65 ಕೋಟಿ ಜನರಿಗೆ ಉಚಿತ ವ್ಯಾಕ್ಸಿನೇಷನ್‌ ನೀಡಿದ ಪ್ರಧಾನಿ ಮೋದಿಯವರ ಸಾಧನೆ ಜಗತ್ತಿನಲ್ಲಿ ಯಾರು ಮಾಡಿಲ್ಲ : ರಾಜೇಶ್ ನಾಯ್ಕ್

10:44 PM, Monday, September 6th, 2021
Share
1 Star2 Stars3 Stars4 Stars5 Stars
(No Ratings Yet)
Loading...

Rajesh Naik ಬಂಟ್ವಾಳ  : ಪಕ್ಷವನ್ನು ತಾಯಿ ಸ್ಥಾನದಲ್ಲಿರಿಸಿ ಸಂಘಟನೆಯನ್ನು ಮಾಡಿ ದೇಶಕ್ಕಾಗಿ ಹೋರಾಟ ನಡೆಸಿದ ಕಾರ್ಯಕರ್ತರ ಶ್ರಮದ ಫಲವಾಗಿ ಇಂದು ಭಾರತ ಸಶಕ್ತ ವಾಗಿದೆ, ಬಾಳ್ತಿಲ ಗ್ರಾಮದ ರೀತಿಯಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡಿದರೆ ಪ್ರತಿ ಗ್ರಾಮವೂ ಬಾಳ್ತಿಲ ಗ್ರಾಮವಾಗುತ್ತದೆ, ಹಳ್ಳಿಯಿಂದ ದಿಲ್ಲಿವರೆಗೆ ಮುಂದಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿ ಅಧಿಕಾರ ಪಡೆಯಬೇಕು,ಈ ನಿಟ್ಟಿನಲ್ಲಿ ಪಕ್ಷವನ್ನು ಸಂಘಟನಾತ್ಮಕವಾಗಿ ಬೆಳೆಸಿ, ಚುನಾವಣಾ ರೂಪುರೇಷೆಗಳನ್ನು ತಯಾರಿಸುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.

ಅವರು ಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ 5 ಬೂತ್ ಗಳ ಅಧ್ಯಕ್ಷರುಗಳ ಮನೆಗೆ ಬೇಟಿ ನೀಡಿ ಅಧ್ಯಕ್ಷ ರಿಗೆ ಗೌರವ ಸಲ್ಲಿಸಿ ಮನೆಗೆ ನಾಮಫಲಕ ಅನಾವರಣ ಮಾಡಿದ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ದೀನ್ ದಯಾಳ್ ಅವರ ಅಂತ್ಯೋದಯದ ಕಲ್ಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ನಾಯಕರು ಸಾಕಾರಗೊಳಿಸಿದ್ದಾರೆ. ನಮ್ಮ ಕಾಲದಲ್ಲಿ ಯಾವುದೇ ಗೊಂದಲವಿಲ್ಲದೆ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಾಗುತ್ತಿದೆ, ಆರ್ಟಿಕಲ್ಸ್ 370 ರದ್ದು ಅಗಿದೆ ಎಂಬುದಕ್ಕಿಂತ ದೊಡ್ಡ ಸಂತೋಷ ಇನ್ನೊಂದಿಲ್ಲ ಎಂದು ಅವರು ಹೇಳಿದರು.

65 ಕೋಟಿ ಜನರಿಗೆ ಉಚಿತ ವ್ಯಾಕ್ಸಿನೇಷನ್‌ ನೀಡಿದ ಪ್ರಧಾನಿ ಮೋದಿಯವರ ಸಾಧನೆ ಜಗತ್ತಿನಲ್ಲಿ ಯಾರು ಮಾಡಿಲ್ಲ ಎಂದು ಅವರು ಹೇಳಿದರು. ಹಿರಿಯರ ಚಿಂತನೆಗಳನ್ನು, ಕನಸುಗಳನ್ನು ನನಸು ಮಾಡುವ ಮಹತ್ಕಾರ್ಯ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವುದು ನಮ್ಮ ಭಾಗ್ಯವೇ ಸರಿ ಎಂದರು. ಕಳೆದ 70 ವರ್ಷಗಳ ಕಾಂಗ್ರೇಸ್ ಆಡಳಿತ ಹಾಗೂ ಪ್ರಧಾನಿ ಮೋದಿಯವರ 7 ,ವರ್ಷದ ಅಧಿಕಾರದ ಅವಧಿಯ ಸಾಧನೆ ತುಲನೆ ಮಾಡಿದರೆ ಗೊತ್ತಾಗುತ್ತದೆ. ಭಾರತವನ್ನು ಜಗತ್ತಿನಲ್ಲಿ ಬಲಿಷ್ಠ ರಾಷ್ಟ್ರ ಮಾಡಿದ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.

ಬೂತ್ ಸಂಖ್ಯೆ 155 ಇದರ ಅಧ್ಯಕ್ಷ ಹಿರಣ್ಮಯಿ , ಬೂತ್ ಸಂಖ್ಯೆ 156 ರ ಅಧ್ಯಕ್ಷ ಶಿವರಾಜ್ ಶೆಟ್ಟಿ, ಬೂತ್ ಸಂಖ್ಯೆ 157 ರ ಅಧ್ಯಕ್ಷ ದೀಪಕ್ ಶೆಟ್ಟಿ, ಬೂತ್ ಸಂಖ್ಯೆ 158 ರ ಅಧ್ಯಕ್ಷ ರವಿ ಬೈಲು, ಬೂತ್ ಸಂಖ್ಯೆ 159 ರ ಅಧ್ಯಕ್ಷೆ ಲಕ್ಮೀಗೋಪಾಲ ಆಚಾರ್ಯ ಅವರ ಮನೆಗೆ ಶಾಸಕರು ಬಂಟ್ವಾಳ ಬಿಜೆಪಿ ಸಮಿತಿ ಅಧ್ಯಕ್ಷ ಹಾಗೂ ಪ್ರಮುಖರು ಬೇಟಿ ನೀಡಿ ನಾಮಫಲಕ ಅನಾವರಣ ಮಾಡಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English