ಬಂಟ್ವಾಳ: ಇಲ್ಲಿನ ವಾಮದಪದವು-ಕುದ್ಕೋಳಿ ನಡುವೆ ಹಾದು ಹೋಗಿರುವ ಸೊರ್ನಾಡು ರ್ಯಾಪಿಡ್ ಇನಫೋಟೆಕ್ ಸಂಸ್ಥೆಗೆ ಸೇರಿದ ಇಂಟರ್ನೆಟ್ ಕೇಬಲ್ ಗಳನ್ನು ಕಿಡಿಗೇಡಿಗಳು ತುಂಡರಿಸಿ ಹಾನಿ ಉಂಟು ಮಾಡಿದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಜನತೆಗೆ ಗುಣಮಟ್ಟದ ಇಂಟರ್ನೆಟ್ ಸೌಲಭ್ಯ ಒದಗಿಸಲು ಕಾನೂನು ಬದ್ಧ ಪರವಾನಿಗೆ ಪಡೆದು ಅಳವಡಿಸಿದ್ದ ಲಕ್ಷಾಂತರ ಮೌಲ್ಯದ ಕೇಬಲ್ ಗಳನ್ನು ಎಲ್ಪೇಲು ಸಹಿತ 10ಕ್ಕೂ ಮಿಕ್ಕಿ ಕಡೆಗಳಲ್ಲಿ ಭಾನುವಾರ ರಾತ್ರಿ ಕಿಡಿಗೇಡಿಗಳು ತುಂಡರಿಸಿದ್ದಾರೆ.
ಇಲ್ಲಿನ ಹಲವು ಮಂದಿ ವಿದ್ಯಾರ್ಥಿಗಳು ಸಹಿತ ಗ್ರಾಹಕರು ಇಂಟರ್ನೆಟ್ ಸಂಪರ್ಕ ಸಿಗುತ್ತಿಲ್ಲ ಎಂದು ರಾತ್ರಿ ಸಂಸ್ಥೆಗೆ ಕರೆ ಮಾಡಿದ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಪರಿಶೀಲನೆ ನಡೆಸಿದಾಗ ಈ ಕಿಡಿಗೇಡಿ ಕೃತ್ಯ ಬೆಳಕಿಗೆ ಬಂದಿದೆ. ಇಂತಹ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕೂಡಲೇ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವುದಾಗಿ ಸಂಸ್ಥೆ ಮುಖ್ಯಸ್ಥ ವೀರೇಶ್ ಪಿಂಟೋ ತಿಳಿಸಿದ್ದಾರೆ.
Click this button or press Ctrl+G to toggle between Kannada and English