರೀಡಾ ಕವಶಲ್ಯಗಳನ್ನ ಒರಗೆ ಹಚ್ಚುವಲ್ಲಿ ನೆರವಾದವು.

ಕ್ರೀಡೆಯನ್ನ ಆಡಿಸುವ ಮೂಲಕ ತೀರ್ಪುಗಾರರು ಸ್ಪರ್ಧಿಗಳಲ್ಲಿನ ಚಾತುರ್ಯತೆ, ಸಂಘಟನಾ ಶಕ್ತಿ, ಸಮಯೋಚಿತ ನಿರ್ಧಾರಗಳನ್ನ ತೆಗೆದುಕೊಳ್ಳುವ ಕೌಶಲ್ಯಗಳನ್ನೆಲ್ಲಾ ವಿಶ್ಲೇಷಿಸಿದರು. ಸ್ಪೋಟ್ರ್ಸ್ ಥೀಮ್ ಫೊಟೋ ಶೂಟ್ನಲ್ಲಿ ಸ್ಪರ್ಧಿಗಳು ದೇಸಿ ಕ್ರೀಡೆಗಳಾದ ಲಗೋರಿ, ಖೋ..ಖೋ.., ಗಿಲ್ಲಿ ದಾಂಡು ಸೇರಿದಂತೆ ಫುಟ್ಬಾಲ್, ಕ್ರಿಕೇಟ್, ಲಾನ್ ಟೆನ್ನಿಸ್, ಬಾಸ್ಕೆಟ್ ಬಾಲ್, ಟೇಬಲ್ ಟೆನ್ನಿಸ್ ಮತ್ತು ಟಗ್ ವಾಫ್ ವಾರ್ ನಂತಹ ಕ್ರೀಡೆಗಳಲ್ಲಿ ಭಾಗವಹಿಸಿದರು. ಆ ನಂತರದಲ್ಲಿ ಸ್ಪರ್ಧಿಗಳಿಗೆ ಫೈನಲ್ ಗೆ ಅಣಿಯಾಗುವ ನಿಟ್ಟಿನಲ್ಲಿ ಒಂದಿಷ್ಟು ತರಬೇತಿಯನ್ನ ನೀಡಲಾಯಿತು.

ಇದರ ಜೊತೆಗೆ ಸಂಜೆಯ ವೇಳೆಗೆ ಸ್ಪರ್ಧಿಗಳು ಅಪ್ಪಟ ಭಾರತೀಯ ಪೋಷಾಕಿನಲ್ಲಿ ಸಿಂಗಾರಗೊಂಡು ವೇದಿಕೆಗೆ ಕಿಚ್ಚು ಹಚ್ಚಿದರು. ಬೆಳಗ್ಗೆ ದೇಸಿ ಕ್ರೀಡೆಗಳ ಮೂಲಕ ಸಾಮಥ್ರ್ಯ ಪ್ರದರ್ಶಿಸಿದ್ದರೆ, ಸಂಜೆ ದೇಸಿ ಸೊಗಡಿನಲ್ಲಿ ಸಿಂಗಾರಗೊಳ್ಳುವ ಮೂಲಕ ಅಪ್ಪಟ ನೆಲದ ಸೌಂದರ್ಯವನ್ನ ಅನಾವರಣಗೊಳಿಸಿದರು.

Miss Indiaಆ ನಂತರದಲ್ಲಿ ಹಲವು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕ್ರೌನ್ ತೊಡಿಸಿ ಪ್ರಶಸ್ತಿ ವಿತರಿಸಲಾಯಿತು. ವಿವಿಧ ಜಿಲ್ಲೆಗಳನ್ನ ಪ್ರತಿನಿಧಿಸಿರುವ ಸ್ಫರ್ಧಿಗಳನ್ನ ಆಯಾ ಜಿಲ್ಲಾ ಮಟ್ಟದಲ್ಲಿಯೇ ಅತ್ಯುತ್ತಮವಾದವರನ್ನ ಆಯ್ಕೆ ಮಾಡುವ ಪ್ರಕ್ರಿಯೆ ಇದಾಗಿತ್ತು. ಅಂತಿಮ 25 ಸ್ಪರ್ಧಿಗಳು ಫೈನಲ್ ಹಣಾಹಣಿಗೆ ಆಯ್ಕೆಯಾಗುವ ಮೊದಲು ಈ ಘೋಷಣೆ ಮಾಡಲಾಯಿತು.

ಇಂದಿನ ಸ್ಪರ್ಧಿಗಳ ಆಯ್ಕೆಯ ಪ್ರಕ್ರಿಯೆ ಕುರಿತಂತೆ ಮಾತನಾಡಿದ ಮಿಸೆಸ್ ಇಂಡಿಯಾ ಕರ್ನಾಟಕದ ಆಯೋಜಕಿ, ಮಿಸೆಸ್ ಏಶಿಯಾ ಇಂಟರ್ ನ್ಯಾಷನಲ್ & ಮಿಸೆಸ್ ಇಂಡಿಯಾ 2015, ನಿರ್ದೇಶಕಿ ಮಿಸೆಸ್ ಇಂಡಿಯಾ ಕರ್ನಾಟಕ ಪ್ರತಿಭಾ ಸಂಶಿಮಠ, ” ನಮ್ಮ ಹೆಣ್ಣುಮಕ್ಕಳು ಯಾವುದರಲ್ಲಿಯೂ ಕಮ್ಮಿಯಿಲ್ಲ ಎಂಬುದನ್ನ ರುಜುವಾತು ಮಾಡುವುದಕ್ಕೆ ಪ್ರತಿ ವರ್ಷ ಈ ಸೌಂದರ್ಯ ಹಾಗೂ ಪ್ರತಿಭಾ ಸ್ಫರ್ದೆಯನ್ನ ಆಯೋಜಿಸುತ್ತೇವೆ. ಇಂದು ವಿವಿಧ ಕ್ರೀಡೆಗಳಲ್ಲಿ ನಮ್ಮ ಸ್ಪರ್ಧಿಗಳು ವೃತ್ತಿಪರರಂತೆ ತಮ್ಮ ಕೌಶಲ್ಯಗಳನ್ನ ಪ್ರದರ್ಶಿಸಿದರು. ಅವರ ಅಸಾಧಾರಣ ಪ್ರತಿಭೆಗೆ ಕೇವಲ ರಾಜ್ಯಮಟ್ಟದಲ್ಲಷ್ಟೇ ಅಲ್ಲ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ವೇದಿಕೆ ಕಲ್ಪಿಸಿಕೊಡುವುದು ಈ ಸ್ಪರ್ಧೆಯ ಉದ್ದೇಶವಾಗಿದೆ”, ಎಂದು ಹೇಳಿದರು.

Miss Indiaಮಿಸೆಸ್ ಇಂಡಿಯಾ ಕರ್ನಾಟಕದ ಈ ವರ್ಷದ ಅಂತಿಮ ಫೈನಲ್ ಬುಧವಾರ ನಡೆಯಲಿದ್ದು, ಯಾವ್ಯಾವ ಟೈಟಲ್ಗಳು, ಯಾರ್ಯಾರ ಮುಡಿಗೆ ಏರಲಿವೆ ಎಂಬುದು ಹೊರಬೀಳಿಲಿದೆ. ಈಗಾಗಲೇ ತೀವ್ರ ಕುತೂಹಲ ಹುಟ್ಟಿಸಿರುವ ಸ್ಫರ್ದೆಯಲ್ಲಿ ಅಂತಿಮವಾಗಿ 25 ಜನರ ನಡುವೆ ಸೆಣಸಾಟ ನಡೆಯಲಿದೆ.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯುರೋ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English