ಮಂಗಳೂರು : ಭಾರತೀಯ ಚಿತ್ರರಂಗದಲ್ಲೇ ಅತ್ಯಧಿಕ ಬಜೆಟನ್ನು ಹಾಕಿ ನಿರ್ದೇಶಕ ಶಂಕರ್ ‘ಎಂದಿರನ್’ ಚಿತ್ರ ನಿರ್ಮಿಸಿದ್ದಾರೆ. ‘ಎಂದಿರನ್’ ಚಿತ್ರದ ಒಟ್ಟು ಬಜೆಟ್ 162 ಕೋಟಿ ರೂಪಾಯಿಗಳು. ದೇಶಿಯ ಚಿತ್ರಗಳಲ್ಲಿ ಇಷ್ಟೊಂದು ಹಣ ಹಾಕಿದ ಚಿತ್ರ ಇದೇ ಮೊದಲು. ಸ್ಪೆಷಲ್ ಎಫೆಕ್ಟ್‌ಗಳೊಂದಿಗೆ ಅದ್ಬುತ ಸ್ಟಂಟ್ ಹಾಗೂ ಸಂಭಾಷಣೆಗಳು ಚಿತ್ರದ ಹೈಲೈಟ್ಸ್.
ಮೂರೂ ಭಾಷೆಗಳಲ್ಲಿ ಬಿಡುಗಡೆ ಗೊಂಡಿದೆ ಹಿಂದಿಯಲ್ಲಿ ‘ರೊಬೊಟ್’, ತಮಿಳಿನಲ್ಲಿ ‘ಎಂದಿರನ್’ ಮತ್ತು ತೆಲುಗಿನಲ್ಲಿ ‘ರೊಬೊ’. ರಜನಿಕಾಂತ್, ಡ್ಯಾನಿ, ಐಶ್ವರ್ಯಾ ರೈ ಮುಖ್ಯ ಪಾತ್ರಗಳಲ್ಲಿರುವ ಈ ಚಿತ್ರವನ್ನು ದುಡ್ಡು ಕೊಟ್ಟು ನೋಡಿದವನಿಗೆ ಎರಡೂವರೆ ತಾಸಿನ ಮನರಂಜನೆಗೆ ಕಮ್ಮಿ ಇಲ್ಲ .
ರೊಬೊಟ್ ಮತ್ತು ಮಾನವನ ನಡುವಿನ ಸಂಘರ್ಷವನ್ನೊಳಗೊಂಡ ತ್ರಿಕೋನ ಪ್ರೇಮಕಥೆ.ಗ್ರಾಫಿಕ್ಸ್ ಗಳಿಂದ ಪ್ರೇಕ್ಷಕರನ್ನು ರೋಮಾಂಚನ ಗೊಳಿಸುತ್ತದೆ. ದೃಶ್ಯಗಳು ಮತ್ತು ಎಫೆಕ್ಟ್‌ಗಳು ಕ್ಷಣ ಕ್ಷಣಕ್ಕೂ ಪ್ರೇಕ್ಷಕರನ್ನು ರಂಜಿಸಿದೆ.
ರೊಬೊಟ್‌ಗಳ ಕುರಿತು ಸಂಶೋಧನೆಯಲ್ಲಿ ನಿರತನಾಗಿರುವ ವಿಜ್ಞಾನಿಯೊಬ್ಬ ಸಂಶೋಧನೆ ಚಿಟ್ಟಿ ಎಂಬ ರೊಬೊಟನ್ನು ತಯಾರಿಸುತ್ತಾನೆ. ವಿಜ್ಞಾನಿ ಡಾ. ವಸೀಗರನ್ (ರಜನಿಕಾಂತ್) ಆತ ತಯಾರಿಸಿದ ರೋಬೋಟ್ ನಂಬಲಸಾಧ್ಯವಾದ ವಿಭಿನ್ನ ಸಾಮಾರ್ಥ್ಯವನ್ನು ಹೊಂದಿದೆ. ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುವ ಸಾಮಾರ್ಥ್ಯವಿರುವುದರಿಂದ ಭಾರತೀಯ ರಕ್ಷಣಾ ಪಡೆಗೆ ಸೇರಿಸುವುದು ವಸೀಗರನ್ ಆಶೆ ಆದರೆ ಗುರು ಬೊಹ್ರಾ ಆಕ್ಷೇಪಿಸುತ್ತಾನೆ. ಭಾವನೆಗಳೇ ಇಲ್ಲದ ಚಿಟ್ಟಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದೆಂದು ಗುರುತಿಸುವ ಸಾಮರ್ಥ್ಯವಿಲ್ಲ. ಯಾರನ್ನಾದರೂ ಚಿಟ್ಟಿ ಕೊಂದು ಬಿಡಬಹುದು. ಹಾಗಾಗಿ ಸೇನೆಗೆ ಸೇರ್ಪಡೆಗೊಳಿಸಲಾಗದು ಎಂದು ಆಕ್ಷೇಪಿಸುತ್ತಾನೆ.
ಆದರೂ ಛಲ ಬಿಡದ ವಸೀಗರನ್ ಆತನ ವಿದ್ಯಾರ್ಥಿನಿ ಗೆಳತಿ ಸಾನಾ (ಐಶ್ವರ್ಯಾ ರೈ) ಜೊತೆ ಗೂಡಿ ಚಿಟ್ಟಿಗೆ ತರಬೇತಿ ನೀಡಿ ಮನುಷ್ಯರ ಭಾವನೆಗಳನ್ನು ಗುರುತಿಸುವಂತೆ ಬದಲಾವಣೆಗಳನ್ನು ಮಾಡಿ, ಯಶಸ್ವಿಯೂ ಆಗುತ್ತಾರೆ.
ಭಾವನೆಗಳನ್ನು ಗ್ರಹಿಸಿದ ರೊಬೊಟ್ ಚಿಟ್ಟಿ ತನ್ನ ನಿರ್ಮಾತೃ ವಸೀಗರನ್‌ಗೆ ತಿರುಗಿ ಬಿದ್ದು ಸಾನಾಳನ್ನು ಪ್ರೀತಿಸಲು ಆರಂಭಿಸುತ್ತದೆ. ಚಿತ್ರಕ್ಕೆ ತಿರುವು ಲಭಿಸುವುದು ಈ ಹೊತ್ತಿನಲ್ಲೇ ಎದುರಾಳಿ ಬೊಹ್ರಾನಿಗೂ ಇದೇ ಬೇಕಾಗಿತ್ತು.
ಚಿತ್ರ ಮುಂದೆ ಸಾಕಷ್ಟು ಕುತೂಹಲದಿಂದ ಸಾಗುತ್ತದೆ. ಚಿಟ್ಟಿ, ವಸೀಗರನ್, ಸಾನಾ ಈ ಮೂವರ ತ್ರಿಕೋನ ಪ್ರೇಮಾ ಮುಂದೇನಾಗುತ್ತದೆ ಎಂಬುದನ್ನು ಚಿತ್ರದಲ್ಲಿ ನಿರ್ದೇಶಕ ಶಂಕರ್ ಮನೋಜ್ಞವಾಗಿ ತೋರಿಸಿದ್ದಾರೆ.
ಮೊದಲರ್ಧದಲ್ಲಿ ರೊಬೊಟ್‌ನ ರೋಮಾಂಚನಕಾರಿ ಸಾಹಸಗಳು , ದ್ವಿತೀಯಾರ್ಧ ಕ್ಲೈಮಾಕ್ಸ್ ಎಷ್ಟು ಹೊತ್ತಿಗೆ ಬರುತ್ತದೆ ಎನ್ನುವ ಕುತೂಹಲ, ಅತ್ಯುತ್ತಮ ಕಥೆ, ತಿರುವುಗಳು, ಆಕ್ಷನ್ ಥ್ರಿಲ್ಲಿಂಗ್ ಗಳ ನಡುವೆ ಪ್ರೇಕ್ಷಕನಿಗೆ ಉತ್ತಮ ಮನರಂಜನೆ ನೀಡಿದೆ.
ಚಿತ್ರಕಥೆಯಲ್ಲಿ ನಿರ್ದೇಶಕ ಶಂಕರ್ ಎಡವಿಲ್ಲ. ಒಂದು ಅರ್ಥಪೂರ್ಣ ಸಂದೇಶವನ್ನೂ ಪ್ರೇಕ್ಷಕರಿಗೆ ನೀಡುತ್ತಾರೆ. ವಸೀಗರನ್, ವೈದ್ಯಕೀಯ ವಿದ್ಯಾರ್ಥಿನಿ ಸಾನಾ ಮತ್ತು ಚಿಟ್ಟಿಯ ನಡುವೆ ನಡೆಯುವ ತ್ರಿಕೋನ ಪ್ರೇಮಕಥೆಗೆ ಮಾನವ-ರೊಬೊಟ್ ಸಂಘರ್ಷವು ಹೊಸ ಆಯಾಮವನ್ನೇ ಸೃಷ್ಟಿಸುತ್ತದೆ.
ಎ.ಆರ್. ರೆಹಮಾನ್ ಸಂಗೀತ ಥ್ರಿಲ್ಲಿಂಗ್ ಅನುಭವ ನೀಡಿದೆ. ರತ್ನವೇಲು ಕ್ಯಾಮರಾ ಕೂಡ ದ್ರಶ್ಯಗಳನ್ನು ಸೆರೆ ಹಿಡಿಯುವಲ್ಲಿ ಒಳ್ಳೆಯ ಕೈ ಚಾಲಕ ತೋರಿಸಿದೆ.
Click this button or press Ctrl+G to toggle between Kannada and English