ಹುಬ್ಬಳ್ಳಿ : ಸದ್ಯ ನಡೆಯುತ್ತಿರುವ ಹು-ಧಾ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಎಲ್ಲ 82 ವಾರ್ಡ್ ನ ಅಭ್ಯರ್ಥಿಗಳನ್ನು ಆಯಾ ವಾರ್ಡ್ ಗಳಲ್ಲಿರುವ ನನ್ನ ಬೆಂಬಲಿಗರೊಂದಿಗೆ ಪ್ರಚಾರಕ್ಕಿಳಿದು ಗೆಲ್ಲಿಸಲು ಪ್ರಯತ್ನಿಸುತ್ತೇನೆ ಎಂದು ಮಹಾನಗರ ಜಿಲ್ಲಾ ಕಾಂಗ್ರೆಸ್ ಜಂಟಿ ಕಾರ್ಯದರ್ಶಿ, ಆರ್ಟಿಐ ಕಾರ್ಯಕರ್ತ, ಹಿರಿಯ ಸಮಾಜ ಸೇವಕ ದೀಪಕ ಶಿರೋಲಿಕರ ಹೇಳಿದ್ದಾರೆ.
ಈ ಹಿಂದೆ, ಈಗಿನ ಮಹಾನಗರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ್ ಪಾಟೀಲ ಅವರು ಕಾಂಗ್ರೆಸ್ ಪಕ್ಷದಿಂದ ಹು-ಧಾ ಮೇಯರ್ ಆಗಿದ್ದ ಸಂದರ್ಭದಲ್ಲಿ ಅವಳಿ ನಗರಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವಳಿ ನಗರಗಳ ಬಡಾವಣೆಗಳಿಗೆ ಇಪ್ಪತ್ನಾಲ್ಕು ಗಂಟೆ ನೀರು ಪೂರೈಕೆಯ ಯೋಜನೆಯನ್ನು ಜಾರಿಗೆ ತಂದಿದ್ದೇ ಅನಿಲಕುಮಾರ
ಪಾಟೀಲ ಅವರು. ಅಲ್ಲದೇ ಮಹಾನಗರಗಳಲ್ಲಿ ಹಂದಿಗಳ ಕಾಟ ವಿಪರೀತವಾಗಿ, ಚಿಕ್ಕಮಕ್ಕಳನ್ನು ರಸ್ತೆಗಳಲ್ಲಿ ಅವು ಕಡಿದು ಸಿಕ್ಕಾಪಟ್ಟೆ ಹಾವಳಿ ಎಬ್ಬಿಸಿ, ನಗರದಲ್ಲಿ ಸಾರ್ವಜನಿಕರಿಗೆ ಭಯದ ವಾತಾವರಣ ಸೃಷ್ಟಿಸಿದ್ದವು. ಇದು ಮೇಯರ್ ಆಗಿದ್ದ ಅನಿಲಕುಮಾರ ಪಾಟೀಲ ಅವರ ಗಮನಕ್ಕೆ ಬರುತ್ತಿದ್ದಂತೆಯೇ, ಯಾವುದೇ ಒತ್ತಡಗಳಿಗೆ ಮಣಿಯದೇ ಹಂದಿಗಳ ನಿರ್ಮೂಲನ ಕಾರ್ಯಕ್ಕೆ ಆದೇಶಿಸಿದ್ದರು.
ನೀರಸಾಗರ ಕೆರೆಯಲ್ಲಿರುವ ಹೂಳನ್ನು ತೆಗೆಯಿಸಿ ಅವಳಿ ನಗರಕ್ಕೆ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ತೊಂದರೆಯಾಗದಂತೆ ಯೋಜನೆ ರೂಪಿಸಿ ಜಾರಿಗೆ ತಂದಿದ್ದರು. ಅಲ್ಲದೇ ನಗರದ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಅನೇಕ ಸಮಾಜಮುಖಿ ಕಾರ್ಯ ಮಾಡಿರುವ ಅನಿಲಕುಮಾರ ಪಾಟೀಲ ನೇತೃತ್ವದಲ್ಲಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ 82 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ನಾನು ಮತ್ತು ನನ್ನ ಬೆಂಬಲಿಗರೊಂದಿಗೆ ಅವಳಿ ನಗರದ ಎಲ್ಲ 82 ವಾರ್ಡ್ ಗಳಲ್ಲಿಯೂ ಕೂಡ ಸಂಚರಿಸಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದೇನೆ. ಕಾರಣ ನಗರದ ಜನತೆಯು ಅನಿಲಕುಮಾರ ಪಾಟೀಲ ಅವರು ಮಾಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಮನವಿ ಮಾಡುತ್ತೇನೆ ಎಂದು ದೀಪಕ ಶಿರೋಲಿಕರ ತಿಳಿಸಿದ್ದಾರೆ.
ವರದಿ: ಶಂಭು.
ಮೆಗಾಮೀಡಿಯಾ ನ್ಯೂಸ್, ಹುಬ್ಬಳ್ಳಿ ಬ್ಯುರೋ.
Click this button or press Ctrl+G to toggle between Kannada and English