ಮಂಗಳೂರು : ತುಳು ಅಕಾಡೆಮಿಯು ಕೊರೊನಾದ ಸಂಕಷ್ಟ ಕಾಲದಲ್ಲೂ ಕಲೆ, ಕಲಾವಿದರಿಗಾಗಿ ಸದಾ ತೆರೆದಿದೆ. ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಯಾರಿಗೂ ನಾವು ಅನುಮತಿ ನಿರಾಕರಿಸಿಲ್ಲ. ಇದು ತುಳುವ ಬಂಧುಗಳಿಗೆ ತವರೂರು ಆಗಿಯೇ ಇದೆ. ಅಂತಹಾ ಅವಕಾಶವನ್ನು ಎಲ್ಲಾ ತೌಳವ ಬಂಧುಗಳು ಬಳಸಿಕೊಂಡು ಕಮರಿ ಹೋದ ಕಲಾಬದುಕನ್ನು ಖಂಡಿತಾ ಪುನಃ ಕಟ್ಟಿಕೊಳ್ಳಬಹುದು. ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ ಕತ್ತಲ್‌ಸಾರ್‌ರವರು ತುಳುವೆರೆ – ಏಳಾಟೊ – ಸರಯೂ ಸಪ್ತಾಹೊದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷೀಯ ಭಾಷಣದಲ್ಲಿ ತುಳುಭವನದ ಸಿರಿಚಾವಡಿಯಲ್ಲಿ ಹೇಳಿದರು.
ಯಕ್ಷಗಾನವು ಬರೇ ಜಾನಪದ ಕಲೆಯಲ್ಲ; ಜೊತೆಗೆ ಜ್ಞಾನಪದ ಕಲೆಯೂ ಹೌದು. ಕಲಾವಿದನ ಬೌದ್ಧಿಕ, ಮಾನಸಿಕ ಜ್ಞಾನವನ್ನು ವೃದ್ಧಿಸುವ ರಾತ್ರಿ ಪೂರ್ತಿ ಪ್ರೇಕ್ಷಕನನ್ನು ಉಳಿಸಿಕೊಳ್ಳುವ ಅದ್ಭುತಕಲೆ ಇದು ತುಳುಭವನದಲ್ಲಿ ಸರಯೂವತಿಯಿಂದ ತುಳುವಿನಲ್ಲೇ ನಡೆಯುತ್ತಿರುವುದು ಸ್ತುತೃರ್ಹ ಎಂದು ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ಶ್ರೀ ಕಮಲಾದೇವಿ ಪ್ರಸಾದ ಆಸ್ರಣ್ಣರು ಆಶೀರ್ವಚನವಿತ್ತರು. ಮಂಗಳೂರು ಉತ್ತರ ವಿಧಾನಾಸಭಾ ಕ್ಷೇತ್ರದ ಶಾಸಕ ಡಾ|| ವೈ. ಭರತ್ ಶೆಟ್ಟಿಯವರು ತಂಡಕ್ಕೆ ಶುಭಾಸಂಶನೆ ಮಾಡಿ ಸರಯೂ ತಂಡಕ್ಕೆ ಮತ್ತು ಸರಯೂ ಸದಸ್ಯರಿಗೆ ತುಳು ಅಕಾಡೆಮಿಯಿಂದ ಗೌರವ ಸಮರ್ಪಣೆ ಮಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಪ್ರದೀಪ್ ಕಲ್ಕೂರರೂ ಸರಯೂ ತಂಡದ ಕಾರ್ಯವನ್ನು ಶ್ಲಾಘಿಸಿದರು.
ಸಮಾರೋಪ ಸಮಾರಂಭದಲ್ಲಿ ಯಕ್ಷಗಾನ ಅರ್ಥದಾರಿ ಶ್ರೀ ಹರಿಭಟ್ ಕೃಷ್ಣಾಪುರ, ಹಾಗೂ ಶ್ರೀ ಕೃಷ್ಣಭಟ್ ದೇವಕಾನರನ್ನು ‘ಯಕ್ಷ ಸರಯೂ’ ಬಿರುದಿತ್ತು ಸನ್ಮಾನಿಸಲಾಯಿತು. ಶ್ರೀ ಹರಿಕೃಷ್ಣ ಪುನರೂರು, ಶ್ರೀ ಮಧುಸೂದನ ಅಲೆವೂರಾಯ ವರ್ಕಾಡಿ, ಶ್ರೀಮತಿ ಪೂರ್ಣಿಮಾ ಪ್ರಭಾಕರ ರಾವ್ ಪೇಜಾವರ, ಶ್ರೀ ರಮೇಶ ತಂತ್ರಿ ಡಿ, ಶ್ರೀ ಜಿ. ಕೆ ಭಟ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಚೇತಕ್ ಪೂಜಾರಿ, ಶ್ರೀ ಪುರುಷೋತ್ತಮ ಪೂಜಾರಿ, ಮನಪಾ ಸದಸ್ಯೆ ಶ್ರೀಮತಿ ಗಾಯತ್ರಿ ಎ. ರಾವ್ ಉಪಸ್ಥಿತರಿದ್ದರು. ನಿರ್ದೇಶಕ ಶ್ರೀ ರವಿ ಅಲೆವೂರಾಯ ವರ್ಕಾಡಿ ಸ್ವಾಗತಿಸಿದರೆ, ಶ್ರೀ ಮಾಧವ ನಾವಡ, ವರ್ಕಾಡಿ ಧನ್ಯವಾದವಿತ್ತರು. ಬಳಿಕ ‘ಶ್ರೀ ರಾಮ ಬಂಟೆ ಹನುಮಂತೆ” ಎಂಬ ತುಳು ಯಕ್ಷಗಾನ ಸರಯೂ ಮಕ್ಕಳ ಮೇಳದಿಂದ ಜರಗಿ’ ಸರಯೂ ಸಪ್ತಾಹಕ್ಕೆ ಅಂಕದ ಪರದೆಬಿತ್ತು.
Click this button or press Ctrl+G to toggle between Kannada and English