ಮಂಗಳೂರು : ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಮೈದಾನ ದಲ್ಲಿ ಆ.15ರ ಭಾನುವಾರ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.
ನಮ್ಮ ದೇಶವಿಂದು ಇಡೀ ವಿಶ್ವದಲ್ಲೇ ಒಂದು ಚಾರಿತ್ರಿಕ ಕಾಲಘಟ್ಟದಲ್ಲಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು ೭೫ವರ್ಷ ತುಂಬಿತು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಇದನ್ನು ಅಮೃತ ಮಹೋತ್ಸವ ಎನ್ನಲಾಗುತ್ತಿದೆ. ಸನ್ಮಾನ್ಯ ಪ್ರಧಾನ ಮಂತ್ರಿಗಳು ಜನತೆ ಅಪೇಕ್ಷೇಯಂತೆ ನಾವೆಲ್ಲಾ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಯ ಅಮೃತ ಘಳಿಗೆಯಲ್ಲಿದ್ದೇವೆ.
ಮಿತ್ರರೆ, ಅನೇಕ ಶತಮಾನಗಳು ನಮ್ಮ ಸ್ವಾತಂತ್ರ್ಯಸಂಗ್ರಾಮದ ನಂತರ ನಮಗೆ ಸಿಕ್ಕಿದ ಸ್ವಾತಂತ್ರ್ಯ ಕ್ಕೆ ಅದೆಷ್ಟು ಜೀವ ಬಲಿದಾನವಾಗಿದೆ. ಅದೆಷ್ಟೋ ಕಷ್ಟನಷ್ಟಗಳನ್ನು ನಮ್ಮ ಹಿರಿಯರು ಅನುಭವಿಸಿದರು. ಅದೆಲ್ಲವೂ ಒಂದು ಇತಿಹಾಸ. ಆದರೆ ಅದನ್ನು ಮರೆಯದೆ ನಮ್ಮ ರಾಷ್ಟçದ ಸ್ವತಂತ್ರ-ಸಾರ್ವಭೌಮ ಜೀವನವನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಕಟ್ಟುವ ಸುವರ್ಣ ಸಂದರ್ಭ ನಮಗೆ ಇಂದು ಒದಗಿ ಬಂದಿದೆ. ಅನೇಕ ಗಂಭೀರ ಸವಾಲಿನ ಮಧ್ಯೆಯೂ ರಾಷ್ಟç ಜೀವನದ ಭಿನ್ನತಾ ಮೌಲ್ಯಗಳ ಅಡಿಗಲ್ಲಿನಲ್ಲಿ ಈ ಸವಾಲುಗಳಿಗೆ ಉತ್ತರ ಕೊಡಬೇಕಾಗಿದೆ. ಕಳೆದ ೭೪ವರ್ಷಗಳ ಪರಿಶ್ರಮದ ನಂತರವೂ ದೇಶವಾಸಿಗಳ ಪೈಕಿ ಕಟ್ಟ ಕಡೆಯ ಬಡವನವರೆಗೆ ಕೋಟಿ ಕೋಟಿ ಭಾರತೀಯರ ಹೃದಯಕ್ಕೆ ನಮ್ಮ ಸ್ವಾತಂತ್ರ್ಯದ ಅಮೃತ ಸ್ಪರ್ಶ ಅನುಭವಕ್ಕೆ ಬರುತ್ತಿದೆಯಾ ಎಂದು ನಮ್ಮನ್ನು ನಾವು ಪ್ರಶ್ನಿಶಿಕೊಳ್ಳಬೇಕಾಗಿದೆ ಎಂದು ಸಚಿವರಾದ ಎಸ್. ಅಂಗಾರ ಹೇಳಿದರು .
ಜಗತ್ತಿನಲ್ಲಿ ಇನ್ಯಾರಿಗೂ ಸಾಟಿಯಿಲ್ಲದ ಅತ್ಯಂತ ಶ್ರೇಷ್ಠ ಸಂಸ್ಕೃತಿ, ಪರಂಪರೆ, ಇತಿಹಾಸ, ತತ್ವಜ್ವಾನ- ಜೀವನಾದರ್ಶಗಳ ಹಿರಿಮೆ ನಮ್ಮದು. ಇದನ್ನು ನಾವು ನೆನಪು ಮಾಡಿಕೊಳ್ಳೋಣ. ನಾಡಿನ ಹಿರಿಯ ಮಹಾಕವಿಗಳಾದ ಕುವೆಂಪುರವರ ಸ್ಪೂರ್ತಿ ವಾಣಿಯಂತೆ “ನಡೆ ಮುಂದೆ ನಡೆ ಮುಂದೆ, ನುಗ್ಗಿ ನಡೆಮುಂದೆ, ಜಗ್ಗದೆಯೇ, ಕುಗ್ಗದೆಯೇ, ಹಿಗ್ಗಿ ನಡೆ ಮುಂದೆ, ನಾನಳಿವೆ ನೀನಳಿವೆ ನಮ್ಮೆಲುಬುಗಳ ಮೇಲೆ, ಮೂಡುವುದು ಮೂಡುವುದು ನವಭಾರತದ ಲೀಲೆ” ಸ್ವಾತಂತ್ರö್ಯ ಸಂಘರ್ಷದಲ್ಲಿ ಹೊತ್ತಿ ಉರಿದ ಬಲಿದಾದ ಕಥೆಗಳು ನಮ್ಮನ್ನು ಬಡಿದೆಬ್ಬಿಸುಂತಾಗಲಿ.
ಅತ್ಯಂತ ಸರ್ವ ಸಂಪದ್ಭರಿತವಾಗಿದ್ದ ಈ ದೇಶದ ಮೇಲೆ ಕಳ್ಳದೃಷ್ಠಿಯಿಂದ ಬಂದ ಬ್ರಿಟೀಷರಾದಿಯಾಗಿ ಎಲ್ಲಾ ವಿದೇಶಿಗಳು, ಭಾರತವನ್ನು ದುರ್ಬಲಗೊಳಿಸಿದರು. ಇದರೊಳಗೆ ನಮ್ಮದೇ ಕೆಲ ದೌರ್ಬಲ್ಯ ಕೂಡಾ ಸೇರಿಕೊಂಡಿದೆ. ಆದರೆ ಅದನ್ನು ಮೆಟ್ಟಿ ನಿಲ್ಲುವಲ್ಲಿ ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮ ಐತಿಹಾಸಿಕ ದಿನ ಎಂಬುದು ನಮಗೆಲ್ಲಾ ತಿಳಿದಿರುವ ವಿಚಾರ. ಆದರೆ ಈ ಸಂದರ್ಭದಲ್ಲಿ ನಾವೆಲ್ಲಾ ನೆನಪು ಮಾಡಿಕೊಳ್ಳಬೇಕಾದ ಈ ಭಾಗದ ಹೋರಾಟವೊಂದಿದೆ. 1835-1827 ರಲ್ಲಿ “ಅಮರ ಸುಳ್ಯದ ಹೋರಾಟ, ಕೊಡಗಿನಿಂದ-ಮಂಗಳೂರಿ ನವರೆಗೆ ಆಂಗ್ಲರ ಎದೆ ನಡುಗಿಸಿದ ಇತಿಹಾಸ ಮರೆಯದಿರೋಣ.
ತೀರಾ ಹಿಂದುಳಿದ ಹಳ್ಳಿ ಸಾಮಾನ್ಯ ರೈತಾಪಿ-ಕೃಷಿ-ಕೂಲಿ-ಕಾರ್ಮಿಕರ ಬ್ರಿಟೀಷರ ಕೆಟ್ಟ ಆಡಳಿತದ ವಿರುದ್ಧ ಸಿಡಿದೆದ್ದು ಹೋರಾಡಿ ೧೩ ದಿನಗಳ ಕಾಲ ಈ ಭಾಗದ ಜನತೆಗೆ ಸ್ವಾತಂತ್ರö್ಯದ ರುಚಿ ಉಣ್ಣಿಸಿರುವುದನ್ನು ಮರೆಯದಿರೋಣ. ಇಂತಹ ಅನೇಕ ಹೋರಾಟಗಳು ನಮಗೆಲ್ಲಾ ಸ್ಪೂರ್ತಿದಾಯಕ.
ಲೋಕಮಾನ್ಯ ಬಾಲಗಂಗಾಧರ ತಿಲಕರಿಂದ ಹಿಡಿದು, ಭಗತ್ ಸಿಂಗ್-ಚAದ್ರಶೇಖರ ಅಜಾದ್-ನೇತಾಜಿ ಸುಭಾಶ್ಚಂದ್ರ ಬೋಸ್-ಝಾನ್ಸಿ ರಾಣಿ ಲಕ್ಷಿö್ಮÃಬಾಯಿ-ಕಿತ್ತೂರು ರಾಣಿ ಚೆನ್ನಮ್ಮ-ರಾಷ್ಟçಪಿತ ಮಹಾತ್ಮ ಗಾಂಧಿಜಿ, ವಿನಾಯಕ ದಾಮೋದರ ಸಾವರ್ಕರ್-ಉಳ್ಳಾಲದ ರಾಣಿ ಅಬ್ಬಕ್ಕ ಸಾವಿರಾರು ಲಕ್ಷಾಂತರ ಮಹಾಪುರುಷರ ಸಮರ್ಪಣೆಯಿಂದ ಭಾರತದ ಸ್ವಾತಂತ್ರö್ಯ ದ್ವಜ ನಭೋಮಂಡಲದಲ್ಲಿ ಅರಳಿತು.
ತಾಯಿ ಭಾರತಮಾತೆಯ ದಿವ್ಯ ಮಂದಿರದಲ್ಲಿ ಅವಳ ಸುಪುತ್ರ-ಪುತ್ರಿಯರ, ವಿರೋಚಿತ-ವಿರಾಗ್ರಣಿ, ಹೋರಾಟ-ತ್ಯಾಗದ ಫಲ ಇಂದು ನಾವು ಅನುಭವಿಸುವ ಸ್ವಾತಂತ್ರö್ಯದ ಸವಿ.
ಬಂಧುಗಳೆ ಕೊರೊನಾ ಸೋಂಕಿನ ಕಷ್ಟಕಾಲದಲ್ಲಿ ನಮ್ಮೆಲ್ಲರ ಹೆಮ್ಮೆಯ ಸನ್ಮಾನ್ಯರೂ ಆದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಯವರ ಮಾರ್ಗದರ್ಶನ ಸಿಕ್ಕಿರುವುದು ಪುಣ್ಯವೆಂದರೆ ತಪ್ಪಾಗಲಾಗಲಾರದು, ರಾಜ್ಯ ಸರಕಾರದ ಮಾನ್ಯ ಮುಖ್ಯಮಂತ್ರಿಗಳದ ಶ್ರೀ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ನಮ್ಮ ಸರಕಾರ ಅನೇಕ ಅಭಿವೃದ್ಧಿ ಕಾರ್ಯದ ಜೊತೆ ಆರ್ಥಿಕ-ಸಾಮಾಜಿಕ ಚಟುವಟಿಕೆಗೆ ಚೈತನ್ಯ ತುಂಬುವಲ್ಲಿ ಯಶಸ್ವಿಯಾಗಿದೆ.
ನಮ್ಮ ಜಿಲ್ಲೆ ಕೃಷಿ ಕ್ಷೇತ್ರದಲ್ಲಿ ಹಡಿಲು ಭೂಮಿಯಲ್ಲಿ ಭತ್ತ ಬೆಳೆಯುವ ಹೊಸ ಆಂದೋಲನದೊAದಿಗೆ ಕಾಲಕಾಲಕ್ಕೆ ಬೇಕಾದ ಗೊಬ್ಬರ, ಬಿತ್ತನೆ ಬೀಜ ಸಹಾಯಧನದೊಂದಿಗೆ ಕೃಷಿ ಯಂತ್ರೋಪಕರಣ, ಫಸಲ್ ಭೀಮಾ ಯೋಜನೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಲ್ಲದೆ ಭಾರತೀಯ ಕೃಷಿ ಪರಂಪರೆ ಸಾವಯವ ಕೃಷಿಗೆ ಒತ್ತು, ಮಣ್ಣಿನ-ನೀರಿನ-ಪ್ರಕೃತಿಯ ಪೋಷಣೆಯ ಅನೇಕ ಕ್ರಾಂತಿಕಾರಿ ನಿಲುವುಗಳ ಮೂಲಕ ದೇಶದ ಬೆನ್ನೆಲುಬಿನಂತಿರುವ ಕೃಷಿಕರಿಗೆ ಇನ್ನಿಲ್ಲದ ಶಕ್ತಿ ತುಂಬುವಲ್ಲಿ ಯಶಸ್ವೀ ಯಾಗಿದೆ.
ಪ್ರಧಾನಿಗಳ ಕನಸಿನಂತೆ, ರೈತರ ಆರ್ಥಿಕ ಶಕ್ತಿ ದ್ವಿಗುಣಗೊಳಿಸುವ ಹಾದಿಯಲ್ಲಿ ಮುಂದುವರಿದಿದೆ. ಸುಳ್ಯ-ಪುತ್ತೂರು-ಕಡಬ-ಬಂಟ್ವಾಳ-ಬೆಳ್ತಂಗಡಿ – ಮಂಗಳೂರಿನಲ್ಲಿ ಜನರೇ ರೂಪಿಸಿಕೊಂಡ ಉದ್ಯೋಗ ನೈಪುಣ್ಯ(ಕೌಶಲ್ಯ) ತರಬೇತಿಗಳು ಜಿಲ್ಲೆಯ ಜನಜೀವನಕ್ಕೆ ಶಕ್ತಿ ತುಂಬಿದೆ.
ಆರೊಗ್ಯ:- ವಿಶ್ವವನ್ನೇ ತಲ್ಲಣಗೊಳಿಸಿದ ಕೋವಿಡ್ ನಿಯಂತ್ರಣಕ್ಕೆ ಈಗಾಗಲೇ ಜಿಲ್ಲೆಯ 12,56,821 ಜನರಿಗೆ ಉಚಿತ ಲಸಿಕೆ ನೀಡಲಾಗಿದೆ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿಯೊಂದಿಗೆ, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉನ್ನತೀಕರಿಸಿ-ಆಕ್ಸಿಜನ್ ಪೂರೈಕೆಯೊಂದಿಗೆ-ಜನೌಷಧಿ ಕೇಂದ್ರಗಳ ಮೂಲಕ ಜನತೆಯ ಆರೋಗ್ಯಕ್ಕೆ ಪ್ರಥಮ ಆದ್ಯತೆಯನ್ನು ಕೊಡಲಾಗಿದೆ. 23.5 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಮೆಡಿಸಿನ್ ಬ್ಲಾಕ್, 35.2 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಲ್ ಸರ್ಜಿಕಲ್ ಬ್ಲಾಕ್, 3.9 ಕೋಟಿ ವೆಚ್ಚದಲ್ಲಿ ಐ.ಸಿ.ಯು ಬೆಡ್-ಮಕ್ಕಳಿಗಾಗಿ ಸ್ಪೆಷಲ್ ಬ್ಲಾಕ್, 132 ವೆಂಟಿಲೇಟರ್, 500 ಬೆಡ್‌ನ ಸೆಂಟರ್ ಆಕ್ಸಿಜನ್ ವ್ಯವಸ್ಥೆ, ಇತ್ಯಾದಿ ಸೇವೆಗಳು ಸಿದ್ಧವಾಗಿದೆ.
ವಿಪತ್ತು ನಿರ್ವಹಣೆ:- ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಸರಕಾರ ಕಾಲಕಾಲಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮಾನವ ಜೀವಹಾನಿ, ಜಾನುವಾರು, ಮನೆ, ಕೃಷಿಹಾನಿಗಳಿಗೆ ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಪರಿಹಾರ ಒದಗಿಸಲಾಗಿದೆ. ಪ್ರವಾಹ ಹಾನಿಗೊಳಗಾದ ರಸ್ತೆ, ಶಾಲೆ, ಸೇತುವೆ ಇತ್ಯಾದಿ ರೂ.1,859 ಲಕ್ಷ ಅನುದಾನದಲ್ಲಿ 584 ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮೂಲಕ 65 ಕಾಲುಸಂಕ, 10 ಮೀನು ಮಾರುಕಟ್ಟೆ, 12 ತಡೆಗೋಡೆ, 3 ಥೀಮ್ ಪಾರ್ಕ್, 13 ಸಮುದಾಯ ಭವನ ನಿರ್ಮಾಣವಾಗಿದೆ.
ಆಹಾರ ನಾಗರೀಕ ಪೂರೈಕೆ:- ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಮೇ ತಿಂಗಳಿನಿಂದ ನವೆಂಬರ್‌ವರೆಗೆ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಯವರಿಗೆ ಉಚಿತವಾಗಿ ೫ ಕೆಜಿ ಅಕ್ಕಿ ನೀಡಲಾಗುತ್ತಿದೆ. ಆತ್ಮ ನಿರ್ಭರ ಯೋಜನೆಯಡಿ ಮೇ ಜೂನ್ ತಿಂಗಳಲ್ಲಿ ವಲಸೆ ಕಾರ್ಮಿಕರಿಗೆ 10 ಕೆಜಿ ಅಕ್ಕಿ, ಕಡಳೆಕಾಳು ಒದಗಿಸಲಾಗಿದೆ. ಕೇಂದ್ರ ಸರಕಾರದ ಅನುಮತಿಯೊಂದಿಗೆ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ಪ್ರಗತಿಯಲ್ಲಿದೆ. ಸಾಂಕೃತಿಕವಾಗಿ ಜಿಲ್ಲಾ ರಂಗಮಂದಿರ, ತುಳು ಭವನ, ಬ್ಯಾರಿ ಭವನ, ಕೊಂಕಣಿ ಭವನ ಹಾಗೂ ಸಾಂಸ್ಕೃತಿಕ ಭವನ ನಿರ್ಮಾಣಗೊಳ್ಳುತ್ತಿದೆ. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ವಿದ್ಯಾರ್ಥಿನಿಲಯಗಳಿಗಾಗಿ ಸುಮಾರು2300 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ.73,37 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ಒದಗಿಸಲಾಗಿದೆ.
ಶಿಕ್ಷಣ:- ಜಿಲ್ಲೆಯ 8 ಸರಕಾರಿ ಕಾಲೇಜುಗಳಿಗೆ 7 ಕೋಟಿ 35 ಲಕ್ಷ ವೆಚ್ಚದಲ್ಲಿ ಕೊಠಡಿ ನಿರ್ಮಾಣ ಪ್ರಾರಂಭವಾಗಿದೆ.
ಮೀನುಗಾರಿಕೆ ಇಲಾಖೆ:- ಪ್ರತೀ ಲೀಟರ್ ಡೀಸೆಲ್‌ಗೆ ರೂ.೯ ರಂತೆ, 29,590 ಲೀಟರ್, 1022 ಫಲಾನುಭವಿಗಳಿಗೆ ನೀಡಲಾಗಿದೆ.
ಕಾರ್ಮಿಕ ಇಲಾಖೆ, ನರೇಗಾ ಯೋಜನೆ, ಸ್ವಚ್ಛ ಭಾರತ್ ಮಿಷನ್, ಕಪ್ಪು ನೀರು ನಿರ್ವಹಣೆ, ಸಣ್ಣ ನೀರಾವರಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಬಂಧುಗಳೇ ಮತ್ತೊಮ್ಮೆ ನೆನಪು ಮಾಡಿಕೊಳ್ಳೋಣ, ಶತಶತಮಾನಗಳ ಹಿಂದೆ ಮೆಕಾಲೆ ಮುಂತಾದ ಅನೇಕ ವಿಚಾರಗಳಿಂದ ಮಂಕು ಕವಿದ ಭಾರತಕ್ಕೆ 1947ರ ಆಗಸ್ಟ್-15ರ ಸ್ವಾತಂತ್ರö್ಯ ಸೂರ್ಯನೊಂದಿಗೆ ಮತ್ತೆ ಬೆಳಕು ಬಂದಿದೆ. ಪ್ರತಿಯೊಬ್ಬ ದೇಶವಾಸಿಯು ಯೋಚಿಸಬೇಕು. ಮಹಾಪುರುಷ ಬುದ್ದನ ನುಡಿಗಳಂತೆ “ಕೇವಲ ನನ್ನ ಪ್ರಮಾಣದಿಂದ ಯಾವುದನ್ನೂ ಒಪ್ಪಬೇಡ, ವಿಚಾರವಂತನಾಗು, ನಿನಗೆ ನೀನೆ ಬೆಳಕಾಗು” ಅದರಂತೆ ನಾವೆಲ್ಲರೂ ಸ್ವಾವಲಂಭಿಗಳಾಗಿ, ಸ್ವಾಭಿಮಾನಿಗಳಾಗಿ ಆತ್ಮ ನಿರ್ಭರ ಭಾರತದೆಡೆಗೆ ಹೆಜ್ಜೆ ಇಡೋಣ ಎಂದರು.
ಕೊರೋನ ಮಹಾಮಾರಿಯ 3ನೇ ಅಲೆ ಎದುರಿಸಲು ಸಿದ್ಧರಾಗೋಣ. ದುಡುಕು, ಉದಾಸಿನ ಬಿಟ್ಟು ಎಚ್ಚೆತ್ತುಕೊಂಡು ತಜ್ಞರು ತಿಳಿಸಿದಂತೆ ಸರಕಾರ ನಿಗದಿಪಡಿಸಿದ ನಿಯಮದಂತೆ ನಡೆದುಕೊಳ್ಳೋಣ. ಇಂತಹ ಕಷ್ಠಕಾಲದಲ್ಲಿ ನಮ್ಮ ಮುಂದಿನ ಪೀಳಿಗೆ ಮಕ್ಕಳಿಗೆ ಮನೆಗಳಲ್ಲಿ ಒಳ್ಳೆಯ ಶಿಕ್ಷಣ, ಸಂಸ್ಕಾರ ಸಿಗುವಂತೆ ಪ್ರಯತ್ನಿಸೋಣ.
ಜಿಲ್ಲೆಯ ಎಲ್ಲಾ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಉದ್ಯಮ ಕ್ಷೇತ್ರದ ಪ್ರಮುಖರೆ, ಕೃಷಿಕರೇ, ಅಧಿಕಾರಿಗಳೆ, ನೌಕರರೆ, ಕಾರ್ಮಿಕರೆ ಎಲ್ಲಾ ರೀತಿಯ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ, ಸೇವೆ ಮಾಡುವ ಬಂಧುಗಳೆ, ಒಂದೊAದು ಜೀವದ ರಕ್ಷಣೆ ಅದು ನಮ್ನೆಲ್ಲರ ಹೊಣೆ. ಇದಕ್ಕಾಗಿ ನಿಮ್ಮೆಲ್ಲರ ಸಹಕಾರವನ್ನು ಯಾಚಿಸುತ್ತಾ, ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಶಯಗಳನ್ನು ಕೋರುತ್ತಾ, ಭಾರತವನ್ನು ವಿಶ್ವಗುರುವನ್ನಾಗಿ ಮಾಡೋಣ ಎಂದರು.
ಶಾಸಕರಾದ ವೇದವ್ಯಾಸ ಕಾಮತ್, ಯು.ಟಿ. ಖಾದರ್, ಮೇಯರ್ ಪ್ರೇಮಾನಂದ ಶೆಟ್ಟಿ, ಕರ್ನಾಟಕ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ, ದಿ. ಮೈಸೂರು ಎಲೆಕ್ಟಿçಕಲ್ ಇಂಡಸ್ಟಿಸ್ ಲಿಮಿಟೆಡ್‌ನ ಅಧ್ಯಕ್ಷರಾದ ಸಂತೋಷ್ ರೈ ಬೋಳಿಯಾರ್, ರಾಜ್ಯ ಮೀನುಗಾರಿಕೆ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷರಾದ ನಿತೀನ್ ಕುಮಾರ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಐಜಿಪಿ ದೇವಜ್ಯೋತಿ ರೇ, ಪೊಲೀಸ್ ಆಯುಕ್ತ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ಗಣ್ಯರು, ವಿವಿಧ ಜನಪ್ರತಿನಿಧಿಗಳು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English