ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಮತ್ತು ಪ್ರಗತಿ ಪರಿಶೀಲನೆ ಸಭೆ

11:07 PM, Wednesday, September 1st, 2021
Share
1 Star2 Stars3 Stars4 Stars5 Stars
(No Ratings Yet)
Loading...

Highway meetingಮಂಗಳೂರು : ಮಂಗಳೂರು ಮಹಾನಗರಪಾಲಿಕೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಮತ್ತು ಪ್ರಗತಿ ಪರಿಶೀಲನೆ ಸಭೆ ಪಾಲಿಕೆಯ ಸಮಿತಿ ಸಭಾಂಗಣದಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಬುಧವಾರದಂದು ಜರಗಿತು.

ಮೊದಲನೆಯದಾಗಿ ರಾಷ್ಟ್ರೀಯ ಹೆದ್ದಾರಿಯವರಿಂದ ಸಮಸ್ಯೆಗಳು ಎದುರಾಗುತ್ತಿರುವುದನ್ನು ಪಾಲಿಕೆಯ ಸದಸ್ಯರು ಮನದಟ್ಟು ಮಾಡಿದರು ಹಾಗೂ ಸದ್ರಿ ಇಲಾಖೆಯವರು ನಿವ೯ಹಿಸುವ ಕಾಮಗಾರಿಗಳು ಅಸಮದಾನಕರವಾಗಿರುವುದನ್ನು ಉಲ್ಲೇಖಿಸಿದರು. ಕುಂಟಿಕಾನ ಸವಿ೯ಸ್ ರಸ್ತೆಯ ಪೈಪ್ ಲೈನ್ ಕುರಿತು ಎತ್ತಿದ ಪ್ರಶ್ನೆಗೆ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಸದ್ರಿ ಕಾಮಗಾರಿಯನ್ನು ಮಹಾನಗರಪಾಲಿಕೆಯ ವತಿಯಿಂದ ಕೈಗೊಳ್ಳಬೇಕಾಗಿದ್ದು ಈ ಕುರಿತು ಪತ್ರದ ಮುಖೇನ ವ್ಯವಹರಿಸಲಾಗಿರುತ್ತದೆ ಎಂದು ಹೇಳಿದರು.

ಕರಾವಳಿ ಕಾಲೇಜು ಬಳಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು ವಿಳಂಭದ ಕುರಿತು ಪಾಲಿಕೆಯ ಕಾಯ೯ಪಾಲಕ ಅಭಿಯಂತರರು ಪರಿಶೀಲಿಸಿ ಮಾಹಿತಿ ನೀಡಲು ಮೇಯರ್ ರವರು ಸೂಚಿಸಿದರು.

ಪಂಪ್ ವೆಲ್ ಗೋರಿಗುಡ್ಡೆ ಬಳಿಯಲ್ಲಿ ತುತಾ೯ಗಿ ಸವೀ೯ಸ್ ರಸ್ತೆ ನಿಮಾ೯ಣ ಮಾಡದಿದ್ದಲ್ಲಿ ಸಾವ೯ಜನಿಕರು ಪ್ರತಿಭಟನೆ ಮಾಡುವ ಪರಿಸ್ಥಿತಿ ಎದುರಾಗಬಹುದೆನ್ನುವ ವಿಚಾರ ಅಲ್ಲಿನ ವಾಡಿ೯ನ ಸದಸ್ಯರು ತಿಳಿಸಿದರು.

ಅಲ್ಲದೇ ಪಡೀಲ್ ನಿಂದ ಬಿ.ಸಿ ರೋಡ್ ವರೆಗಿನ ರಸ್ತೆಯು ನಾದುರಸ್ತಿ ಯಾಗಿರುವ ಕುರಿತು ಸಾವ೯ಜನಿಕರಿಂದ ಆಕ್ಷೇಪಣೆ ಕೇಳಿ ಬರುತ್ತಿರುವುದನ್ನು ಸಭೆಯಲ್ಲಿ ವಿಶ್ಲೇಷಿಸಲಾಯಿತು.

ಕೊನೆಯದಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ಕಲ್ವಟ್೯ ನಿಮಿ೯ಸುವಾಗ ಪಾಲಿಕೆಯ ಅಭಿಯಂತರರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿಯನ್ನು ನಿವ೯ಹಿಸುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಮೇಯರ್ ರವರು ಸೂಚಿಸಿದರು.

ಸಭೆಯಲ್ಲಿ ಪಾಲಿಕೆಯ ಆಯುಕ್ತರಾದ ಅಕ್ಷಯ್ ಶ್ರೀಧರ್, ಅಧ್ಯಕ್ಷರುಗಳಾದ ಸಂದೀಪ್, ಶೋಭ ರಾಜೇಶ್ ಮತ್ತು ಲೀಲಾವತಿ ಪ್ರಕಾಶ್, ಪಾಲಿಕೆಯ ಸದಸ್ಯರುಗಳು ಮತ್ತು ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಯೋಜನಾ ನಿದೇ೯ಶಕರಾದ ಶಿಶು ಮೋಹನ್ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English