ದೇಶವನ್ನು ಲೂಟಿ ಹೊಡೆದ ಕಾಂಗ್ರೇಸ್ ಪಕ್ಷ : ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು

11:57 PM, Saturday, September 4th, 2021
Share
1 Star2 Stars3 Stars4 Stars5 Stars
(No Ratings Yet)
Loading...

Rajesh Naikಬಂಟ್ವಾಳ  : ದೇಶವನ್ನು ಲೂಟಿ ಹೊಡೆದ ಕಾಂಗ್ರೇಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಯನ್ನು ಸಹಿಸಲಾರದೆ ಅಪಪ್ರಚಾರದಲ್ಲಿ ತೊಡಗಿದೆ ,ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.

ಅವರು ಗೋಳ್ತಮಜಲು ಗ್ರಾಮದಲ್ಲಿ ಒಟ್ಟು 6 ಬೂತ್ ಗಳ ಬಿಜೆಪಿ ಬೂತ್ ಅಧ್ಯಕ್ಷ ರ ಮನೆಯಲ್ಲಿ ನಾಮಫಲಕ ಅಳವಡಿಸಿದ ಬಳಿಕ ಮಾತನಾಡಿದರು.

ವಿರೋಧ ಪಕ್ಷಗಳ ಟೀಕೆ ಟಿಪ್ಪಣಿಗಳಿಗೆ ಕಿವಿಗೊಡದೆ, ಸಮಯ ವ್ಯಯ ಮಾಡದೆ ಪಕ್ಷ ಸಂಘಟನೆ ಮಾಡಿ, ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಕರ್ತರು ಗ್ರಾಮದ ಪ್ರತಿಮನೆಗೆ ತಲುಪಿಸುವ ಕೆಲಸ ಮಾಡಲು ಕರೆ ನೀಡಿದರು.

ಮುಂದಿನ ಪ್ರತಿ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ತರುವಲ್ಲಿ ಕಾರ್ಯಕರ್ತರ ಶ್ರಮವೇ ಮುಖ್ಯ ಅನಿಟ್ಟಿನಲ್ಲಿ ಒಗ್ಗಟ್ಟಿನಲ್ಲಿ ಸಂಘಟನಾತ್ಮಕ ವಾಗಿ ಕೆಲಸ ಮಾಡಿ ಎಂದರು.
ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಬಲಿಷ್ಠವಾದರೆ ಮಾತ್ರ ಪಕ್ಷ ಸಂಘಟನಾತ್ಮಕ ವಾಗಿ ಬೆಳೆಯಲು ಸಾಧ್ಯ ಎಂದು ಅವರು ಹೇಳಿದರು.

ಹಿರಿಯರ ಹೋರಾಟ, ಕಾರ್ಯಕರ್ತರ ಶ್ರಮದ ಫಲವಾಗಿ ಪ್ರಸ್ತುತ ಹಳ್ಳಿಯಿಂದ ದಿಲ್ಲಿವರೆಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದರು. 1 ಕೋಟಿ 60 ಲಕ್ಷ ವೆಚ್ಚದಲ್ಲಿ ನೆಟ್ಲ ದೇವಸ್ಥಾನದವರೆಗೆ ರಸ್ತೆ ಅಭಿವೃದ್ಧಿ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಈ ರಸ್ತೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಗ್ರಾಮದ ಪ್ರತಿ ಸಮಸ್ಯೆಗಳನ್ನು ಬಗೆಹರಿಸಲು ಗ್ರಾಮದ ಹಿರಿಯರ ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಹಂತಹಂತವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಗೋಳ್ತಮಜಲು ಬೂತ್ ಸಂಖ್ಯೆ 175ರ ಅಧ್ಯಕ್ಷ ಜಗನ್ನಾಥ , ಬೂತ್ ಸಂಖ್ಯೆ 179ರ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಬೂತ್ ಸಂಖ್ಯೆ 178ರ ಅಧ್ಯಕ್ಷ ಪುರುಷೋತ್ತಮ , ಬೂತ್ ಸಂಖ್ಯೆ 177 ರ ಅಧ್ಯಕ್ಷ ವಿನಯ ಕುಲಾಲ್ ಅವರ ಮನೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಬಂಟ್ವಾಳ ಬಿಜೆಪಿ ಅಧ್ಯಕ್ಷ ಅವರ ಜೊತೆಯಲ್ಲಿ ಪಕ್ಷದ ಪ್ರಮುಖರು ಬೇಟಿ ನೀಡಿ ಪಕ್ಷದ ಹಿರಿಯರು ಸಂಘಟನೆಯ ದೃಷ್ಟಿಯಿಂದ ಜಾರಿ ಮಾಡಿದ ಮಹತ್ವಾಕಾಂಕ್ಷೆಯ ಯೋಜನೆ ಯಾದ ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮ ಮಾಡಿದರು.

ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಮಾತನಾಡಿ ಕಾಂಗ್ರೇಸ್ ಅವಧಿಯಲ್ಲಿ ಅಲ್ಪಸಂಖ್ಯಾತರ ಒಲೈಕೆ ರಾಜಕಾರಣ ಮತ್ತು ಅಭಿವೃದ್ಧಿ ಮಾಡಿದ್ದು ಅವರ ಸಾಧನೆಯಾದರೆ, ಅವರ ಅವಧಿಗಿಂತ ಹತ್ತು ಪಾಲು ಅಭಿವೃದ್ಧಿ ಕಾರ್ಯಗಳು ಶಾಸಕ ರಾಜೇಶ್ ನಾಯ್ಕ್ ಅವರ ಅಲ್ಪ ಅವಧಿಯಲ್ಲಿ ಆಗಿದೆ ಎಂದು ಅವರು ಹೇಳಿದರು.

ಅನೇಕ ವರ್ಷಗಳಲ್ಲಿ ಅಭಿವೃದ್ಧಿಯಾಗದೆ ಇದ್ದ ಹಲವಾರು ಕಾಮಗಾರಿಗಳು ಶಾಸಕರ ನೇತ್ರತ್ವದಲ್ಲಿ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಗೋಳ್ತಮಜಲು ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ಬೇಡಿಕೆಯಿದ್ದು ಶಾಸಕರು ಈ ಮನವಿಗೆ ಸ್ಪಂದನೆ ನೀಡಿದ್ದು ಭರವಸೆ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಅಭಿವೃದ್ಧಿ ಯ ಜೊತೆಗೆ ಪಕ್ಷ ಸಂಘಟನೆಯ ಕೆಲಸವನ್ನು ಕಾರ್ಯಕರ್ತರು ಮಾಡಬೇಕಾಗಿದೆ ಎಂದರು.

ಬೂತ್ ಮಟ್ಟದ ಕಾರ್ಯಕರ್ತರೇ ಪಕ್ಷದ ಜೀವಾಳವಾಗಿದ್ದು ಇವರಿಗೆ ಗೌರವ ನೀಡುವ , ಗುರುತಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದು ಅವರು ಹೇಳಿದರು.

ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಬಿಜೆಪಿ ಸರಕಾರದ ಯೋಜನೆ ಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗೋಳ್ತಮಜಲು ಗ್ರಾ.ಪಂ.ಅಧ್ಯಕ್ಷ ಅಭಿಷೇಕ್ ಗ್ರಾ.ಪಂ.ಸದಸ್ಯರಾದ ಪ್ರೇಮ ,ಲಖಿತ ಆರ್ ಶೆಟ್ಟಿ, ಲೀಲಾವತಿ, ಜಯಂತ ಗೌಡ, ಇಲ್ಯಾಸ್ , ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯ ದರ್ಶಿ ಡೊಂಬಯ್ಯ ಅರಳ, ಪ್ರಮುಖ ರಾದ ವಜ್ರನಾಥ ಕಲ್ಲಡ್ಕ,ಮೋನಪ್ಪ ದೇವಸ್ಯ, ರಮನಾಥ ರಾಯಿ, ರವೀಶ್ ಶೆಟ್ಟಿ ಕರ್ಕಳ, ಗಣೇಶ್ ರೈ ಮಾಣಿ, ಚಿದಾನಂದ ಪಟ್ಟೆಕೋಡಿ, ಲೋಕೇಶ್ ಕೃಷ್ಣ ಕೋಡಿ, ಸುದರ್ಶನ ಬಜ, ಮೋಹನ್ ಪಿ.ಎಸ್ , ಪೂವಪ್ಪ ಶೆಟ್ಟಿ, ವಿಶ್ವನಾಥ ಆಳ್ವ , ಮತ್ತಿತರರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English