ʼದೇಶ ಮೊದಲುʼ ಎಂಬ ಭಾವನೆ ನಮ್ಮೆಲ್ಲರಲ್ಲಿ ಮೂಡಲಿ: ಡಾ. ಶಿಕಾರಿಪುರ ಕೃಷ್ಣಮೂರ್ತಿ

5:21 PM, Sunday, August 15th, 2021
Share
1 Star2 Stars3 Stars4 Stars5 Stars
(No Ratings Yet)
Loading...

Konaje Universityಮಂಗಳೂರು: ದೇಶದಲ್ಲಿ ಜನರ ಮೂಲಭೂತ ಅಗತ್ಯಗಳಾದ ಆಹಾರ, ನೀರು ಮತ್ತು ವಿದ್ಯೆ ಉಚಿತವಾಗಿ ಸಿಗುವಂತಾಗಬೇಕು. ಇದನ್ನು ಬಿಟ್ಟು ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿಯಿಂದ ನೋಡಿದರೆ ಸಮಾಜ ಅಧೋಗತಿಗಿಳಿಯುವುದು ಖಚಿತ, ಎಂದು ನಿವೃತ್ತ ಪ್ರಾಧ್ಯಾಪಕ, ನಟ, ಚಿಂತಕ ಡಾ. ಶಿಕಾರಿಪುರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ಎನ್‌ಎಸ್‌ಎಸ್‌ ಮುಂದಾಳತ್ವದಲ್ಲಿ ಆಯೋಜಿಸಲಾಗಿದ್ದ 75 ನೇ ಸ್ವಾತಂತ್ರ್ಯೋತ್ಸವದ ಉದ್ಘಾಟನೆ (ʼಆಜಾದಿ ಕ ಅಮೃತ್‌ ಮಹೋತ್ಸವ್‌ʼ) ನೆರವೇರಿಸಿ ಮಾತನಾಡಿದ ಅವರು, ದೇಶವಾಸಿಗಳು ಸ್ವಾತಂತ್ರ್ಯದ ಮೌಲ್ಯದ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ. ʼದೇಶ ಮೊದಲುʼ, ಜಾತಿ, ಧರ್ಮ ನಂತರ ಎಂಬ ಭಾವನೆ ಎಲ್ಲರ ಮನಸ್ಸಲ್ಲಿ ಮೂಡಬೇಕು, ಎಂದರು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ, ಜಾರಿಗೆ ಬರಲಿರುವ ನೂತನ ಶಿಕ್ಷಣ ಪದ್ಧತಿ ದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಸಮಗ್ರ ಬದಲಾವಣೆ ತರಲಿದೆ. ದೇಶದ ಮುಂದಿನ 25-30 ವರ್ಷಗಳಷ್ಟು ಭವಿಷ್ಯ ಈ ಶಿಕ್ಷಣ ನೀತಿಯ ಮೇಲಿನ ನಿಂತಿದೆ, ಎಂದರು.
Konaje University
ಕುಲಸಚಿವ (ಆಡಳಿತ) ಡಾ. ಕಿಶೋರ್‌ ಕುಮಾರ್‌ ಸಿ ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕುಲಸಚಿವ (ಪರೀಕ್ಷಾಂಗ) ಪ್ರೊ. ಪಿ ಎಲ್‌ ಧರ್ಮ ವಂದನಾರ್ಪಣೆಗೈದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು. ಎನ್‌ಎಸ್‌ಎಸ್‌ ಸಂಯೋಜಕ ಡಾ. ಗೋವಿಂದರಾಜು ಬಿ ಎಂ ಮೊದಲಾದವರು

ಧ್ವಜಾರೋಹಣ- ವನಮಹೋತ್ಸವ
ಮಂಗಳಾ ಸಭಾಂಗಣದ ಆವರಣದಲ್ಲಿರುವ ಶಹೀದ್‌ ಸ್ಥಳಕ್ಕೆ ತೆರಳಿದ ಗಣ್ಯರು ದೇಶಕ್ಕಾಗಿ ಪ್ರಾಣಾರ್ಪಣೆಗೈದವರ ಸಮಾಧಿಗೆ ಪುಷ್ಪಗುಚ್ಛ ಇಟ್ಟು ಗೌರವ ಸಲ್ಲಿಸಿದರು. ನಂತರ ಧ್ವಜಾರೋಹಣ ನಡೆಯಿತು. ಕಾರ್ಯಕ್ರಮದ ಭಾಗವಾಗಿ ಎನ್‌ಎಸ್‌ಎಸ್‌ ವತಿಯಿಂದ ಅತಿಥಿಗಳು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಅವರ ಹೆಸರಿನಲ್ಲಿ ಹಣ್ಣು ಹಂಪಲುಗಳ ಗಿಡನೆಟ್ಟು ʼವನಮಹೋತ್ಸವʼವನ್ನು ಅರ್ಥಪೂರ್ಣವಾಗಿ ಆಚರಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English