ಜಯಶ್ರೀಯವರ ಸಾಧನೆ ಇತರರಿಗೂ ಪ್ರೇರಣೆಯಾಗಲಿ: ಹರೀಶ್‌ ಆಚಾರ್‌

9:25 PM, Friday, August 13th, 2021
Share
1 Star2 Stars3 Stars4 Stars5 Stars
(No Ratings Yet)
Loading...

Jayashreeಮಂಗಳೂರು: ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬಂತೆ ತಮ್ಮ 44 ನೇ ವಯಸ್ಸಿನಲ್ಲಿ ಎಸ್‌.ಎಸ್‌.ಎಲ್‌.ಸಿ ಪಾಸಾಗಿ ಅಪೂರ್ವ ಸಾಧನೆ ಮಾಡಿರುವ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಗುಮಾಸ್ತರಾಗಿರುವ ಜಯಶ್ರೀ ಅವರನ್ನು ಶುಕ್ರವಾರ ಜಿಲ್ಲೆಯ ಸಹಕಾರಿ ರಂಗದ ಧುರೀಣರು ಭೇಟಿಮಾಡಿ ಆತ್ಮೀಯವಾಗಿ ಸನ್ಮಾನಿಸಿದರು.

ವಿಶ್ವಕರ್ಮ ಕೋಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ ಮತ್ತು ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಕೇಂದ್ರಗಳ ಅಧ್ಯಕ್ಷ ಹರೀಶ್‌ ಆಚಾರ್‌, ಕರಾವಳಿ ಕ್ರೆಡಿಟ್‌ ಕೋಆಪರೇಟಿವ್‌ ಸೊಸೈಟಿ ಅಧ್ಯಕ್ಷ ಎ ಎಸ್‌ ವೆಂಕಟೇಶ್‌, ಒಡಿಯೂರು ವಿವಿದೋದ್ಧೇಶ ಸಹಕಾರಿ ನಿಯಮಿತದ ಅಧ್ಯಕ್ಷ ಲಯನ್‌ ಎ ಸುರೇಶ್‌, ಆತ್ಮಶಕ್ತಿ ವಿವಿದೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್‌ ಬೋಳಾರ ಅವರು ಜಯಶ್ರೀ ಅವರಿಗೆ ಶಾಲು ಹೊದಿಸಿ, ಫಲಪುಷ್ಪ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹರೀಶ್‌ ಆಚಾರ್‌, “ತಮ್ಮ 44 ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವ ಜಯಶ್ರೀಯವರು ಇತರರಿಗೆ ಮಾದರಿ. ಅವರ ಸಾಧನೆ ಹೆಚ್ಚಿನ ಜನರಿಗೆ ತಲುಪಿ ಅವರಿಗೂ ಪ್ರೇರಣೆಯಾಗಬೇಕು,” ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಮಂಗಳೂರು ವಿಶ್ವವಿದ್ಯಾನಿಲಯದ ರೆಡ್‌ಕ್ರಾಸ್‌ ನೋಡಲ್‌ ಅಧಿಕಾರಿ ಡಾ. ಗಣಪತಿ ಗೌಡ ಅವರೂ ಉಪಸ್ಥಿತರಿದ್ದರು. ಐದನೇ ತರಗತಿ ಓದಿದ್ದ ಮಂಗಳೂರಿನ ವೆಲೆನ್ಶಿಯಾ ನಿವಾಸಿಯಾಗಿರುವ ಜಯಶ್ರೀ, ಖಾಸಗಿ ಟ್ಯೂಷನ್‌ ಪಡೆದು ಈ ಬಾರಿ ಎಸ್.ಎಸ್‌.ಎಲ್‌.ಸಿ ಪಾಸಾಗಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English