ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ, ಮೇರಿ ಮಾತೆಯ ಜನ್ಮ ದಿನವಾದ ಮೊಂತಿ ಹಬ್ಬವನ್ನು ಬುಧವಾರ ಸರಳವಾಗಿ ಆಚರಿಸಲಾಯಿತು.
ಈ ಹಬ್ಬವನ್ನು ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆಚರಿಸುತ್ತಾರೆ. 9 ದಿನಗಳ ನವೇನಾ ಪ್ರಾರ್ಥನೆಯ ಬಳಿಕ ಮಾತೆ ಮೇರಿಯ ಜನ್ಮ ದಿನವಾದ ಮೊಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಅಂದು ಚರ್ಚ್ ಗಳಲ್ಲಿ ತೆನೆ ವಿತರಣೆಯು ನಡೆಯುತ್ತದೆ
ಕೊರೊನಾ ಹಿನ್ನೆಲೆಯಲ್ಲಿ ಚರ್ಚ್‌ನ ಒಳಗೆ ಸೀಮಿತ ಸಂಖ್ಯೆಯ ಜನರಿಗೆ ಮಾತ್ರವೇ ಪ್ರವೇಶಾವಕಾಶ ನೀಡಲಾಗಿದ್ದು, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯವಾಗಿತ್ತು.
ಮಕ್ಕಳಿಂದ ಮೆರವಣಿಗೆ, ಹೂವಿನ ಅರ್ಪಣೆ ಸಹಿತ ಎಲ್ಲಾ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿತ್ತು. ಆದರೆ, ಮೇರಿ ಮಾತೆಗೆ ಪ್ರತ್ಯೇಕವಾಗಿ ಹೂವುಗಳನ್ನು ಅರ್ಪಿಸಲು ಕೆಲವರಿಗೆ ಮಾತ್ರವೇ ಅವಕಾಶ ನೀಡಲಾಗಿತ್ತು.
Click this button or press Ctrl+G to toggle between Kannada and English