ಮಂಗಳೂರು : ದ.ಕ.ಜಿಲ್ಲಾ ಜೆಡಿಎಸ್ ಪಕ್ಷದ ಸದಸ್ಯತ್ವ 2021-22ನೇ ಸಾಲಿನ ನೊಂದಾವಣಿ ಚಾಲನೆಯ ಕಾರ್ಯಕ್ರಮವು ಜಿಲ್ಲಾ ಉಸ್ತುವಾರಿ ಶ್ರೀ ಸುಧಾಕರ್ ಶೆಟ್ಟಿಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀಯುತರು ಮಾತನಾಡಿ ಪಕ್ಷದ ಸದಸ್ಯತ್ವ ಹಾಗೂ ಕ್ರಿಯಾತ್ಮಕ ಸದಸ್ಯತ್ವ ಮೂಲಕ ಪಕ್ಷದ ಸದಸ್ಯರನ್ನು ನೊಂದಾವಣಿ ಮಾಡಿ ನಂತರ ಭೂತ್ ಮಟ್ಟದಿಂದ ತಾಲೂಕು ಮಟ್ಟದ ಪದಾಧಿಕಾರಿಗಳನ್ನು ಹಾಗೂ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಿ ಆನಂತರ ಜಿಲ್ಲಾ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಇದೀಗ ಕೆಲವೇ ದಿನಗಳಲ್ಲಿ ಜಿಲ್ಲಾ ಅಡಾಹಕ್ ಸಮಿತಿಯನ್ನು ರಚಿಸಿ ಜಿಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಿಸಲಾಗುವುದು ಎಂದು ತಿಳಿಸಿದರು. ಈ ತನಕ ಭೂತ್ ಮಟ್ಟದಿಂದ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧ್ಯಕ್ಷರು ಹಾಗೂ ಪ್ರಮುಖರನ್ನು ಗುರುತಿಸಿ ಅವರನ್ನು ಗೌರವಿಸಲಾಗುವುದು ಹಾಗೂ ಪಕ್ಷದಿಂದ ಬೇಸರಗೊಂಡು ತಟಸ್ತರಾಗಿ ಇರುವ ಪಕ್ಷದ ನಿಷ್ಟಾವಂತ ಕಾರ್ಯಕರ್ತರನ್ನು ಪಕ್ಷದಲ್ಲಿ ಸಕ್ರೀಯರಾಗಿ ಪಾಲ್ಗೊಳ್ಳುವಂತೆ ಮಾಡುವುದು ತನ್ನ ಆದ್ಯತೆ ಎಂದು ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಕುಂಇ‘ ಮಾತನಾಡಿ ಕಳೆದ ಆರು ವರ್ಷಗಳಿಂದ ತಾನು ಪ್ರಮಾಣಿಕವಾಗಿ ಪಕ್ಷದ ಬೆಳವಣಿಗೆಗೆ ದುಡಿದಿದ್ದು ತನಗೆ ಸಹಕಾರ ಕೊಟ್ಟ ಎಲ್ಲಾ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರನ್ನು ಸ್ಮರಿಸಿ ತಾನು ಸ್ವಯಿಚ್ಚೆಯಿಂದ ಈ ಹುದ್ದೆಯಿಂದ ನಿರ್ಗಮಿಸುವುದಾಗಿ ತಿಳಿಸಿದರು. ಮಾತ್ರವಲ್ಲ ಪಕ್ಷಗೋಸ್ಕರ ಪ್ರಮಾಣಿಕವಾಗಿ ಕೆಲಸ ಮಾಡುವುದಾಗಿ ಭರವಸೆಯನ್ನು ಕೊಟ್ಟರು.
ಪಕ್ಷದ ಇನ್ನೋರ್ವ ನಾಯಕ ಎಂ.ಬಿ.ಸದಾಶಿವ ಜಿಲ್ಲೆಯಲ್ಲಿ ಕಳೆದ 43 ವರ್ಷಗಳಿಂದ ಪಕ್ಷವು ಬೆಳೆದುಬಂದ ರೀತಿಯನ್ನು ಸವಿಸ್ತಾರವಾಗಿ ತಿಳಿಸಿದರು. ಪಕ್ಷದ ವೀಕ್ಷಕ ಸಮಿತಿಯ ಸಂಚಾಲಕರಾದ ಶ್ರೀ ಜಾಕೆಮಾದವ ಗೌಡ ಸ್ವಾಗತಿಸಿ ಪ್ರವೀಣ್ ಚಂದ್ರ ಜೈನ್ ಧನ್ಯವಾದಗೈದರು. ವಸಂತ ಪೂಜಾರಿ ನಿರೂಪಿಸಿದರು.
ಪಕ್ಷದ ನಾಯಕರಾದ ಸುಶೀಲ್ ನೊರೊನ್ಹ, ಇಕ್ಬಾಲ್ ಮುಲ್ಕಿ, ರತ್ನಾಕರ್ ಸುವರ್ಣ, ಅಬೂಬಕರ್ ನಾಟೆಕಲ್, ಅಕ್ಶಿತ್ ಸುವರ್ಣ, ಡಿ.ಪಿ.ಹಂಮಬ್ಬ, ಶ್ರೀಮತಿ ಸುಮತಿ ಹೆಗ್ಡೆ, ರಾಜಶ್ರೀ ಹೆಗ್ಡೆ, ಅಜೀಜ್ ಮಲಾರ್, ಧನರಾಜ್,ಅಜೀಜ್ ಕುದ್ರೋಳಿ, ದಯಕರ್ ಆಳ್ವ, ಇಬ್ರಾಹಿಂ ಗೋಳಿಕಟ್ಟೆ,ದಿವಾಕರ್ ತೊಡಾರ್, ನಜೀರ್ ಉಳ್ಳಾಲ್, ಎನ್.ಪಿ.ಪುಷ್ಪರಾಜನ್, ಫರೂಕ್ ಉಳ್ಳಾಲ್, ಅಶ್ರಫ್ ಕಲ್ಲಿಗೆ, ಮೀರಾ ಸಾಹೇಬ್ ತಮ್ಮ ಅನಿಸಿಕೆಯನ್ನು ಮಂಡಿಸಿದರು. ಅಬೂಬಕರ್, ಫ್ರಾನ್ಸಿಸ್ ಫೆರ್ನಾಂಡಿಸ್, ಹರಿಪ್ರಸಾದ್ ಶೆಟ್ಟಿ, ಫೈಜಲ್, ಹರೀಶ್ ಕೊಟ್ಟಾರಿ, ಕಲೀಲ್, ಕುಲ್ದೀಪ್, ಬಶೀರ್, ಭಾರತಿ ಪುಷ್ಪರಾಜನ್, ಲತೀಫ್ ವಳಚಿಲ್, ಹಮೀದ್ ಬೆಂಗ್ರೆ, ಮೊಹಮ್ಮದ್, ಕನಕದಾಸ್ ಕುಳೂರ್, ರವೀಂದ್ರ ಉಳ್ಳಾಲ್, ಸಾಲಿ ಹರೇಕಳ್, ಶ್ರೀಮತಿ ಭವಾನಿ ಜೋಗಿ,ಹರ್ಶಿತ, ಶಾರದ, ಪ್ರೀಯ ಸಾಲಿಯಾನ್, ಶ್ರೀಮಣಿ, ಕೈರುನಿಸಾ, ನಿರ್ಮಲ, ವೀಣಾ ಶೆಟ್ಟಿ, ವಿನ್ಸೆಂಟ್ ಕುಳೂರ್, ನವೀನ್, ಮೊಹಮ್ಮದ್ ಅಲ್ತಾಫ್,ನವ್ಶಿಕ್, ಗುರುಪ್ರಸಾದ್, ಶಿವಾನಂದ ಕದ್ರಿ ಮುಂತಾದ ನಾಯಕರು ಹಾಗೂ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕುಸುಮ ರಾವ್ ಕುಲಶೇಖರ ಪಕ್ಷಕ್ಕೆ ಸೇರ್ಪಡೆಯಾದರು. ಕಾರ್ಯಕ್ರಮವನ್ನು ಆಯೋಜಿಸಿದ ಶ್ರೀಮತಿ ಸುಮತಿ ಹೆಗ್ಡೆರವರನ್ನು ಗೌರವಿಸಲಾಯಿತು.
Click this button or press Ctrl+G to toggle between Kannada and English