ಬಂಟ ಜನ ಪ್ರತಿನಿಧಿಗಳಿಗೆ ಸರಕಾರದಲ್ಲಿ ಮಾನ್ಯತೆ ನೀಡಲಿ : ಎ ಸದಾನಂದ ಶೆಟ್ಟಿ

11:19 AM, Friday, August 13th, 2021
Share
1 Star2 Stars3 Stars4 Stars5 Stars
(No Ratings Yet)
Loading...

sadananda Shettyಮಂಗಳೂರು : ಪ್ರತಿಷ್ಠಿತ ಬಂಟ ಸಮುದಾಯವು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ, ಉದ್ಯಮ, ಶಿಕ್ಷಣ, ಕೈಗಾರಿಕೆ, ಸಿನಿಮಾ ಸಹಿತ ಹಲವಾರು ಕ್ಷೇತ್ರಗಳಲ್ಲಿ, ದೇಶವಿದೇಶಗಳಲ್ಲಿ ಸಾಧನೆಗಳನ್ನು ಮಾಡಿದ ದಾಖಲೆಗಳಿವೆ. ಈ ನಿಟ್ಟಿನಲ್ಲಿ ಬಂಟ ಜನ ಪ್ರತಿನಿಧಿಗಳಿಗೆ ಸರಕಾರದಿಂದ ಮಾನ್ಯತೆ ನೀಡದಿರುವುದು ಸಮಂಜಸವಲ್ಲ, ಈ ಕೂಡಲೇ ಮುಖ್ಯ ಮಂತ್ರಿಗಳು ಬಲಿಷ್ಠ ಬಂಟ ಸಮುದಾಯದ ಶಾಸಕರಿಗೆ ಸರಕಾರದಲ್ಲಿ ಮಾನ್ಯತೆ ನೀಡಬೇಕೆಂದು ಇಂಟರ್ ನ್ಯಾಶನಲ್ ಬಂಟ್ಸ ವೆಲ್ ಫೇರ್ ಟ್ರಸ್ಟನ ಅಧ್ಯಕ್ಷ ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಅಧ್ಯಕ್ಷ ಎ. ಸದಾನಂದ ಶೆಟ್ಟಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ವಿಧಾನ ಸಭಾ, ಲೋಕಸಭಾ ಚುನಾವಣೆಯಲ್ಲಿ ಬಂಟರು ಸರಕಾರ ರಚನೆಯಲ್ಲಿ ಮಹತ್ವದ ಕೊಡುಗೆ ನೀಡಿರುತ್ತಾರೆ. ಬಂಟರು ಪ್ರತಿನಿಧಿಸಿದ ಎಲ್ಲಾ ಕ್ಷೇತ್ರಗಳಲ್ಲಿ ಗೆದ್ದು ಸರಕಾರಕ್ಕೆ ಶಾಸಕರನ್ನು ಕೊಟ್ಟಿರುತ್ತಾರೆ. ಈ ನಿಟ್ಟಿನಲ್ಲಿ ಸರಕಾರ ಗಮನ ಹರಿಸಿ ಸರಕಾರದಲ್ಲಿ ಬಂಟರಿಗೂ ಮಾನ್ಯತೆ ನೀಡಿ ಇದನ್ನು ಉಳಿಸಿ ಬೆಳೆಸಬೇಕಾಗಿದೆ. ಹಾಲಾಡಿ ಶ್ರೀನಿವಾಸ್ ಶೆಟ್ಟಿ, ರಾಜೇಶ್ ನಾಯ್ಕ್ ಉಳಿಪಾಡಿ, ಡಾ. ಭರತ್ ಶೆಟ್ಟಿ, ಸುಕುಮಾರ್ ಶೆಟ್ಟಿ ಬೈಂದೂರು, ಹರೀಶ್ ಪೂಂಜ, ಇವರು ಶಾಸಕರಾಗಿ ಸಾರ್ವಜನಿಕವಾಗಿ ಗುರುತಿಸಿ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ.

ಬಂಟರು ಸ್ವಾಭಿಮಾನಿಗಳು, ಅಧಿಕಾರಕ್ಕಾಗಿ ಲಾಭಿ ಮಾಡುವವರಲ್ಲ, ಅವರ ದಕ್ಷ, ಪ್ರಾಮಾಣಿಕ, ಭ್ರಷ್ಠಾಚಾರ ರಹಿತ ಸೇವೆಯನ್ನು ಸರಕಾರ ಗಮನಿಸಬೇಕಿತ್ತು, ಗುರುತಿಸಬೇಕಿತ್ತು. ಇನ್ನಾದರೂ ಸರಕಾರ ಬಂಟರ ಮನವಿಯನ್ನು ಪರಿಶೀಲಿಸಿ ಸರಕಾರದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕೆಂದು ಸರಕಾರವನ್ನು ದೇಶವಿದೇಶದ ಬಂಟರ ಪರವಾಗಿ ಎ. ಸದಾನಂದ ಶೆಟ್ಟಿ ಅಗ್ರಹಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English