ಷರತ್ತುಬದ್ಧ ಗಣೇಶೋತ್ಸವಕ್ಕೆ ಅನುಮತಿ: ಸಚಿವ ಆರ್ ಅಶೋಕ

9:27 PM, Monday, September 6th, 2021
Share
1 Star2 Stars3 Stars4 Stars5 Stars
(No Ratings Yet)
Loading...

R Ashoka ಬೆಂಗಳೂರು :  ಗಣೇಶ ವಿಸರ್ಜನೆಗೆ ಈ ಬಾರಿ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ವಿಸರ್ಜನೆಯ ಜಾಗದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿರುತ್ತದೆ. ವಿಸರ್ಜನೆ ಮಾಡುವವರು ವಿಗ್ರಹವನ್ನ ನಿರ್ದಿಷ್ಟ ಸ್ಥಳದಲ್ಲಿ ಇರಿಸಬೇಕು. ಸಂಘಟಕರಿಗೆ ವಿಸರ್ಜನೆಗೆ ಅವಕಾಶ ಇರುವದಿಲ್ಲ. ನುರಿತ ಈಜುಗಾರರನ್ನ ಪಾಲಿಕೆ ವತಿಯಿಂದ ನೇಮಿಸಲಾಗಿದ್ದು, ಅವರೇ ಈ ಕಾರ್ಯವನ್ನು ಕೈಗೊಳ್ಳುತ್ತಾರೆ. ವಿಸರ್ಜನೆಯ ತಂಡದಲ್ಲಿ 20ಕ್ಕಿಂತ ಹೆಚ್ಚು ಜನ ಪಾಲ್ಗೊಳ್ಳ ಕೂಡದು. ಅದನ್ನ ಎಸಿಪಿ ದರ್ಜೆಯ ಅಧಿಕಾರಿ ಇದರ ನಿಗಾ ವಹಿಸಲಿದ್ದಾರೆ ಎಂದು  ಕಂದಾಯ ಸಚಿವ ಆರ್ ಅಶೋಕ ತಿಳಿಸಿದರು.

“ಗಣೇಶನನ್ನ ಪ್ರತಿಷ್ಠಾಪಿಸಿರುವ ಕಡೆಗಳಲ್ಲಿ ಪಾಲಿಕೆ ವತಿಯಿಂದ ಲಸಿಕೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಕೂಡಾ ಹಮ್ಮಿಕೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಕೋವಿಡ್ ಹೆಚ್ಚಾಗದಂತೆ ಕ್ರಮವಹಿಸಲಾಗುವುದು. ಸಾರ್ವಜನಿಕವಾಗಿ ಕೇವಲ ಐದೇ ದಿನ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಮೀರುವಂತಿಲ್ಲ”, ಎಂದು ಸ್ಪಷ್ಟಪಡಿಸಿದರು.

“ವಾರ್ಡ್‍ಗೆ ಒಂದೇ ಕಡೆಗೆ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ. ಅದಕ್ಕಿಂತ ಹೆಚ್ಚಿನ ಬೇಡಿಕೆ ಬಂದರೆ ಅದನ್ನು ಸ್ಥಳೀಯ ಆಡಳಿತ ನಿರ್ಧರಿಸುತ್ತದೆ. ಅಪಾರ್ಟ್‍ಮೆಂಟ್ ಅಸೋಸಿಯೇಷನ್ ಅವರು ಕೂಡಾ ಸರಳವಾಗಿ ಆಚರಿಸುವ ಕುರಿತು ತಿಳಿಸಿದ್ದಾರೆ. ವಿಘ್ನಗಳು ಬರದಂತೆ ಪೂಜೆ ಮಾಡಲಾಗುತ್ತಿದೆ. ಎಲ್ಲವೂ ಒಳಿತಾಗಲಿದೆ. ಸಕಾರಾತ್ಮಕವಾಗಿ ಯೋಚನೆ ಮಾಡೋಣ” ಎಂದು ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English