ಮಂಗಳೂರು : ಯಾವುದೇ ಕ್ರೀಡೆಗೆ ಸಂಬಂಧಿಸಿದ ಗಾಯಗಳಿಗೆ ಸಂಪೂರ್ಣ ಹಾಗೂ ಸಮಗ್ರ ಚಿಕಿತ್ಸೆಯನ್ನು ನೀಡುವ ಉದ್ದೇಶದಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಯು ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಅನ್ನು ಆರಂಭಿಸಿದೆ. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಕ್ರೀಡಾ ಗಾಯಗಳು, ಆರ್ಥೋಪೆಡಿಕ್ಸ್, ಸೊಂಟ ಮತ್ತು ಮಂಡಿ ವಿಷೇಶತಜ್ಞ ಸರ್ಜನ್ ಆಗಿರುವ ಡಾ. ಯೋಗೇಶ್ ಕಾಮತ್ ಅವರು ಎಲ್ಲಾ ರೀತಿಯ ಕ್ರೀಡಾ ಸಂಬಂಧಿ ಗಾಯಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಈ ವಿಭಾಗದ ಮುಖ್ಯಸ್ಥರ ಹೊಣೆಯನ್ನು ನಿಭಾಯಿಸುತ್ತಿದ್ದಾರೆ.
ರಾಷ್ಟ್ರೀಯ ಮಟ್ಟದ ಅಥ್ಲೀಟ್‍ಗಳಾಗಿರುವ ಶ್ರೀ ಚೆಲ್ಸಾ ಮೇದಪ್ಪ (ಭಾರತ ಹಾಕಿ ತಂಡದ ಸದಸ್ಯರು), ಶ್ರೀ ನಿತೇಶ್ ಕುಮಾರ್, ಕುಮಾರಿ ಅನ್ವಿತಾ ಆಳ್ವಾ, ಶ್ರೀ ಅಂಕುಶ್ ಭಂಡಾರಿ (ಮುಯ್ ಥಾಯ್), ಶ್ರೀ ರಾಹುಲ್ ಬಿ.ಎಂ. (ಬ್ಯಾಡ್ಮಿಂಟನ್), ಶ್ರೀ ಕಾರ್ತಿಕ್ ಯು, ಶ್ರೀ ರೋಹನ್ ಡಿ ಕುಮಾರ್, ಶ್ರೀ ಶರವಣ (ಅಥ್ಲೆಟಿಕ್ಸ್), ಶ್ರೀ ಯಜನೀಶ್ ರಾವ್ (ಫುಟ್ಬಾಲ್), ಶ್ರೀ ಅರುಣ್ ಕುಮಾರ್ (ಕಬಡ್ಡಿ) ಮತ್ತು ಶ್ರೀಮತಿ ಮೈಥಿಲಿ ಪೈ (ಫಿಟ್ನೆಸ್ ತರಬೇತುದಾರರು) ಸೇರಿ ಹಲವು ಕ್ರೀಡಾ ಪಟುಗಳಿಗೆ ಆಸ್ಪತ್ರೆಯು ಚಿಕಿತ್ಸೆ ನೀಡಿದೆ. ಆಸ್ಪತ್ರೆಯು ಪ್ರತಿ ವಾರ ಸೋಮವಾರದಿಂದ ಗುರುವಾರದವರೆಗೆ ಬೆಳಗ್ಗೆ 9.30ರಿಂದ 11.30 ಗಂಟೆಯವರೆಗೆ ಕ್ರೀಡಾ ಗಾಯಗಳಿಗೆ ವಿಶೇಷವಾಗಿ ಮೀಸಲಾಗಿರುವ ಒಪಿಡಿ ಸೇವೆಯನ್ನು ಒದಗಿಸಲಿದೆ. ಎಲ್ಲ ರೀತಿಯ ಗಾಯಗಳ (ಇಂಜೂರಿ) ಸಮಗ್ರ ತಪಾಸಣೆ ಮತ್ತು ಅಗತ್ಯ ಸಲಹೆ ಜೊತೆಗೆ ಪುನರ್ವಸತಿ ಸೇವೆಗಳನ್ನು ಇಲ್ಲಿ ಒದಗಿಸಲಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಯೋಗೇಶ್ ಕಾಮತ್ ಅವರು, “ಹಲವಾರು ಕ್ರೀಡಾಪಟುಗಳಿಗೆ ನಾವು ಚಿಕಿತ್ಸೆ ನೀಡಿದ್ದೇವೆ ಮತ್ತು ಈಗಲೂ ನೀಡುತ್ತಿದ್ದೇವೆ. ಈ ಸಂದರ್ಭದಲ್ಲಿ ಕ್ರೀಡಾ ಗಾಯಗಳಿಗೆಂದೇ ಮೀಸಲಾಗಿರುವ ಪ್ರತ್ಯೇಕ ಒಪಿಡಿಯನ್ನು ಆರಂಭಿಸುತ್ತಿರುವುದಕ್ಕೆ ನಮಗೆ ಅತೀವ ಸಂತೋಷವಾಗುತ್ತಿದೆ. ಕ್ರೀಡೆಗೆ ಸಂಬಂಧಿಸಿದ ಕೀಲು ನೋವುಗಳಲ್ಲಿ ಮಂಡಿ ನೋವು ಅತ್ಯಂತ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಗಾಯವಾಗಿದ್ದು, ಶೇ.15ರಷ್ಟು ಅಥವಾ ಎಲ್ಲಾ ಗಾಯಗಳ ಪೈಕಿ ಆರನೇ ಒಂದು ಭಾಗದಷ್ಟು ಗಾಯಗಳು ಮಂಡಿ ನೋವಿಗೆ ಸಂಬಂಧಿಸಿರುತ್ತವೆ. ಇದರೊಂದಿಗೆ ಎಸಿಎಲ್ ಲಿಗಮೆಂಟ್ (ಅಸ್ತಿರಜ್ಜು) ಗಾಯ ಕೂಡ ಶಸ್ತಚಿಕಿತ್ಸೆ ಅಗತ್ಯವಿರುವ ಮೊಣಕಾಲಿನ ಮತ್ತೊಂದು ಸಾಮಾನ್ಯ ಬಾಧೆಯಾಗಿದೆ. ಶೇ.60ರಷ್ಟು ಮೊಣಕಾಲಿನ ಗಾಯಗಳಲ್ಲಿ ಕಾರ್ಟಿಲೇಜ್ (ಮೃದುವಾದ ಮೂಳೆ) ಗಾಯದ ಸಮಸ್ಯೆಯು ಜೊತೆಗೇ ಬರುತ್ತದೆ ಮತ್ತು ಈ ಪೈಕಿ ಶೇ.80ರಷ್ಟು ಗಾಯಗಳು ತೀರಾ ಕಳಪೆ ಗುಣಮಟ್ಟದ ಎಂಆರ್‍ಐ ಹಾಗೂ ವರದಿ ನೀಡುವಾಗ ಆಗುವ ಪರಿಣಾಮಕಾರಿ ದೋಷಗಳಿಂದಾಗಿ ಗಮನಕ್ಕೆ ಬರುವುದೇ ಇಲ್ಲ. ಈ ರೀತಿಯ ಪ್ರಕರಣಗಳಲ್ಲಿ ಗಾಯಗಳಿಗೆ ಸೂಕ್ತ ಚಿಕಿತ್ಸೆ ನೀಡುವುದು ಮತ್ತು ಸಲಹೆ ನೀಡುವುದು ಅತಿ ಮುಖ್ಯವಾಗುತ್ತದೆ. ಒಂದೊಮ್ಮೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡದಿದ್ದರೆ ಅಥ್ಲೀಟ್‍ಗಳು ಗಂಭೀರ ಸಮಸ್ಯೆ ಎದುರಿಸಬೇಕಾಗಿ ಬರಬಹುದು. ಗಾಯಾಳು ಚೇತರಿಸಿಕೊಳ್ಳುವ ನಿಟ್ಟಿನಲ್ಲಿ ಶಸ್ತ್ರಚಿಕಿತ್ಸೆ ನಂತರ ತೋರುವ ಕಾಳಜಿ ಕೂಡ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ” ಎಂದು ಮಾಹಿತಿ ನೀಡಿದರು.
ಮುಂದುವರಿದು ಮಾತನಾಡಿದ ಡಾ. ಯೋಗೇಶ್ ಕಾಮತ್ ಅವರು, “ಗುಣಮಟ್ಟದ ಶಸ್ತ್ರಚಿಕಿತ್ಸೆ ಮತ್ತು ಸಮರ್ಪಕವಾಗಿರುವ ತ್ವರಿತ ಪುನರ್ವಸತಿ ಸೌಲಭ್ಯ ಕಲ್ಪಿಸಿದಲ್ಲಿ ಕ್ರೀಡಾಪಟುಗಳು ವೃತ್ತಿಪರ ಕ್ರೀಡೆಗೆ ಮರಳಲು ಸಾಧ್ಯವಾಗುತ್ತದೆ. ಗಾಯಗೊಂಡಿರುವ ದೇಹದ ಭಾಗವನ್ನು ಸರಿಪಡಿಸಲು ಮತ್ತು ಪುನಸ್ಥಾಪನೆ ಮಾಡಲು ಅತ್ಯಾಧುನಿಕ ತಂತ್ರಜ್ಞಾನಗಳು ಅವಕಾಶ ಕಲ್ಪಿಸುತ್ತವೆ. ಹೀಗಾಗಿ ಮೊಣಕಾಲಿನ ಸಂಪೂರ್ಣ ಸಹಜ ಸ್ಥಿತಿಯನ್ನು ಮರಳಿ ಪಡೆಯುವುದು ಸಾಧ್ಯವಾಗುತ್ತದೆ. ಆತ್ರ್ರೋಸ್ಕೊಪಿ ತಂತ್ರಗಳನ್ನು ಬಳಸಿಕೊಂಡು ರೋಗಿಯ ಕೈಗೆಟುಕುವಿಕೆಗೆ ಅನುಗುಣವಾಗಿ ಹೊಸ ಇಂಪ್ಲಾಂಟ್ (ಕಸಿ) ಗಳೊಂದಿಗೆ ಸ್ಟೇಟ್-ಆಫ್-ದ-ಆರ್ಟ್ ತಂತ್ರಗಳನ್ನು ಬಳಸಬಹುದಾಗಿದೆ. ಐಸಿಆರ್‍ಎಸ್ (ಇಂಟರ್‍ನ್ಯಾಷನಲ್ ಕಾರ್ಟಿಲೇಜ್ ರೀಜನರೇಷನ್ ಸೊಸೈಟಿ) ಯಿಂದ ಗುರುತಿಸಲ್ಪಟ್ಟರುವ ಮೊದಲ ಕೇಂದ್ರ ನಮ್ಮದಾಗಿದೆ. ಕಾರ್ಟಿಲೆಜ್ ಕೆಲಸದಲ್ಲಿ ವಿವಿಧ ತಜ್ಞರ ನಡುವೆ ಪರಸ್ಪರ ಹೊಂದಾಣಿಕೆ ಉತ್ತಮವಾಗಿರಬೇಕು ಮತ್ತು ಎಂಆರ್‍ಐ ಹಾಗೂ ಸೆಲ್ ಥೆರಪಿ ತಂತ್ರಗಳಲ್ಲಿ ಕಾರ್ಟಿಲೆಜ್ ಅನುಕ್ರಮದಂತಹ ಇಮೇಜಿಂಗ್ ತಂತ್ರಗಳ ಅಭಿವೃದ್ಧಿಯ ಅಗತ್ಯವಿದೆ” ಎಂದು ಹೇಳಿದರು.
ಮಂಗಳೂರಿನ ಕೆಎಂಸಿ ಹಾಸ್ಪಿಟಲ್‍ನ ಪ್ರಾಂತೀಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾಗಿರುವ ಶ್ರೀ ಸಘೀರ್ ಸಿದ್ದಿಕಿ ಅವರು ಈ ಸಂದರ್ಭದಲ್ಲಿ ಮಾತನಾಡಿ, “ಎಲ್ಲ ರೀತಿಯ ಗಾಯಗಳ ಪೈಕಿ ಶೇ.75 ಗಾಯಗಳಿಗೆ ಚಿಕಿತ್ಸೆ ನೀಡಬಹುದಾಗಿದೆ ಮತ್ತು ಉತ್ತಮವಾಗಿರುವ ಆರಂಭಿಕ ಪುನರ್ವಸತಿ ಸೌಲಭ್ಯ ಕಲ್ಪಿಸಿದಲ್ಲಿ ಗಾಯಗಳು ಬೇಗ ಗುಣಮುಖವಾಗಬಲ್ಲವು. ಈ ಭಾಗದಲ್ಲಿ ಇರುವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಏಕೈಕ ಕೇಂದ್ರ ಎಂಬ ಹೆಗ್ಗಳಿಕೆಯು ನಮ್ಮ ಕೇಂದ್ರಕ್ಕಿರುವುದು ನಮಗೆ ಹೆಮ್ಮೆ ತಂದಿದೆ. ಗಾಯದ ನಂತರದ ಶೀಘ್ರ ಪುನರ್ವಸತಿಗೆ ಸಂಬಂಧಿಸಿದ ವಿನೂತನ ತಂತ್ರಗಳ ಮೂಲಕ ಮಾತ್ರವಲ್ಲದೆ ಅತ್ಯಂತ ಸೂಕ್ಷ್ಮ ವಾಕಿಂಗ್ (ನಡಿಗೆ) ಅಸಹಜತೆಗಳನ್ನು ಪತ್ತೆಹಚ್ಚಲು ಸ್ವದೇಶಿ ಸಾಧನದ ಅಭಿವೃದ್ಧಿ ಮತ್ತು ಗಾಯಗಳ ಮರುಕಳಿಸುವಿಕೆಯನ್ನು ತಡೆಗಟ್ಟುವಲ್ಲಿ ಪ್ರಮುಖವಾದ ಸಮತೋಲನ ಸಾಮಥ್ರ್ಯಗಳ (ಪೆÇ್ರಪ್ರಿಯೋಸೆಪ್ಶನ್) ಬಳಕೆ ಮೂಲಕ ನಮ್ಮ ಕೇಂದ್ರವು ವಿಶೇಷವಾಗಿ ಗುರುತಿಸಿಕೊಂಡಿದೆ. ಹಾಕಿ ಮತ್ತು ಫುಟ್ಬಾಲ್ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಮಾರ್ಷಲ್ ಆಟ್ರ್ಸ್ ಪಟುಗಳು, ರಾಷ್ಟ್ರೀಯ ಮಟ್ಟದ ಅಥ್ಲೀಟ್‍ಗಳು ಸೇರಿ ಹಲವು ವೃತ್ತಿಪರ ಕ್ರೀಡಾಪಟುಗಳ ವಿಶ್ವಾಸಕ್ಕೆ ನಾವು ಪಾತ್ರರಾಗಿದ್ದೇವೆ,” ಎಂದು ಹೇಳಿದರು.
ಡಾ. ಯೋಗೇಶ್ ಕಾಮತ್ (ಕೆಳ ಭಾಗದ ಅಂಗ-ಸೊಂಟ, ಮಂಡಿ) ಕನ್ಸಲ್ಟಂಟ್ ಲೀಡ್, ಡಾ. ನಬೀಲ್ ಮೊಹಮ್ಮದ್- ಅಸೋಸಿಯೇಟ್ ಆರ್ಥೊಪೆಡಿಕ್ ಸರ್ಜನ್, ಮತ್ತು ಡಾ. ಬಿಶ್ವರಂಜನ್ ದಾಸ್- ಎಕ್ಸ್‍ಟೆಂಡೆಡ್ ಸ್ಕೋಪ್ ಪ್ರಾಕ್ಟೀಷನರ್- ರಿಹೆಬಿಟೇಷನ್; ಅವರನ್ನು ಕ್ರೀಡಾ ಗಾಯಗಳ ಒಪಿಡಿ ತಂಡವು ಒಳಗೊಂಡಿದೆ.
ವೈದ್ಯರ ಭೇಟಿಗಾಗಿ 9945434673 ಈ ಸಂಖ್ಯೆಯನ್ನು ಸಂಪರ್ಕಸಿ.
Click this button or press Ctrl+G to toggle between Kannada and English