ಅಂತಾರಾಷ್ಟ್ರೀಯ ಮಟ್ಟದಿಂದಲೂ ಸ್ಪಂದನೆ ಪಡೆದ ಕಲ್ಕೂರ ಪ್ರತಿಷ್ಠಾನದ ಕೃಷ್ಣ ವೇಷ ಸ್ಪರ್ಧೆ

10:01 PM, Tuesday, August 31st, 2021
Share
1 Star2 Stars3 Stars4 Stars5 Stars
(No Ratings Yet)
Loading...

Kalkura-Krishna

ಮಂಗಳೂರು :  ಅಸ್ಸಾಂ, ರಾಜಸ್ಥಾನ, ದೆಹಲಿ, ಚೆನ್ನೈ, ಆಂದ್ರ ಪ್ರದೇಶ, ತೆಲಂಗಾಣ, ಕೇರಳ, ಮುಂಬಯಿ ಹೀಗೆ ವಿವಿಧ ರಾಜ್ಯಗಳಿಂದಲೂ ಕರ್ನಾಟಕದಾದ್ಯಂತದಿಂದಲೂ ಮಾತ್ರವಲ್ಲ ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ, ಬೆಹರಿನ್ ದುಬೈ, ಸಿಂಗಾಪುರ ಹೀಗೆ ಅನೇಕ ದೇಶಗಳಿಂದಲೂ ಸುಮಾರು 7 ರಿಂದ 8 ಸಾವಿರ ಸ್ಪರ್ಧಿಗಳು ಈ ಬಾರಿ ಅತ್ಯುತ್ಸಾಹದಿಂದ ಕಲ್ಕೂರ ಪ್ರತಿಷ್ಠಾನ ಏರ್ಪಡಿಸಿದ್ದ ರಾಷ್ಟ್ರೀಯ ಮಕ್ಕಳ ಉತ್ಸವ ‘ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ’ ಪಾಲ್ಗೊಳ್ಳುವ ಮೂಲಕ ಅಂತರಾಷ್ಟ್ರೀಯ ಉತ್ಸವವಾಗಿ ಮಾರ್ಪಾಡುಗೊಂಡಿತು. ಸ್ಪರ್ಧೆ ಮುಗಿದ ಬಳಿಕವೂ ಇನ್ನೂ ಕೂಡ online ನಲ್ಲಿ ಸ್ಪರ್ಧಿಗಳ ವಿಡಿಯೋ ಕ್ಲಿಪಿಂಗ್ ಹರಿದು ಬರುತ್ತಿರುವುದು ಈ ಸ್ಪರ್ಧೆಯ ಪ್ರಸಿದ್ದಿಗೆ ಸಾಕ್ಷಿಯಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದ್ದಾರೆ. ಈ online ಸ್ಪರ್ಧೆಯ ನಿರ್ವಹಣೆಯಲ್ಲಿ ಸುಮಾರು 15 ರಿಂದ 20 ಮಂದಿ ಕಂಪ್ಯೂಟರ್ ತಾಂತ್ರಿಕ ತಜ್ಞರು ಹಾಗೂ 150 ಕ್ಕೂ ಅಧಿಕ ಮಂದಿ ತೀರ್ಪುಗಾರರು ಸ್ವಯಂಸೇವಕರಾಗಿ ಸಹಕರಿಸಿದ್ದು, ಸ್ಪರ್ಧೆಯಲ್ಲಿ ಪಾಲ್ಗೊಂಡವರೆಲ್ಲರಿಗೂ ಕಲ್ಕೂರ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ರಾತ್ರಿ ಶ್ರೀ ಕೃಷ್ಣ ಗಾನಾಮೃತ, ಪ್ರಾತ್ಯಕ್ಷಿಕೆಯೊಂದಿಗೆ ಏರ್ಪಡಿಸಿದ್ದ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ, ಪ್ರಸಾದ ವಿತರಣೆ, ಸಹಿತವಾಗಿ ಈ ಬಾರಿಯ ಕೃಷ್ಣ ವೇಷ ಸ್ಪರ್ಧೆಯು ಸಮಾಪನಗೊಂಡಿತು. ಸ್ಪರ್ಧಾ ಫಲಿತಾಂಶಗಳ ವಿವರ ಈ ಕೆಳಗಿನಂತಿದ್ದು, ವಿಜೇತ ಮಕ್ಕಳಿಗೆ ಬಹುಮಾನಗಳನ್ನು ದಿನ ನಿಶ್ಚಯಗೊಳಿಸಿ, ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ವಿತರಿಸಲಾಗುವುದೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.

Kalkura-Krishna

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English