ಗೌರಿ ಲಂಕೇಶ ಹತ್ಯೆಯ ದೋಷಾರೋಪಿಗಳಿಗೆ ಕೋಕಾ ಕಾಯಿದೆ ಮತ್ತು ಹಿಂದೂ ಸಂಘಟಕರನ್ನು ಹತ್ಯೆ ಮಾಡಿದವರಿಗೆ ಜಾಮೀನು : ಪ್ರಮೋದ ಮುತಾಲಿಕ್

10:05 PM, Wednesday, September 1st, 2021
Share
1 Star2 Stars3 Stars4 Stars5 Stars
(No Ratings Yet)
Loading...

Pramod Muthalikaಮಂಗಳೂರು  : ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗಳು ಅಮಾಯಕರು ಮತ್ತು ಅವರ ಹಿಂದೆ ಯಾವುದೇ ಅಪರಾಧದ ಹಿನ್ನೆಲೆ ಇಲ್ಲ. ಇಂತಹ ಮುಗ್ಧ ಜನರ ಮೇಲೆ ಅನ್ಯಾಯವಾಗಿ ಭಯೋತ್ಪಾದನಾ ಚಟುವಟಿಕೆಗಳಿಗೆ ಹಾಕುವ ಕೋಕಾ ಕಾಯಿದೆಗಳನ್ನು ಹಾಕಲಾಗಿದೆ. ಆದರೆ ನಿಜವಾಗಿ ಭಯೋತ್ಪಾದನೆ ಕೃತ್ಯ ಮಾಡುವ, ದಂಗೆ ಮಾಡುವ, ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದ ಮತಾಂಧ ಪಿ.ಎಫ್.ಐ ಸಂಘಟನೆಯ ಮೇಲೆ ಕಠಿಣ ಕಾಯಿದೆ ಹಾಕದೇ ಇದ್ದ ಕಾರಣ ಅವರು ರಾಜಾರೋಷವಾಗಿ ತಿರುಗುತ್ತಿದ್ದಾರೆ. ಗೌರಿ ಪ್ರಕರಣದಲ್ಲಿ ವಿಶೇಷ ತನಿಖಾ ದಳ ರಚನೆ ಮಾಡಲಾಗಿದೆ. ಆದರೆ 25 ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದ, ಪಿ.ಎಫ್.ಐ. ಸಂಘಟನೆಯ ಕಾರ್ಯಕರ್ತರ ಮೇಲೆ ಕೋಕಾ ಇಲ್ಲ. ಡಿ.ಜೆ. ಹಳ್ಳಿಯ ದಂಗೆ, ದಲಿತ ಶಾಸಕರ ಮನೆಯ ಮೇಲೆ ದಾಳಿ, ಪೋಲಿಸ್ ಠಾಣೆಯ ಸುಟ್ಟ ಪ್ರಕರಣದಲ್ಲಿ ಭಯೋತ್ಪಾದನೆ ನಂಟು ಇದ್ದರೂ ಸಹ 115 ಜನರಿಗೆ ಜಾಮೀನು ನೀಡಲಾಗಿದೆ. ಮೈಸೂರಿನಲ್ಲಿ 8 ಜನ ಹಿಂದೂ ಕಾರ್ಯಕರ್ತರನ್ನು ಬರ್ಬರವಾಗಿ ಸಾಮೂಹಿಕ ಹತ್ಯೆ ಮಾಡಿದ ಮತಾಂಧರಿಗೆ ಕೋಕಾ ಕಾಯಿದೆ ಇಲ್ಲ. ಆದರೆ ಗೌರಿ ಅರೋಪಿಗಳಿಗೆ ಜಾಮೀನು ಸಹ ಇಲ್ಲ, ಪ್ರಕರಣದ ವಿಚಾರಣೆ ಸಹ ಸರಿಯಾಗಿ ನಡೆಯತ್ತಿಲ್ಲ. ಈ ಪ್ರಕರಣದ ತನಿಖೆಯಲ್ಲಿ ತಾರತಮ್ಯತೆ ಮಾಡಲಾಗಿದೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕ್ ಅವರು ಆರೋಪಿಸಿದರು.

ಅವರು 31 ಆಗಸ್ಟ್ ರಂದು ಮಂಗಳವಾರ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಗೌರಿ ಲಂಕೇಶ ಹತ್ಯೆ ಪ್ರಕರಣ : ವಾಸ್ತವ ಮತ್ತು ವಿಪರ್ಯಾಸ’ ವಿಷಯದಲ್ಲಿ ಆನ್‌ಲೈನ್ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇದರಲ್ಲಿ ಮುಖ್ಯ ವಕ್ತಾರರಾಗಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕ್, ನ್ಯಾಯವಾದಿ ಶ್ರೀ. ಕೃಷ್ಣಮೂರ್ತಿ ಪಿ., ಹಿಂದೂ ನೇತಾರ ಶ್ರೀ. ಎಸ್. ಭಾಸ್ಕರನ್ ಮತ್ತು ಸನಾತನ ಸಂಸ್ಥೆಯ ಸೌ. ಲಕ್ಷ್ಮೀ ಪೈ ಇವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ನೇರಪ್ರಸಾರವನ್ನು 1200 ಮಂದಿ ಹಾಗೂ ಒಟ್ಟು 8200 ಮಂದಿ ವೀಕ್ಷಣೆ ಮಾಡಿದರು.

HJJಈ ವೇಳೆ ಮಾತನಾಡಿದ ಹಿಂದೂ ನಾಯಕ ಶ್ರೀ. ಎಸ್. ಭಾಸ್ಕರನ್ ಇವರು ಮಾತನಾಡುತ್ತಾ, ‘ಗೌರಿ ಲಂಕೇಶರವರು ನಕ್ಸಲ್ ಸಮರ್ಥಕರಾಗಿದ್ದರು ಮತ್ತು ನಿರಂತರ ಹಿಂದೂ ಧರ್ಮ, ಹಿಂದೂ ನಾಯಕರ ಅಪಮಾನ ಮಾಡುವುದೇ ಕಾಯಕವಾಗಿತ್ತು. ದೇಶವಿರೋಧಿ ಹೇಳಿಕೆ ನೀಡುವ ಕನ್ಹಯ್ಯ ಕುಮಾರ ಮತ್ತು ಉಮರ್ ಖಾಲಿದ್‌ರನ್ನು ಸ್ವಂತ ಮಕ್ಕಳೆಂದು ಹೇಳಿ ದೇಶದ್ರೋಹಿಗಳ ತಾಯಿಯಾಗಿದ್ದರು. ಅಂದಿನ ಕಾಂಗ್ರೆಸ್ ಸರಕಾರ ಹತ್ಯೆ ತನಿಖೆ ಪ್ರಾರಂಭ ಮಾಡುವ ಮೊದಲೇ ಪೂರ್ವಗ್ರಹದಿಂದ ಹಿಂದೂ ಸಂಘಟನೆಗಳ ಮೇಲೆ ಆರೋಪ ಮಾಡಿ ಮತ್ತು ಅದರಂತೆ ವಿಚಾರಣೆ ಮಾಡಿ, ಹಿಂದೂ ಸಂಘಟನೆಗಳನ್ನು ಬಲಿಪಶು ಮಾಡುವ ಪ್ರಯತ್ನ ಮಾಡಿತು’ ಎಂದರು.

ನ್ಯಾಯವಾದಿ ಶ್ರೀ. ಕೃಷ್ಣಮೂರ್ತಿ ಪಿ. ಇವರು ಮಾತನಾಡುತ್ತಾ, ‘ಹಿಂದೂ ಧರ್ಮದ ನಿರಂತರ ಅಪಮಾನ ಮಾಡುವ ಕೆ.ಎಸ್. ಭಗವಾನ್ ಮೇಲೆ ಯಾವುದೇ ಕ್ರಮ ಜರಗಿಸುವುದಿಲ್ಲ. ಆದರೆ ಅಮಾಯಕರ ಮೇಲೆ ಷಡ್ಯಂತ್ರದ ಮೂಲಕ ಬಲಿಪಶು ಮಾಡುವುದು ಸರಿಯಲ್ಲ’ ಎಂದರು.

ಸನಾತನ ಸಂಸ್ಥೆಯ ಸೌ. ಲಕ್ಷ್ಮೀ ಪೈ ಇವರು ಮಾತನಾಡುತ್ತಾ, ‘ಗೌರಿ ಹತ್ಯೆಯ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಮೇಲೆ ಆರೋಪವನ್ನು ಮಾಡಿ, ಸನಾತನ ಸಂಸ್ಥೆಯ ನಿಷೇಧ ಮಾಡಲು ಪ್ರಯತ್ನ ಮಾಡಿದರು. ಆದರೆ ಭಗವಂತನ ಕೃಪೆಯಿಂದ ಸನಾತನ ಸಂಸ್ಥೆಯ ಕಾರ್ಯದ ಮೇಲೆ ಏನು ಪರಿಣಾಮ ಆಗಲಿಲ್ಲ. ಲಕ್ಷಾಂತರ ಹಿಂದೂಗಳು ಸನಾತನ ಸಂಸ್ಥೆಯ ಮಾರ್ಗದರ್ಶನದ ಅಡಿಯಲ್ಲಿ ಸಾಧನೆಯನ್ನು ಮಾಡುತ್ತಿದ್ದಾರೆ. ಈಗಲೂ ಪ್ರಚಂಡ ಪ್ರಮಾಣದಲ್ಲಿ ಸನಾತನ ಸಂಸ್ಥೆಯ ಕಾರ್ಯ ಶರವೇಗದಲ್ಲಿ ಹೆಚ್ಚಾಗುತ್ತಿದೆ’ ಎಂದರು.

ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲೆಯ ಸಮನ್ವಯಕರಾದ ಶ್ರೀ. ಚಂದ್ರ ಮೋಗೇರ ಇವರು ಈ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English