ಮಂಗಳೂರು: ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ವಕೀಲನೋರ್ವನ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲದ ವಿ.ಹೆಚ್. ಕಾಂಪ್ಲೆಕ್ಸ್ನಲ್ಲಿರುವ ವಕೀಲ ಉಮ್ಮರ್ ಕೆ. ವಿರುದ್ಧ ಲೈಂಗಿಕ ಕಿರುಕುಳ ಆರೋಪದಡಿ ದೂರು ದಾಖಲಾಗಿದೆ. ಕಳೆದ 9 ತಿಂಗಳಿಂದ ಸಂತ್ರಸ್ತ ಯುವತಿ ಉಮ್ಮರ್ ಕೆ. ಕಚೇರಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಆ.16 ರಂದು ಸಂಜೆ ಕಚೇರಿಯಲ್ಲಿ ಯಾರು ಇಲ್ಲದ ವೇಳೆ ಸಂತ್ರಸ್ತೆಗೆ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಲಾಗಿದೆ.
ಜೊತೆಗೆ ಈ ವಿಚಾರವನ್ನು ಮನೆಯಲ್ಲಿ ಹೇಳಬೇಡ, ಹೇಳಿದ್ರೆ ನಿನ್ನ ಮರ್ಯಾದೆ ಹೋಗುತ್ತದೆ ಎಂದು ಹೆದರಿಸಿದ್ದಾರೆ ಅಂತಾ ಯುವತಿ ದೂರಿನಲ್ಲಿ ಹೇಳಿದ್ದಾರೆ.
ಈ ಬಗ್ಗೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Click this button or press Ctrl+G to toggle between Kannada and English