ಬೆಂಗಳೂರು : ಈ ವರ್ಷ ಗಣೇಶೋತ್ಸವ ಆಚರಣೆಗೆ ಸಾಕಷ್ಟು ವಿನಾಯಿತಿ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು,”ಮುಖ್ಯಮಂತ್ರಿಗಳೊಂದಿಗೆ ಗಣೇಶೋತ್ಸವ ಆಚರಣೆ ಕುರಿತಂತೆ ಚರ್ಚೆ ನಡೆಸಲಾಗಿದೆ. ಈ ಬಾರಿ ಹೆಚ್ಚಿನ ಸಡಿಲಿಕೆ ಮಾಡಲು ಕೋರಿಕೊಳ್ಳಲಾಗಿದೆ. ಭಾನುವಾರ ಮುಖ್ಯಮಂತ್ರಿಗಳು ಈ ಕುರಿತು ನಿರ್ಧಾರ ಕೈಗೊಳ್ಳಲಿದ್ದು, ಕೋವಿಡ್ ನಿಯಮಗಳನ್ನ ಪಾಲಿಸುವುದರ ಜೊತೆಗೆ ಕಳೆದ ವರ್ಷಕ್ಕಿಂತ ಹೆಚ್ಚಿನ ವಿನಾಯಿತಿ ನೀಡಲಾಗುವುದು ಎಂಬ ನಂಬಿಕೆ ನನಗೆಯಿದೆ”, ಎಂದು ತಿಳಿಸಿದರು.
‘ಕೋವಿಡ್ ಔಷಧಿ ಸಂಗ್ರಹಣೆ ಕುರಿತಂತೆ ಮಾತನಾಡಿದ ಸಚಿವರು,”ಕಳೆದ ಎರಡನೇ ಅಲೆಯ ವೇಳೆ ನಮಗೆ ಔಷಧಿಗಳ ಕೊರತೆ ಕಾಡಿತ್ತು. ಹೀಗಾಗಿ ಸಂಭವನೀಯ ಮೂರನೇ ಅಲೆ ಎದುರಿಸಲು ಅಗತ್ಯ ಔಷಧಿಗಳನ್ನ ಸಂಗ್ರಹಿಸಿಟ್ಟುಕೊಳ್ಳುವ ಕೆಲಸ ನಡೆದಿದೆ’, ಎಂದು ತಿಳಿಸಿದರು.
‘ನರೇಂದ್ರ ಮೋದಿ ಸರ್ಕಾರ ರಾಜ್ಯಗಳಿಗೆ ನೀಡಿರುವ ಅನುದಾನ ಈ ಹಿಂದೆ ಮನಮೋಹನ್ ಸಿಂಗ್ ಸರ್ಕಾರ ನೀಡಿದ್ದಕ್ಕಿಂತ ಹೆಚ್ಚಿನದ್ದಾಗಿದೆ ಎಂಬುದರ ಕುರಿತು ಬರುವ ಅಧಿವೇಶನದಲ್ಲಿ ತಿಳಿಸಿಕೊಡಲಾಗುವುದು’, ಎಂದರು.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಚಿಕ್ಕಲ್ಲಸಂದ್ರ ವಾರ್ಡ್ ನಲ್ಲಿ ಕುವೆಂಪು ಉದ್ಯಾನವನ, ಶ್ರೀ ಸರ್ ಎಂ ವಿಶ್ವೇಶ್ವರಯ್ಯ ಉದ್ಯಾನವನ, ನಾಡಪ್ರಭು ಕೆಂಪೇಗೌಡ ಉದ್ಯಾನವನ ಗಳನ್ನು ಅತ್ಯಾಧುನಿಕವಾಗಿ ನವೀಕರಿಸಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾರ್ಪಾಡು ಮಾಡಲಾಗಿದ್ದು ಇಂದು ಸಚಿವ ಆರ್ ಅಶೋಕ ಉದ್ಘಾಟನೆ ಮಾಡಿದರು.
Click this button or press Ctrl+G to toggle between Kannada and English